ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಕನ್ನಡಿಗರ ನೆಚ್ಚಿನ ನಟಿ. ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟಿ ಈಕೆ. ಇವರು ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿರ್ತಾರೆ. ಫ್ಯಾನ್ಸ್ ಜೊತೆ ಟಚ್‌ನಲ್ಲಿರ್ತಾರೆ.

ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯರಲ್ಲೊಬ್ಬರಾಗಿರೋ ರಚಿತಾ ರಾಮ್‌ಗೆ ಕಾಲಿವುಡ್‌ನಲ್ಲಿಯೂ ಬೇಡಿಕೆ ಇದೆ. ಡಿಂಪಲ್ ಕ್ವೀನ್ ಸೋಷಿಯಲ್ ಮೀಡಿಯಾದಲ್ಲಿ ಚಂದದ ಫೋಟೋಸ್ ಶೇರ್ ಮಾಡ್ತಿರ್ತಾರೆ.

ಪಿಂಕ್ ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಚಿತಾ, ಸಡನ್ನಾಗಿ ನೆನಪಾಗಿದ್ಯಾಕೆ ಮದರ್ ಥೆರೆಸಾ

ಇತ್ತೀಚೆಗೆ ರಚಿತಾ ರಾಮ್ ಚಂದದ್ದೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಫೋಟೋ ಶೂಟ್, ವಿಡಿಯೋ, ಸೆಲ್ಫೀಗಳನ್ನು ಫ್ಯಾನ್ಸ್ ಜೊತೆ ತಪ್ಪದೆ ಶೇರ್ ಮಾಡಿಕೊಳ್ಳೋ ನಟಿಯರಲ್ಲಿ ಇವರೂ ಒಬ್ಬರು.

ರಚಿತಾ ರಾಮ್ ತಮ್ಮ ಕಾರ್ಟೂನ್ ವರ್ಷನ್ ಹೇಗಿರುತ್ತೆ ಅಂತ ತೋರಿಸಿದ್ದಾರೆ. ಕ್ಯೂಟ್ ಆಗಿದ್ಯಲ್ವಾ..? ಎಂದು ತಮ್ಮ ಬಗ್ಗೆ ತಾವೇ ಫ್ಯಾನ್ಸ್‌ಗೆ ಪ್ರಶ್ನೆಯನ್ನೂ ಕೇಳಿದ್ದಾರೆ. ಅಂತೂ ಈ ಲುಕ್ ನಟಿಗೆ ತುಂಬಾ ಇಷ್ಟವಾದ ಹಾಗಿದೆ. ನೋಡೋಕು ಚೆನ್ನಾಗಿದೆ ರಚಿತಾ ರಾಮ್ ಕಾರ್ಟೂನ್ ವರ್ಷನ್.