Asianet Suvarna News Asianet Suvarna News

ಸಂಸ್ಕೃತ ಬಲ್ಲ ಬ್ರಾಹ್ಮಣ ಸುಂದರಿಯೇ ಬೇಕೆ? ನಿರೂಪಕಿ ಅಪರ್ಣಾ ವಿರುದ್ಧ ಸರ್ಕಾರಕ್ಕೆ ಇದೆಂಥ ದೂರು?

ಕರುನಾಡು ಕಂಡ ಅಪರೂಪದ ನಿರೂಪಕಿ ಅಪರ್ಣಾ ಜಾತಿಯನ್ನು ಎಳೆದು ತಂದು ಅವರಿಗೆ ಮಾಡಿದ ಅಪಮಾನವನ್ನು ನೆನಪಿಸಿಕೊಂಡಿದ್ದಾರೆ ಪತಿ ನಾಗರಾಜ್​ ವಸ್ತಾರೆ
 

Nagaraj Vastare recalls insult done to Aparnas  for giving op by govt in Rapid Rashmi show suc
Author
First Published Aug 29, 2024, 12:06 PM IST | Last Updated Aug 29, 2024, 5:38 PM IST

ನಟಿ, ನಿರೂಪಕಿ, ಕನ್ನಡತಿ ಅಪರ್ಣಾ ಎಲ್ಲರನ್ನೂ ಅಗಲಿ ಒಂದೂವರೆ ತಿಂಗಳೇ ಕಳೆದು ಹೋಗಿವೆ. ಕಳೆದ ಜುಲೈ 11ರಂದು ಮಣ್ಣಲ್ಲಿ ಲೀನವಾದರು ಅಪಣಾ.   ಅದೆಷ್ಟೋ ಮಂದಿಯನ್ನು ಕಣ್ಣೀರಿನಲ್ಲಿ ತೇಲಿಸಿ ಹೋದರು. ಆ ನಗು, ಆ ಕಂಠಸಿಹಿ, ನಿರೂಪಣೆಯ ಮಾಧುರ್ಯ, ಕರ್ಕಶವಿಲ್ಲದೇ ಮೃದುವಾಗಿ ನಿರೂಪಿಸುವ ಪರಿ, ಆ ಶುದ್ಧ ಕನ್ನಡ... ಅಬ್ಬಾ... ಎನ್ನುವಂಥ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ ಅಪರ್ಣಾ. ಎರಡು ವರ್ಷಗಳಿಂದ ಕ್ಯಾನ್ಸರ್​ ಎನ್ನುವ ಮಹಾಮಾರಿಯನ್ನು ದೇಹದಲ್ಲಿ ಇಟ್ಟುಕೊಂಡರೂ, ನೀವಿನ್ನು ಬದುಕುವುದು ಆರೇ ತಿಂಗಳು ಎಂದು ವೈದ್ಯರು ಹೇಳಿದ್ದರೂ ಬದುಕಿ ತೋರಿಸುತ್ತೇನೆ ಎಂದು ಎರಡು ವರ್ಷ ಸಾವನ್ನು ಕಣ್ಣೆದುರೇ ಇಟ್ಟುಕೊಂಡು ಬದುಕಿದ ಜೀವವಿದು. ಕಳೆದ ಆರು ತಿಂಗಳುಗಳಿಂದ ಸಾಯುವುದು ನಿಶ್ಚಿತ ಎಂದು ಗೊತ್ತಾದ ಮೇಲೂ ಅಪರ್ಣಾ ಅವರು ಬದುಕಿದ್ದ ಪರಿಯೇ ಅಪೂರ್ವವಾದದ್ದು. 

ಸರ್ಕಾರಿ ಕಾರ್ಯಕ್ರಮಗಳು ಎಂದರೆ ಅಲ್ಲಿ ಅಪರ್ಣಾ ನಿರೂಪಣೆ ಇದ್ದರಷ್ಟೇ ಚೆನ್ನ ಎನ್ನುವ ಮಟ್ಟಿಗೆ ಅವರು ನಿರೂಪಣೆ ಮಾಡುತ್ತಿದ್ದರು. ವೃತ್ತಿ ಹೊಟ್ಟೆಕಿಚ್ಚು ( professional jealousy) ಎನ್ನುವುದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದದ್ದೇ. ಅದು ನಿರೂಪಕಿ ಅಪರ್ಣಾ ಅವರನ್ನೂ ಬಿಟ್ಟಿರಲಿಲ್ಲ. ಅವರನ್ನು ತುಳಿಯಲು ಒಂದಿಷ್ಟು ಮಂದಿ ಸರ್ಕಾರದ ವಿರುದ್ಧ ದೂರು ದಾಖಲಿಸಲು ಹೋಗಿದ್ದರು ಎನ್ನುವ ಶಾಕಿಂಗ್​ ವಿಷಯವನ್ನು ತೆರೆದಿಟ್ಟಿದ್ದಾರೆ ಪತಿ ನಾಗರಾಜ್​ ವಸ್ತಾರೆ. ರ್ಯಾಪಿಡ್​ ರಶ್ಮಿ ಷೋನಲ್ಲಿ ತಮ್ಮ ಮತ್ತು ಅಪರ್ಣಾರ ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟಿರುವ ನಾಗರಾಜ್​ ಅವರು, ಅಪರ್ಣಾ ಜೀವನದಲ್ಲಿ ತುಂಬಾ ನೊಂದುಕೊಂಡಿದ್ದು ಈ ಒಂದು ಕಾರಣಕ್ಕೆ ಎಂದಿದ್ದಾರೆ. 

ಅಪರ್ಣಾ, ಜೀವನವನ್ನು ನೋಡಿದ ಪರಿಯೇ ಸೊಗಸು... ಸಂದರ್ಶನವೊಂದರ ವಿಡಿಯೋ ತುಣುಕೀಗ ವೈರಲ್​

ಭಂಡ ಜಗತ್ತಿನಲ್ಲಿ ಇರುವ ಬದಲು ಹೋಗೋದೇ ಲೇಸು ಎಂದು ಅಪರ್ಣಾ ನೋವಿನಿಂದ ಹೇಳುತ್ತಿದ್ದಳು. ಅದಕ್ಕೆ ಕಾರಣ ಅವಳ ಸಮೀಪವರ್ತಿಗಳಿಂದ ಬಂದ ಕುಟುಕು, ಕುಹಕ ಮಾತುಗಳು ಎಂಬುದನ್ನು ನೆನಪಿಸಿಕೊಂಡಿದ್ದಾರೆ ನಾಗರಾಜ್​.  ಗಣರಾಜ್ಯ, ಸ್ವಾತಂತ್ರ್ಯೋತ್ಸವದ ದಿವಸ ಇವರೊಬ್ಬರಿಗೆ ಅವಕಾಶ ಕೊಡುತ್ತಿದ್ದಾರೆ ಎಂದು ಐದಾರು ವರ್ಷಗಳಿಂದ ಕಂಪ್ಲೇಂಟ್​ ಜಾಸ್ತಿ ಆಗಿತ್ತು. ನಾವೂ ಇದ್ದೇವೆ ಎನ್ನುವುದು ಅವರ ಕಂಪ್ಲೇಂಟ್​ ಆಗಿತ್ತು. ಒಂದಿಷ್ಟು ಮಂದಿಯ ದಂಡು ಸರ್ಕಾರದ ಎದುರು ನಿಂತುಕೊಂಡು ಪ್ರತಿರೋಧ ಒಡ್ಡಿದವು.  ಅವರೆಲ್ಲಾ ಅಪರ್ಣಾಳನ್ನು ಹೇಗೆ ಬಿಂಬಿಸಿದರು ಎಂದರೆ ಇವಳು ತಾನಾಗೇ ಹೋಗಿ ನನಗೆ ಛಾನ್ಸ್​ ಕೊಡಿ ಎಂದು ಕೇಳುತ್ತಾಳೆ ಅಂದುಕೊಂಡು ಬಿಟ್ಟಿದ್ದರು. ಅದು ಅವಳನ್ನು ತುಂಬಾ ಕಾಡಿತು ಎಂದು ಅಪರ್ಣಾ ಅವರಿಗಾಗಿ ನೋವನ್ನು ಹೇಳಿದ್ದಾರೆ.

ಆದರೆ ಇದ್ಯಾವುದೂ  ಸತ್ಯ ಅಲ್ಲ. ಅವಳು ಹೇಗೆ ಎನ್ನುವುದು ನನಗೆ ಗೊತ್ತು. ಹೀಗೆ ಅವಳು ಮಾಡುತ್ತಲೇ ಇರಲಿಲ್ಲ. ಅಪರ್ಣಾಳಂತ ಸಾತ್ವಿಕ ಜೀವವನ್ನೇ ನಾನು ನೋಡಲಿಲ್ಲ. ನನ್ನ ಹೆಂಡ್ತಿ ಅನ್ನೋದಕ್ಕೆ ಅಲ್ಲ, ಅವಳು ಬದುಕಿದ್ದೇ ಹಾಗೆ. ಅದಾದ ಕೆಲವೇ ದಿನಗಳಲ್ಲಿ ಫೇಸ್​ಬುಕ್​ ಪೋಸ್ಟ್​ನಲ್ಲಿ ಇವಳ ಹೆಸರು ಮೆನ್ಷನ್​ ಮಾಡದೇ ಒಬ್ಬರು ಪೋಸ್ಟ್​ ಹಾಕಿದ್ರು. ಇವರು ಇರುವವರೆಗೂ ಬೇರೆಯವರಿಗೆ ಏಳಿಗೆ ಇಲ್ಲ ಎಂದು. ತುಂಬಾ ರೊಚ್ಚಿಗೆದ್ದಳು. ಅನವಶ್ಯಕವಾಗಿ ಇನ್ನೊಬ್ಬರ ಕುಲಮೂಲ, ಜಾತಿಯ ಮೇಲೆ ಪ್ರಹಾರ ಮಾಡಲು ಶುರು ಮಾಡಿದರು. ಮನೆಯ ಸಂಗತಿಯನ್ನು ಬೀದಿಗೆ ತಂದರು. ಸಂಸ್ಕೃತ ಬಲ್ಲ ಬ್ರಾಹ್ಮಣ ಸುಂದರಿಯೇ ಬೇಕೆ ಎಂದು ಸರ್ಕಾರಕ್ಕೆ ಕೇಳಲು ಶುರು ಮಾಡಿದರು.  ಅದು ಅವಳಿಗೆ ತುಂಬಾ ನೋವು ತಂದಿತು. ಕೊನೆಗೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ಇಲ್ಲ ಎನ್ನುವ ನಿರ್ಧಾರ ಮಾಡಿದಳು. ಕಳೆದ ಸೆಪ್ಟೆಂಬರ್​ನಿಂದ ಯಾವುದೇ ಸರ್ಕಾರಿ ಫಂಕ್ಷನ್​ಗಳಿಗೆ ಹೋಗಲೇ ಇಲ್ಲ. ಒಂದೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು ಎಂದು ಆಘಾತಕಾರಿ ಘಟನೆ ಬಿಚ್ಚಿಟ್ಟಿದ್ದಾರೆ ನಾಗರಾಜ್​ ವಸ್ತಾರೆ. 

ಆ್ಯಂಕರ್​ ಅಪರ್ಣಾ ಸಾವು, ಶ್ವಾಸಕೋಶದ ಕ್ಯಾನ್ಸರ್ ಭೀತಿ, ಏನು ಹೇಳುತ್ತೆ ಸ್ಟಡೀಸ್?


Latest Videos
Follow Us:
Download App:
  • android
  • ios