Asianet Suvarna News Asianet Suvarna News

ರೋಡೀಸ್ ಶೋದಿಂದ ಬದುಕಿನಲ್ಲಿ ಭಾರೀ ಬೆಲೆ ತೆತ್ತೆ, ವಿಚ್ಛೇದನವೂ ಆಯ್ತು: ಶೋ ಜಡ್ಜ್ ರಘು

ಎಂಟಿವಿ ರೋಡೀಸ್ 2000 ದಶಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ರಿಯಾಲಿಟಿ ಶೋ. ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ ಈ ಶೋದ ಜಡ್ಜ್‌ ಆಗಿದ್ದ ರಘು ರಾಮ್ ಅವರು ಆ ಶೋದಿಂದ ತಮ್ಮ ವೈಯಕ್ತಿಕ ಬದುಕಿನಲ್ಲಿ ಆದ ತೊಂದರೆಗಳ ಬಗ್ಗೆ ಮಾತನಾಡಿದ್ದು, ಸಂಚಲನ ಸೃಷ್ಟಿಸಿದೆ. 

MTV Roadies show took a heavy toll from personal life, even got divorced Show judge Raghu Ram said akb
Author
First Published Apr 12, 2024, 12:43 PM IST

ಎಂಟಿವಿ ರೋಡೀಸ್ 2000 ದಶಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ರಿಯಾಲಿಟಿ ಶೋ. ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ ಈ ಶೋ ಕೆಲ ವರ್ಷಗಳಿಂದ ತನ್ನ ಮನ್ನಣೆಯನ್ನು ಕಳೆದುಕೊಂಡಿದ್ದು, ಇದೀಗ ಈ ಶೋದ ಸೀಸನ್ 10ರಲ್ಲಿ ಜಡ್ಜ್‌ ಆಗಿ ಭಾಗವಹಿಸಿದ್ದ ರಘು ರಾಮ್ ಅವರು ಆ ಶೋದಿಂದ ತಮ್ಮ ವೈಯಕ್ತಿಕ ಬದುಕಿನಲ್ಲಿ ಆದ ತೊಂದರೆಗಳ ಬಗ್ಗೆ ಮಾತನಾಡಿದ್ದು, ಸಂಚಲನ ಸೃಷ್ಟಿಸಿದೆ. 

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಘುರಾಮ್, ಇದರಿಂದ ತಮ್ಮ ವೈಯಕ್ತಿಕ ಬದುಕಿನಲ್ಲಿ ಭಾರಿ ಬೆಲೆ ತೇರಬೇಕಾಯ್ತು ಹಾಗೂ ಅದರಿಂದಲೇ ನನ್ನ ಮದುವೆ ಮುರಿದು ಬಿತ್ತು. ನಾನು ಹಾಗೂ ನನ್ನ ಸೋದರ ಶೋವನ್ನು ತೊರೆದ ದಿನವೇ ರೋಡೀಸ್ ಕತೆ ಮುಗಿದಿತ್ತು ಎಂದು ಅವರು ಹೇಳಿದ್ದಾರೆ. 

ವೈಯಕ್ತಿಕವಾಗಿ, ರೋಡೀಸ್ ಮತ್ತು  ಅದರ ಸುತ್ತಮುತ್ತಲಿನ ಕ್ರೇಜ್‌ನಿಂದಾಗಿ ನನ್ನ ಜೀವನವು ಬಹಳಷ್ಟು ಏಳುಬೀಳುಗಳನ್ನು ಅನುಭವಿಸಿತ್ತು. ಇದರಿಂದಲೇ ನನ್ನ ಮದುವೆಯು ನರಳಲು ಶುರುವಾಗಿತ್ತು. ಅಂತಿಮವಾಗಿ ನಾನು ವಿಚ್ಛೇದನ ಪಡೆದಿದ್ದೇನೆ. ನನ್ನ ಮಾನಸಿಕ ಆರೋಗ್ಯ, ನನ್ನ ದೈಹಿಕ ಆರೋಗ್ಯ ಮತ್ತು ಎಲ್ಲವೂ ಕೇವಲ ಹುಚ್ಚಾಗಿತ್ತು. ನಾನು ಸ್ವಲ್ಪ ದೂರ ಹೋಗಬೇಕಾಗಿತ್ತು. ಹಾಗಾಗಿ ನಾನು ಈ ಶೋದಿಂದ ದೂರಾದೇ ಹಾಗೂ ಹೀಗೆ ದೂರಾಗಿರುವುದಕ್ಕೆ ನನಗೆ ಸಂತೋಷವಿದೆ ಹಾಗೂ ಶೋದಿಂದ ಹೊರ ನಡೆದಿರುವುದಕ್ಕೆ ನನಗೆಂದಿಗೂ ವಿಷಾದವಿಲ್ಲ ಎಂದು ರಘು ರಾಮ್ ಅವರು ಹೇಳಿಕೊಂಡಿದ್ದಾರೆ. 

ನಾನು ಮಹಾನಟಿಯಾಗಿದ್ದು ಹೇಗೆ? ಸೀರಿಯಲ್​ ನಾಯಕಿಯರು ಏನೆಲ್ಲಾ ಹೇಳಿದ್ರು ಕೇಳಿ...

ಎಂಟಿವಿ ಜೊತೆಗಿನ ಅಸಮಾಧಾನದ ಬಗ್ಗೆಯೂ ಮಾತನಾಡಿದ ಅವರು, ಎಂಟಿವಿಯವರು ತಮ್ಮದೇ ನಿರ್ದಿಷ್ಟ ಹಾದಿಯಲ್ಲಿ ಶೋವನ್ನು ಮಾಡಲು ಬಯಸಿದ್ದರು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ, ಚಾನೆಲ್ ಅದಕ್ಕೊಂದು ಜನಪರವಾದ ಆಯಾಮ ನೀಡಲು ಬಯಸಿತ್ತು ಅದು ನನಗೆ ಇಷ್ಟವಾಗಲಿಲ್ಲ ಹಾಗೂ ಅದೇ ಕಾರಣಕ್ಕೆ ನಾನ ಶೋ ಉತ್ತುಂಗದಲ್ಲಿದ್ದ ಸಮಯದಲ್ಲೇ ಅದರಿಂದ ಹೊರ ನಡೆದೆ ಎಂದು ರಘು ಹೇಳಿದ್ದಾರೆ. 

ಮತ್ತೆ ಈ ಶೋಗೆ ಮರಳುತ್ತೀರಾ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು ಇಲ್ಲ, ಅದು ಆಗುವಂತದಲ್ಲ, ಈ ಬಗ್ಗೆ ನಮಗೆ ಕೇಳಲಾಗಿತ್ತು. ಆದರೆ ಇಲ್ಲ, ನನಗೂ ಆ ಶೋಗೆ ಮರಳಲು ಇಷ್ಟವಿಲ್ಲ. ನಾನು ಶೋ ತೊರೆದ ನಂತರ ಯಾವತ್ತೂ ಆ ಶೋವನ್ನು ನೋಡಿಯೇ ಇಲ್ಲ. ಈಗ ಅದು ಮೊದಲಿನ ರೋಡೀಸ್ ಶೋ ಆಗಿ ಉಳಿದಿಲ್ಲ. ಈಗ ಅದೂ ಸಂಪೂರ್ಣ ಬದಲಾದ ಶೋ ಆಗಿದೆ. ರೋಡಿಸ್ ಹೆಸರಿನಲ್ಲಿ ಬೇರೆಯದೇ ಆದ ಶೋ ಇದೆ. ನಾನು ಮತ್ತು ರಾಜೀವ್ ಶೋದಿಂದ ಹೊರ ನಡೆದ ದಿನವೇ ಶೋ ಮುಗಿದಿತ್ತು ಅದರ ನಿರ್ದಿಷ್ಟ ಸ್ವರೂಪವೂ ಮುಗಿದಿದೆ ಎಂದು ಅವರು ಹೇಳಿದ್ದಾರೆ.

ಹಿಂದಿ Indian Idol ಸ್ಟೇಜ್‌ ಮೇಲೆ ದಿಯಾ ಹೆಗಡೆ; ಸದ್ಯದಲ್ಲೇ ಸೋನಿ ಟಿವಿಯಲ್ಲಿ ಕನ್ನಡದ ಕಂಪು!

ಎಂಟಿವಿ ರೋಡೀಸ್ ಶೋ ಬಗ್ಗೆ ಹೇಳುವುದಾದರೆ ಅದೊಂದು ಯುವ ಸಮೂಹವನ್ನು ಕೇಂದ್ರಿಕರಿಸಿರುವ ಶೋ ಆಗಿದ್ದು,  2003ರ ಆಗಸ್ಟ್‌ನಲ್ಲಿ ಈ ಶೋ ಆರಂಭವಾಗಿತ್ತು. ಎಂಟಿವಿಗಾಗಿ ಸೋದರರಾದ ರಘು ರಾಮ್ ಹಾಗೂ ರಾಜೀವ್ ಅವರು ಈ ಶೋವನ್ನು ನಿರ್ಮಾಣ ಮಾಡಿ ನಿರೂಪಣೆ ಮಾಡುತ್ತಿದ್ದರು. 2014ರಲ್ಲಿ ಈ ಸೋದರರು ಶೋವನ್ನು ಬಿಟ್ಟು ಹೋಗಿದ್ದು, ಇವರ ನಿರ್ಗಮನದ ನಂತರ ಸೈರಸ್ ಸಹುಕಾರ್, ರಣ್‌ವಿಜಯ್, ಬಾನಿ ಜೆ, ಹಾಗೂ ಸೋನು ಸೂದ್ ಈ ಶೋವನ್ನು ನಡೆಸಿಕೊಟ್ಟಿದ್ದಾರೆ.

ರಘು ರಾಮ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ನಟಿ ಸುಗಂಧಾ ಗಾರ್ಗ್ ಅವರನ್ನು ಮದ್ವೆಯಾಗಿದ್ದರು. ಆದರೆ 2016ರಲ್ಲಿ ದಾಂಪತ್ಯ ವಿರಸದ ಕಾರಣಕ್ಕೆ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ನಂತರ ನಟಾಲಿ ಡಿ ಲುಸಿಯೊ ಅವರನ್ನು ಮದ್ವೆಯಾಗಿರುವ ಅವರಿಗೆ ರಿದಂ ಎಂಬ ಮಗನಿದ್ದಾನೆ.

Follow Us:
Download App:
  • android
  • ios