Asianet Suvarna News Asianet Suvarna News

ಹುಲಿ ಉಗುರು ಪ್ರಕರಣದಲ್ಲಿ ಬೀಗ್​ಬಾಸ್​ ಕಿಟ್ಟಿ ಅರೆಸ್ಟ್​! ಮುಂದೇನಾಗತ್ತೆ ಕೇಳ್ತಿದ್ದಾರೆ ಫ್ಯಾನ್ಸ್​

ಬೀಗ್​ ಬಾಸ್​ ಮನೆಯ ಸ್ಪರ್ಧಿ ಕಿಟ್ಟಿ ಹುಲಿ ಉಗುರು ಕೇಸ್​ನಲ್ಲಿ ಅರೆಸ್ಟ್​ ಆಗಿದ್ದಾರೆ. ಅಷ್ಟಕ್ಕೂ ಆಗಿರೋದು ಏನು? ಎಲ್ಲಿ?
 

Naanu Nandini fame Beeg Boss Kitty arrested in tiger claw case suc
Author
First Published Nov 18, 2023, 1:17 PM IST

 ಕನ್ನಡದ ಬಿಗ್​ಬಾಸ್​ 10 ಹುಲಿ ಉಗುರು ಪ್ರಕರಣದಿಂದ ಸಾಕಷ್ಟು ಸದ್ದು ಮಾಡಿತ್ತು. ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಅವರು ಹುಲಿ ಉಗುರು ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಬಿಗ್​ಬಾಸ್​ ಮನೆಯಿಂದ ನೇರವಾಗಿ ಅವರನ್ನು ಪೊಲೀಸರು ಅರೆಸ್ಟ್​ ಮಾಡಿಕೊಂಡು ಹೋಗಿದ್ದು, ಅದಾದ ಬಳಿಕ ಹುಲಿ ಉಗುರು ಹಾಕಿಕೊಂಡಿದ್ದ ಕೆಲವು ಗಣ್ಯರ ಮೇಲೆ ಕತ್ತಿ ತೂಗಾಡಿದ್ದು,  ನಟ ಜಗ್ಗೇಶ್​ ಅವರನ್ನು ಹೊರತು ಪಡಿಸಿ ಉಳಿದವರು ತಾವು ಧರಿಸಿರೋ ಹುಲಿ ಉಗುರು ಪ್ಲಾಸ್ಟಿಕ್​, ಸಿಂಥಟಿಕ್​, ನಕಲಿ ಎಂದೆಲ್ಲಾ ಸಬೂಬು ಹೇಳಿ ಜಾರಿಕೊಂಡಿದ್ದು, ಕೆಲವು ಗಣ್ಯರ ಮಕ್ಕಳ ಪ್ರಕರಣ ಹೊರಕ್ಕೆ ಬರುತ್ತಿದ್ದಂತೆಯೇ  ಹುಲಿ ಉಗುರು ಪ್ರಕರಣ ಅಲ್ಲಿಗೇ ತಣ್ಣಗಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ವರ್ತೂರು ಸಂತೋಷ್​ ಅವರ ವಿಷಯಕ್ಕೆ ಬರುವುದಾಗಿ ಜೈಲಿಗೆ ಹೋಗಿ ಬಂದ ಅವರು ಸದ್ಯ ಜಾಮೀನು ಪಡೆದಿದ್ದು, ಬಿಗ್​ಬಾಸ್​ ಮನೆ ಪ್ರವೇಶಿಸಿದ್ದಾರೆ. ಅಲ್ಲಿ ಸ್ಪರ್ಧೆ ಮುಂದುವರೆಸಿದ್ದಾರೆ.

ಇದೀಗ ಇನ್ನೋರ್ವ ಸ್ಪರ್ಧಿ ಅರೆಸ್ಟ್​ ಆಗಿದ್ದಾರೆ. ಹೌದು. ಹುಲಿ ಉಗುರು ಪ್ರಕರಣದಲ್ಲಿ ಇನ್ನೋರ್ವ ಸ್ಪರ್ಧಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅರೆಸ್ಟ್​ ಆಗಿರುವ ಸ್ಪರ್ಧಿಯ ಹೆಸರು ಕಿಟ್ಟಿ. ಬಿಗ್​ಬಾಸ್​ 10ನಲ್ಲಿ ಕಿಟ್ಟಿ ಹೆಸರಿನ ಯಾರೂ ಇಲ್ವಲ್ಲಾ ಎಂದು ಬಿಗ್​ಬಾಸ್​ ಸ್ಪರ್ಧಿಗಳು ಅಂದುಕೊಳ್ಳಬಹುದು. ಅಷ್ಟಕ್ಕೂ ಅರೆಸ್ಟ್​ ಆಗಿರೋದು ಬಿಗ್​ಬಾಸ್​ ಸ್ಪರ್ಧಿಯಲ್ಲ, ಬದಲಿಗೆ 'ಬೀಗ್​ ಬಾಸ್​' (BEEG BOSS) ಸ್ಪರ್ಧಿ. ಅರೆಸ್ಟ್​ ಆಗಿರೋದು ಸ್ಪರ್ಧಿಯಾಗಿರುವ ಕಿಟ್ಟಿ ಹೆಸರಿನ ಬೆಕ್ಕು!

ನಾನು ನಂದಿನಿ ಖ್ಯಾತಿಯ ವಿಕ್ಕಿ 'ಬಿಗ್​ಬಾಸ್​'​ ಮನೆಯೊಳಕ್ಕೆ! ಆದ್ರೆ ಇಲ್ಲಿದೆ ಬಹು ದೊಡ್ಡ ಟ್ವಿಸ್ಟ್​...

ಬಿಗ್​ಬಾಸ್​ನಂತೆಯೇ  ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ..’ ಹಾಡಿನ ಖ್ಯಾತಿಯ ವಿಕ್ರಮ್​ ಅಲಿಯಾಸ್​ ವಿಕ್ಕಿ ಅವರು ಹೊಸದಾಗಿ ಕೂಲ್​ ಕಲರ್ಸ್​ ಎನ್ನುವ ಚಾನೆಲ್​ ಹೆಸರು ಇಟ್ಟುಕೊಂಡು ಬೀಗ್​ ಬಾಸ್​ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಲ್ಲಿ ಓರ್ವ ಸ್ಪರ್ಧಿ ಕಿಟ್ಟಿ ಹೆಸರಿನ ಬೆಕ್ಕು. ಅದನ್ನು ಪೊಲೀಸರು ಬಂದು ಅರೆಸ್ಟ್​ ಮಾಡಿದ್ದಾರೆ. ಇದಕ್ಕೆ ಕಾರಣ, ಬೆಕ್ಕಿನ ಉಗುರು ಕೂಡ ಹುಲಿಯಂತೆ ಇರುವುದರಿಂದ. ಇದರ ರೀಲ್ಸ್​ ಮಾಡಿ ವಿಕ್ಕಿ ಅವರು ರಿಲೀಸ್​ ಮಾಡಿದ್ದು, ಇದನ್ನು ನೋಡಿ ಫ್ಯಾನ್ಸ್​ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ನೀವು ಅಸಮಾನ್ಯ ಮನುಷ್ಯ ಬಿಡಿ ಎನ್ನುತ್ತಿದ್ದಾರೆ.

ಅಂದಹಾಗೆ ಎಲ್ಲರಿಗೂ ತಿಳಿದಿರುವಂತೆ 'ನಾನು ನಂದಿನಿ ಬೆಂಗಳೂರಿಗೆ ಬಂದೀನಿ..’ ಹಾಡಂತೂ ಸೃಷ್ಟಿಸ್ತಿರೋ ಹವಾ ಅಷ್ಟಿಷ್ಟಲ್ಲ. ವಿಕಿಪೀಡಿಯಾ ಖ್ಯಾತಿಯ ವಿಕ್ರಮ್​ ಅಲಿಯಾಸ್​ ವಿಕ್ಕಿ ಅವರು ಮಾಡಿರುವ ಈ ಹಾಡಿನ ಮೋಡಿಯಂತೂ ಇನ್ನೂ ನಿಲ್ಲುತ್ತಲೇ ಇಲ್ಲ.  ಈ ಹಾಡು  ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಭವಿಷ್ಯ ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದು ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು  ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅಂದ ಹಾಗೆ ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು.  ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ. ಕರ್ನಾಟಕ ಅಷ್ಟೇ ಏಕೆ, ವಿದೇಶದಲ್ಲಿರುವ ಕನ್ನಡಿಗರೂ ಈ ಹಾಡಿಗೆ ರೀಲ್ಸ್​ ಮಾಡುತ್ತಿದ್ದಾರೆ.

ಭೂತ-ಪ್ರೇತಗಳ ದ್ವೀಪದಲ್ಲಿ ಡಾ.ಬ್ರೋ! ಹತ್ರ ಹೋದ್ರೆ ಅಲ್ಲೇ ಮಿಸ್ಸಿಂಗ್​, ವಾಪಸಾಗೋ ಮಾತೇ ಇಲ್ಲ...

ಇದೀಗ ವಿಕ್ಕಿ ಅವರು ಬೀಗ್​ ಬಾಸ್​ ಮನೆಯೊಳಕ್ಕೆ ಹೋಗಿದ್ದಾರೆ.  ಬಿಗ್​ಬಾಸ್​ ಮನೆಯಲ್ಲಿ ನಡೆಯುವ ಕಾರ್ಯಾಚರಣೆಗಳನ್ನು ಹಾಸ್ಯದ ರೂಪದಲ್ಲಿ ಬೀಗ್​ ಭಾಸ್​ ಹೆಸರಿನಲ್ಲಿ ವಿಕ್ಕಿ ಮತ್ತು ಅವರ ತಂಡ ರೂಪಿಸಿದೆ.  ಹೀಗೆ ತಮಾಷೆಯ ವಿಡಿಯೋ ಮಾಡಿ ಹರಿಬಿಟ್ಟಿದೆ ವಿಕ್ಕಿ ತಂಡ. ಇದಕ್ಕೆ ಇದಾಗಲೇ ನೂರಾರು ಮಂದಿ ಥಹರೇವಾರಿ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ವಿಕ್ಕಿ ಮತ್ತು ಅವರ ತಂಡಕ್ಕೆ ದೊಡ್ಡ ಸಲಾಂ ಹೇಳುತ್ತಿದ್ದಾರೆ. ಒರಿಜಿನಲ್​ ಬಿಗ್​ಬಾಸ್​ನಿಂದ ನಿಮ್ಮದೇ ಬೀಗ್​ ಭಾಸ್​ ಸಕತ್​ ಆಗಿದೆ ಎಂದು ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಶಿವರಾಜ್​ ಕುಮಾರ್​ ಅವರು ತಮ್ಮ ಘೋಸ್ಟ್​ ಚಿತ್ರದ ಪ್ರಮೋಷನ್​ಗಾಗಿ ಕಳೆದ ವಾರ ವಿಕ್ಕಿ ಮತ್ತು ಅವರ ತಂಡದವರನ್ನೇ ವಿಭಿನ್ನ ರೂಪದಲ್ಲಿ ಬಳಸಿಕೊಂಡಿತ್ತು. ಒಟ್ಟಿನಲ್ಲಿ ನಾನು ನಂದಿನಿ ಹಾಡಿನ ಮೂಲಕ ಈ ತಂಡ ವಿಶ್ವ ಖ್ಯಾತಿ ಗಳಿಸುತ್ತಿದೆ. 
 

Follow Us:
Download App:
  • android
  • ios