ಕಳೆದ ವಾರ ನಾಗಿನಿ 2 ಸೀರಿಯಲ್ ಸಡನ್ನಾಗಿ ಟಿಆರ್‌ಪಿ ಏರಿಸಿಕೊಂಡು ಟಾಪ್ 5 ಸೀರಿಯಲ್‌ಗಳಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿತು. ಕಳೆದ ಕೆಲವು ವಾರಗಳಿಂದ ಟಾಪ್ 5 ಸೀರಿಯಲ್‌ಗಳಲ್ಲಿ ತನ್ನ ಸ್ಥಾನ ಭದ್ರ ಮಾಡಿಕೊಂಡಿದ್ದ ಮಂಗಳಗೌರಿ ಮದುವೆ ಸೀರಿಯಲ್ ನಾಗಿನಿ ಅಬ್ಬರಕ್ಕೆ ಟಾಪ್ 5  ಪ್ಲೇಸಿನಿಂದ ಹಿಂದೆ ಸರಿದಿದೆ. ಅದು ಹೇಗೆ ಅಂತ ನೋಡಿದ್ರೆ ಕಾರಣ ಹೊಳೆಯುತ್ತೆ. ಈ ಪರಿ ಟಿಆರ್‌ಪಿ ಏರಿಸಿರೋದು ದೀಪಿಕಾ ದಾಸ್ ಎಂಬ ಬೆಕ್ಕಿನ ಕಣ್ಣಿನ ಸುಂದರಿ ಅಂತ. ದುರಾದೃಷ್ಟವಶಾತ್ ಆಕೆ ಈ ಬಾರಿ ಎಂಟ್ರಿ ಕೊಟ್ಟಿದ್ದು ಅತಿಥಿ ಪಾತ್ರದಲ್ಲಿ. ಈಗಾಗಲೇ ಈಕೆಯ ಭಾಗ ಮುಗಿದಿದೆ. ಆಮೇಲೆ ದೀಪಿಕಾ ಈ ಸೀರಿಯಲ್‌ನಲ್ಲಿ ಇರಲ್ಲ. ಆಗ ಮತ್ತೆ TRP ಇಳಿಯೋ ಸಾಧ್ಯತೆ ಇದೆ ಅಂತಾರೆ ಈ ಲೆಕ್ಕಾಚಾರ ಬಲ್ಲವರು. 

ದೀಪಿಕಾ ದಾಸ್ ಅವರ ಲುಕ್ಕು ಹಾಗೂ ಲಕ್ಕೇ ಹಾಗಿದೆ. ಮನೆಯಲ್ಲಿ ಈಕೆ ಅಪ್ಪನ ಮುದ್ದಿನ ಮಗಳು. ಈಕೆಯ ಅಣ್ಣ ಹೇಳುವಂತೆ, ಅಪ್ಪನಿಗೆ ಮಗಳ ಮೇಲೆ ಎಷ್ಟು ಪ್ರೀತಿ ಅಂದರೆ ಅಣ್ಣ ತಂಗಿ ನಡುವೆ ಜಗಳ ಆದರೆ ಅಪ್ಪ ತಂಗಿ ಅಂದರೆ ಮಗಳ ಪರ. ಕೆಲವೊಮ್ಮೆ ಇದರಲ್ಲಿ ದೀಪಿಕಾ ತಪ್ಪೇ ಇದ್ದರೂ, ಅಪ್ಪ ಬೈದಾಗ ಆಕೆಯ ಕಣ್ಣಲ್ಲಿ ಹೌದೋ ಅಲ್ಲವೋ ಅಂತ ನೀರು ಕಾಣಿಸಿಕೊಂಡರೆ ಅಪ್ಪನಿಗೆ ಬೇಜಾರಾಗಿ ಅವರು ಪುನಃ ಮಗನಿಗೇ ಬೈಯ್ಯೋದೂ ಇತ್ತು. ಅವಳು ತಪ್ಪು ಮಾಡಿದ್ರೂ ನಂಗೇ ಬೈಗುಳನಾ ಅಂತ ಅಣ್ಣ ತಿರುಗಿಬೀಳೋದು ಕಾಮನ್ ಆಗಿತ್ತು. ಅಷ್ಟು ಗಾಢವಾಗಿ ತನ್ನನ್ನು ಪ್ರೀತಿಸುತ್ತಿದ್ದ ಅಪ್ಪ ತೀರಿಕೊಂಡಾಗ ದೀಪಿಕಾ ಸ್ಥಿತಿ ಹೇಗಾಗಬೇಡ! ಆದರೆ ಈಕೆ ಎಂಥಾ ಜವಾಬ್ದಾರಿಯ ಹುಡುಗಿ ಅಂದರೆ ತನ್ನ ತೀವ್ರ ನೋವನ್ನು ನುಂಗಿಕೊಂಡೇ ಇತರರನ್ನೂ ಸಮಾಧಾನ ಮಾಡಿದರು. 


ಇತರರ ನೋವಿಗೆ ಸದಾ ಸ್ಪಂದಿಸುವ ಗುಣ ಇರೋ ದೀಪಿಕಾ ತನ್ನ ನೋವನ್ನು ಇತರರ ಬಳಿ ಹಂಚಿಕೊಳ್ಳೋದು ಕಡಿಮೆ. ಯಾವುದೇ ನೋವು ಬಂದರೂ ಅದನ್ನು ನುಂಗಿ ಸಮಾಧಾನವಾಗಿರುವಂತಿರುತ್ತಾರೆ. ಅವರ ಕೆಲವೊಂದು ಗುಣಗಳು ಬಿಗ್ ಬಾಸ್ ನಲ್ಲೂ ಸಾಕಷ್ಟು ಮೆಚ್ಚುಗೆ ಗಳಿಸಿದ್ದವು. ಅದರಲ್ಲೂ ರವಿ ಬೆಳಗೆರೆಯವರ ಸ್ಮೋಕ್ ಮಾಡದಂತೆ ತಡೆಯುತ್ತಿದ್ದ, ಅವರನ್ನು ಮಗಳಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ದೀಪಿಕಾ ಬಗ್ಗೆ ಎಲ್ಲರೂ ಮೆಚ್ಚುಗೆಯಿಂದ ನೋಡುತ್ತಿದ್ದರು. 

ಯಪ್ಪೋ! ಆಶಿಕಾ ರಂಗನಾಥ್ ಅಕ್ಕ ಇಷ್ಟೊಂದು ಹಾಟ್ ಆ್ಯಂಡ್ ಕ್ಯೂಟ್‌ ಆ? ...

ಇದರ ಹೊರತಾಗಿ ನಟನೆಯಲ್ಲಿ ದೀಪಿಕಾ ಅವರದು ಎತ್ತಿದ ಕೈ. ಪಳಗಿದ ಅಭಿನಯ. ನಾಗಿನಿಯ ಪಾತ್ರವಂತೂ ಆಕೆಗೆ ಭಾರೀ ಹೆಸರು ತಂದುಕೊಟ್ಟಿತ್ತು. ಆಮೇಲೆ ಬಿಗ್ ಬಾಸ್, ಸಿನಿಮಾ ಅಂತೆಲ್ಲ ಹೋದರೂ ಜನಕ್ಕೆ ಈಗಲೂ ಈಕೆ ನಾಗಿನಿ ಸೀರಿಯಲ್ ನ ಅಮೃತಾಳೇ. ದೀಪಿಕಾ ಹೇಳಿಕೊಂಡಂತೆ ಈಕೆಗೆ ಸಾಮಾಜಿಕ ಪಾತ್ರಗಳಿಗಿಂತ ಐತಿಹಾಸಿಕ ಪಾತ್ರ, ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಬೇಕು ಅನ್ನೋ ಆಸೆ. ದೀಪಿಕಾ ಅಭಿನಯದ 'ಪದ್ಮಾವತ್' ರೀತಿಯ ಉಡುಗೆಯಲ್ಲಿ ಮಿಂಚುವ ಫೊಟೋವೊಂದನ್ನು ಪೋಸ್ಟ್ ಮಾಡಿ ತನಗೆ ಈ ಬಗೆಯ ಪಾತ್ರ ಮಾಡುವ ಆಸೆ ಅಂದಿದ್ದಳು. ಜೊತೆಗೆ ಮಣಿಕರ್ಣಿಕಾದಲ್ಲಿ ಕಂಗನಾ ಮಾಡಿರೋ ಪಾತ್ರ, ಅನುಷ್ಕಾ ಶೆಟ್ಟಿ ಮಾಡಿರುವ ರೀತಿಯ ಐತಿಹಾಸಿಕ ಪೌರಾಣಿಕ ಪಾತ್ರಗಳು ಸಿಕ್ಕರೆ ಬಣ್ಣ ಹಚ್ಚಲು ಸದಾ ಸಿದ್ಧ ಅನ್ನುವುದು ಈಕೆಯ ಮಾತು. ಈಕೆ ಯಾವ ಮಟ್ಟಿಗೆ ಅಂಥಾ ಪಾತ್ರಗಳ ವ್ಯಾಮೋಹಿ ಅನ್ನೋದಕ್ಕೆ ನಾಗಿನಿಯಂಥಾ ಸೀರಿಯಲ್ ನಲ್ಲಿ ಈಕೆ ಮಾಡಿರುವ ಮಿಥಿಕಲ್ ಶೇಡ್ ಇರೋ ಅಮೃತಾ ಪಾತ್ರವೇ ಸಾಕ್ಷಿ. 

ಸದ್ದಿಲ್ಲದೆ ಹಸೆಮಣೆ ಏರಲು ಮುಂದಾದ ಕನ್ನಡದ ಖ್ಯಾತ ಕಿರುತೆರೆ ಕಲಾವಿದೆ ...

ದೀಪಿಕಾರಂತೆ ಪಾತ್ರವೇ ತಾನಾಗಿ ಅಭಿನಯಿಸುವವರು ಬಹಳ ಕಡಿಮೆ. ಈಕೆಯ ಡೆಡಿಕೇಶನ್, ಅಭಿನಯ, ಜನರಿಗೆ ಈಕೆಯ ಬಗ್ಗೆ ಇರುವ ಪ್ರೀತಿ ಎಲ್ಲವೂ ನಾಗಿನಿ ಸೀರಿಯಲ್ ಅನ್ನು ಮತ್ತೆ ಹಳಿಗೆ ತಂದು ನಿಲ್ಲಿಸಿದೆ. ಆದರೆ ಪ್ರತೀ ಸಲ ಟಿ ಆರ್ ಟಿ ಇಳಿದಾಗ ಈಕೆಯನ್ನು ಕರೆಸೋ ಬದಲು ಈಕೆಯ ಟ್ರ್ಯಾಕ್ ನಲ್ಲಿ ಹೊಸದೊಂದು ಸ್ಟೋರಿ ಡೆವಲಪ್ ಮಾಡಿದ್ರೆ ಒಳ್ಳೇದಲ್ವಾ ಅನ್ನೋ ಸಲಹೆ ಪ್ರೇಕ್ಷಕರದ್ದು. ಸದ್ಯ ಕೆಲಸವಿಲ್ಲದೇ ಕೂತಿರೋ ದೀಪಿಕಾಗೂ ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡಂತಾಗುತ್ತದೆ. ಜೊತೆಗೆ ಜನರಿಗೂ ಭರಪೂರ ಮನರಂಜನೆ ಸಿಗುತ್ತದೆ. ಆದ್ರೆ ಎಲ್ಲವೂ ಚಾನೆಲ್ ಕೈಯಲ್ಲಿದೆ ಅನ್ನೋದಂತೂ ಸತ್ಯ. 

ರಚಿತಾ ರಾಮ್ ಕಾರ್ಟೂನ್ ಬಂದ್ರೆ ಹೇಗಿರುತ್ತೆ..? ಡಿಂಪಲ್ ಕ್ವೀನ್ ಲುಕ್ ನೋಡಿ ...