Asianet Suvarna News Asianet Suvarna News

ಪಾರ್ಕ್​ನಲ್ಲಿ ಪೊಲೀಸಪ್ಪನ ಕೈಲಿ ಸಿಕ್ಕಾಕ್ಕೊಂಡಿದ್ವಿ! ಬೈಯೋಕೆ ಬಂದ ಆತ ಅಪರ್ಣಾಳನ್ನು ನೋಡಿ...

ಅಪರ್ಣಾ ಮತ್ತು ತಮ್ಮ ನಡುವೆ ಹೇಗೆ ಪ್ರೀತಿ ಉಂಟಾಯಿತು, ಮುಂದೇನಾಯಿತು ಎಂಬ ಬಗ್ಗೆ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಅವರ ಪತಿ ನಾಗರಾಜ್​ ವಸ್ತಾರೆ.
 

Nagaraj Vastare has recalled  about how love arose between Aparna and him in Rapid Rashmi show
Author
First Published Aug 30, 2024, 4:20 PM IST | Last Updated Aug 30, 2024, 4:20 PM IST

ಅಪರ್ಣನೂ ಪತ್ರಿಕೆಗಳಿಗೆ ಲೇಖನ ಬರೀತಾ ಇದ್ದಳು, ನಾನೂ ಬರೀತಾ ಇದ್ದೆ. ಅದೊಂದು ದಿನ ಕನ್ನಡಪ್ರಭದಲ್ಲಿ ಸಾಪ್ತಾಹಿಕ ಸೌರಭದಲ್ಲಿ ನನ್ನ ಲೇಖನ ಮೇಲೆ ಇತ್ತು, ಅವಳ ಲೇಖನ ಕೆಳಗಡೆ ಇತ್ತು. ಅವಳು ನನ್ನ ಲೇಖನ ಓದಿ, ಈ ವ್ಯಕ್ತಿ ಯಾರು ತುಂಬಾ ಚೆನ್ನಾಗಿ ಯೋಚನೆ ಮಾಡ್ತಾನಲ್ಲಾ ಎಂದು ಅಂದುಕೊಂಡಳು. ಅದಕ್ಕೇ ನನ್ನನ್ನು ಕಾಂಟಾಕ್ಟ್​ ಮಾಡಿ, ಭೇಟಿಯಾಗಿ ಅದು ಇನ್ನೇನೋ ಆಯಿತು ಎನ್ನುತ್ತಲೇ ತಮ್ಮ ಮತ್ತು ನಿರೂಪಕಿ ಅಪರ್ಣಾ ಅವರ ಲವ್​ಸ್ಟೋರಿಯನ್ನು ನೆನಪಿಸಿಕೊಂಡಿದ್ದಾರೆ ಪತಿ ನಾಗರಾಜ್​ ವಸ್ತಾರೆ. ಎರಡು ವರ್ಷ ದೊಡ್ಡವರಾದ ಅಪರ್ಣಾ ಜೊತೆ ತಮ್ಮ ಪ್ರೇಮಪ್ರಸಂಗವನ್ನು ರಸವತ್ತಾಗಿಯೇ ವಿವರಿಸುತ್ತಾ ಭಾವುಕರಾದರು ನಾಗರಾಜ್​ ಅವರು. ನಿರೂಪಕಿ ರ್ಯಾಪಿಡ್​ ರಶ್ಮಿ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಅವರು ಹಲವಾರು ವಿಷಯಗಳನ್ನು ಮಾತನಾಡಿದ್ದು, ಇದರ ಬಗ್ಗೆಯೂ ಹೇಳಿದ್ದಾರೆ.

ಅವಳು ನನಗಿಂತ ಎರಡು ವರ್ಷ ದೊಡ್ಡವಳು. ಅದೊಂದು ಚಿಕ್ಕ ಕೀಳರಿಮೆ ಅವಳಿಗೆ ಆಗ ಕಾಡ್ತಿತ್ತು. ನನ್ನ ಡೇಟ್​ ಆಫ್​ ಬರ್ತ್​ ತಿಳಿದುಕೊಂಡು ತನ್ನದನ್ನು ಹೇಳಲು ತುಂಬಾ ಕಷ್ಟಪಟ್ಟಳು. ಸಂಸಾರ ಎಂದರೆ ಗಂಡ ದೊಡ್ಡವನು ಇರ್ಬೇಕು, ಹೆಂಡತಿ ವಯಸ್ಸು ಕಡಿಮೆ ಇರಬೇಕು ಎನ್ನುವಂಥ ಅನಿಸಿಕೆ ಅವಳದ್ದು ಕೂಡ ಆಗಿತ್ತು. ಇದೇ ಕಾರಣಕ್ಕೆ ಎಲ್ಲವೂ ಮುಗಿದೇ ಹೋಯ್ತು ಎಂದುಕೊಂಡು, ಪಾರ್ಕರ್​ ಪೆನ್​ ತಂದುಕೊಟ್ಟು, ಇದನ್ನು ನನ್ನ ನೆನಪಿಗೆ ಇಟ್ಟುಕೊಳ್ಳಿ ಎಂದು ಹೇಳಿ ಹೋದಳು. ನನಗೂ ತಮಾಷೆ ಎನ್ನಿಸಿ ಎರಡು ದಿನ ಕಾಲೇ ಮಾಡಲಿಲ್ಲ. ಆಮೇಲೆ ಮೂರನೆಯ ದಿನವೇ ಅವಳೇ ಕಾಲ್​ ಮಾಡಿ ಮಾತನಾಡಿದಳು. ಇಷ್ಟೇನಾ ಎಂದು ಪ್ರಶ್ನಿಸಿದಳು ಎಂದು ಅಂದು ನಡೆದ ಘಟನೆಯನ್ನು ನಾಗರಾಜ್​ ವಸ್ತಾರೆ ಮೆಲುಕು ಹಾಕಿದ್ದಾರೆ. 

ಸಂಸ್ಕೃತ ಬಲ್ಲ ಬ್ರಾಹ್ಮಣ ಸುಂದರಿಯೇ ಬೇಕೆ? ನಿರೂಪಕಿ ಅಪರ್ಣಾ ವಿರುದ್ಧ ಸರ್ಕಾರಕ್ಕೆ ಇದೆಂಥ ದೂರು?
 
ಇನ್ನೂ ಹೇಳಬೇಕು ಎಂದ್ರೆ ನಮ್ಮ ಪ್ರಣಯ ಪ್ರಸಂಗ ಚೆನ್ನಾಗಿಯೇ ಇದೆ. ಸದಾಶಿವನಗರದಲ್ಲಿರೋ ಪಾರ್ಕ್​ ಬಳಿ ಪೊಲೀಸಪ್ಪನ ಕೈಯಲ್ಲಿ ಸಿಕ್ಕಾಕಿಕೊಂಡ್ವಿ. ಆತ ಬೈಯೋಕೆ ಬಂದ. ಆಮೇಲೆ ಅಪರ್ಣಾಳನ್ನು ನೋಡಿ ಶಾಕ್​ ಆಗೋಯ್ತು. ಏನಮ್ಮಾ ನೀವು ಎಂದು... ಎನ್ನುತ್ತಲೇ ಜೋರಾಗಿ ನಕ್ಕಿದ್ದಾರೆ ನಾಗರಾಜ್​ ವಸ್ತಾರೆ. ಇದೇ ವೇಳೆ ಅವಳಿಗೆ ತಿನ್ನುವುದು ಎಂದ್ರೆ ತುಂಬಾ ಇಷ್ಟ. ಆದ್ರೆ ಅಡುಗೆ ಮಾತ್ರ ನಾನೇ ಮಾಡಬೇಕಿತ್ತು. ಅವಳು ಏನು ಬೇಕು ಅಂತೆಲ್ಲಾ ಹೇಳಿ ನನ್ನ ಕೈಯಿಂದಲೇ ಮಾಡಿಸಿಕೊಳ್ಳೋಳು. ತರಕಾರಿಗಳು ದೊಡ್ಡದೊಡ್ಡದಾಗಿ ಹೆಚ್ಚಬೇಕಿತ್ತು. ಕೆಲವರು ಅಯ್ಯೋ ಗಂಡ ಮಾಡೋದಾ ಕೆಲಸ ಎನ್ನೋರೂ ಇದ್ದಾರೆ. ಆದರೆ ನಮ್ಮ ಸಂಸಾರ ತುಂಬಾ ಚೆನ್ನಾಗಿತ್ತು ಎಂದು ನಾಗರಾಜ್​ ಅವರು ಭಾವುಕರಾದರು.

ಅಷ್ಟಕ್ಕೂ ಅಪ್ಪಟ ಕನ್ನಡತಿ ಅಪರ್ಣಾ ಎಲ್ಲರನ್ನೂ ಅಗಲಿ ಒಂದೂವರೆ ತಿಂಗಳಾಗಿದೆ. ಎರಡು ವರ್ಷಗಳಿಂದ ಕ್ಯಾನ್ಸರ್​ ಎಂಬ ಮಹಾಮಾರಿಯನ್ನು ತಮ್ಮೊಳಗೆ ಅಡಗಿಸಿಟ್ಟುಕೊಂಡು ಯಾರಿಗೂ ಹೇಳದೇ ಕಣ್ಮರೆಯಾಗಿ ಹೋಗಿದ್ದಾರೆ. ಇದನ್ನು ಕನ್ನಡಿಗರಿಗೆ ಇನ್ನೂ ಅರಗಿಸಿಕೊಳ್ಳಲು ಆಗದ ವಿಷಯವೇ.   ಅದೆಷ್ಟೋ ಮಂದಿಯನ್ನು ಕಣ್ಣೀರಿನಲ್ಲಿ ತೇಲಿಸಿ ಹೋದರು ಈಕೆ. ಆ ನಗು, ಆ ಕಂಠಸಿಹಿ, ನಿರೂಪಣೆಯ ಮಾಧುರ್ಯ, ಕರ್ಕಶವಿಲ್ಲದೇ ಮೃದುವಾಗಿ ನಿರೂಪಿಸುವ ಪರಿ, ಆ ಶುದ್ಧ ಕನ್ನಡ... ಅಬ್ಬಾ... ಎನ್ನುವಂಥ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ ಅಪರ್ಣಾ. ಎರಡು ವರ್ಷಗಳಿಂದ ಕ್ಯಾನ್ಸರ್​ ಎನ್ನುವ ಮಹಾಮಾರಿಯನ್ನು ದೇಹದಲ್ಲಿ ಇಟ್ಟುಕೊಂಡರೂ, ನೀವಿನ್ನು ಬದುಕುವುದು ಆರೇ ತಿಂಗಳು ಎಂದು ವೈದ್ಯರು ಹೇಳಿದ್ದರೂ ಬದುಕಿ ತೋರಿಸುತ್ತೇನೆ ಎಂದು ಎರಡು ವರ್ಷ ಸಾವನ್ನು ಕಣ್ಣೆದುರೇ ಇಟ್ಟುಕೊಂಡು ಬದುಕಿದ ಜೀವವಿದು. ಕಳೆದ ಆರು ತಿಂಗಳುಗಳಿಂದ ಸಾಯುವುದು ನಿಶ್ಚಿತ ಎಂದು ಗೊತ್ತಾದ ಮೇಲೂ ಅಪರ್ಣಾ ಅವರು ಬದುಕಿದ್ದ ಪರಿಯೇ ಅಪೂರ್ವವಾದದ್ದು. 

ಯಾವ ಪೇನ್​ ಕಿಲ್ಲರೂ ವರ್ಕ್​ ಆಗ್ಲಿಲ್ಲ, ನಾನ್ಯಾರು ಅಂತ ಕೇಳಿದೆ... ಅಪರ್ಣಾರ ಕರಾಳ ರಾತ್ರಿ ನೆನಪಿಸಿದ ನಾಗರಾಜ್​
 

Latest Videos
Follow Us:
Download App:
  • android
  • ios