ಮಹಾಕುಂಭ ಮೇಳದಲ್ಲಿ ಮಾಲೆ ವ್ಯಾಪಾರಿ ಮೋನಾಲಿಸಾ ಒಮ್ಮೆಲೇ ಖ್ಯಾತಿ ಪಡೆದರು. ಕ್ಯಾಮೆರಾ ಗಮನ ಸೆಳೆದ ನಂತರ ಅವರ ಜೀವನ ಬದಲಾಯಿತು. ಅತಿಯಾದ ಜನದಟ್ಟಣೆಯಿಂದಾಗಿ ಮನೆಗೆ ವಾಪಸಾದ ಮೋನಾಲಿಸಾ ಈಗ ಯುಟ್ಯೂಬ್‌ನಲ್ಲಿ ವ್ಲಾಗ್‌ಗಳನ್ನು ಪ್ರಕಟಿಸುತ್ತಿದ್ದಾರೆ. ಸರಳ ವಿಡಿಯೋಗಳಿಗೆ ಲಕ್ಷಾಂತರ ವೀಕ್ಷಣೆಗಳು ಬರುತ್ತಿವೆ. ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದ್ದು, ಹೊಸ ಖಾತೆ ತೆರೆದಿದ್ದಾರೆ.
ಮಹಾಕುಂಭ ಮೇಳ (Mahakumbh Mela)ದಲ್ಲಿ ರಾತ್ರೋರಾತ್ರಿ ಪ್ರಸಿದ್ಧಿ ಪಡೆದವರಲ್ಲಿ ಸುಂದರ ಕಣ್ಣಿನ ಬೆಡಗಿ ಮೋನಾಲಿಸಾ (Mona Lisa) ಕೂಡ ಒಬ್ಬರು. ಮಣಿ ಮಾಲೆ ಮಾರಾಟ ಮಾಡ್ತಿದ್ದ ಹುಡುಗಿ ಕ್ಯಾಮರಾ ಕಣ್ಣಿಗೆ ಬೀಳ್ತಿದ್ದಂತೆ ಅದೃಷ್ಟ ಬದಲಾಯ್ತು. ಒಂದ್ಕಡೆ ಮೋನಾಲಿಸಾ ನಿರೀಕ್ಷೆಗಿಂತ ಹೆಚ್ಚು ಫೇಮಸ್ ಆದ್ರೆ ಇನ್ನೊಂದು ಕಡೆ ಅದೇ ಪ್ರಸಿದ್ಧಿ ಅವರಿಗೆ ಮುಳುವಾಯ್ತು. ಮಾಲೆ ಮಾರಾಟ ಮಾಡ್ಕೊಂಡು ಚೆನ್ನಾಗಿದ್ದ ಮೋನಾಲಿಸಾ ಹಿಂದೆ ಜನರ ದಂಡೇ ಬರಲು ಶುರುವಾಗಿತ್ತು. ಮಹಾಕುಂಭ ಮೇಳಕ್ಕೆ ಹೋದವರು ಮೋನಾಲಿಸಾರನ್ನು ಹುಡುಕಿದ್ದಾರೆ. ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಜನಸಾಮಾನ್ಯರು ಮುಂದಾದ್ರೆ, ಮೋನಾಲಿಸಾ ಸಂದರ್ಶನ ಮಾಡಲು ವರದಿಗಾರರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (social media influencer) ಹಿಂದೆ ಬಿದ್ದಿದ್ದರು. ಅವರ ಕಾಟ ತಾಳಲಾರದೆ ಮೋನಾಲಿಸಾ ತಮ್ಮ ಮನೆ ಮಹೇಶ್ವರ್ಗೆ ವಾಪಸ್ ಆಗಿದ್ದಾರೆ.
ಮನೆಗೆ ಬಂದ ಮೋನಾಲಿಸಾ ಈಗ ಯುಟ್ಯೂಬ್ ನಲ್ಲಿ ವ್ಲಾಗ್ ಶುರು ಮಾಡಿದ್ದಾರೆ. 2021 ರಿಂದಲೇ ಮೋನಾಲಿಸಾ ಯುಟ್ಯೂಬ್ ಇದೆ. ಆದ್ರೆ ಅಲ್ಲಿ ಯಾವುದೇ ವಿಡಿಯೋವನ್ನು ಮೋನಾಲಿಸಾ ಹಾಕಿರಲಿಲ್ಲ. ಮಹಾಕುಂಭ ಮೇಳದಲ್ಲಿ ಪ್ರಸಿದ್ಧಿ ಪಡೆದ ಮೇಲೆ ಅದಕ್ಕೆ ವ್ಲಾಗ್ ರೂಪ ನೀಡಿ ವಿಡಿಯೋ ಹಾಕಲು ಶುರು ಮಾಡಿದ್ದಾರೆ. ಅಚ್ಚರಿ ಅಂದ್ರೆ ಮೋನಾಲಿಸಾ ಈ ವ್ಲಾಗ್ ವೇಗವಾಗಿ ವೈರಲ್ ಆಗ್ತಿದೆ. ಒಂದೊಂದು ವಿಡಿಯೋಕ್ಕೆ ಲಕ್ಷಗಟ್ಟಲೆ ವೀವ್ಸ್, ಸಾವಿರಾರು ಲೈಕ್ಸ್ ಹಾಗೂ ಕಮೆಂಟ್ ಬರ್ತಿದೆ.
ಮೋನಾಲಿಸಾಳ ಮಹಾಕುಂಭ ಬಿಸಿನೆಸ್ ಸಂಪೂರ್ಣ ಫ್ಲಾಪ್, ಮುಳುವಾದ ಜನಪ್ರಿಯತೆ, 35 ಸಾವಿರ ಸಾಲ!
ಕೆಲ ಗಂಟೆಗಳ ಹಿಂದೆ ಮೋನಾಲಿಸಾ ತಮ್ಮ ಯುಟ್ಯೂಬ್ ನಲ್ಲಿ ಚಪಾತಿ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಈವರೆಗೆ ಮೂರು ಲಕ್ಷದ 54 ಸಾವಿರ ಬಾರಿ ನೋಡಲಾಗಿದೆ. ಮೋನಾಲಿಸಾ ಮತ್ತು ಅವರ ಸಹೋದರಿಯರಿಗೆ ಸಾಮಾಜಿಕ ಜಾಲತಾಣ ಬಳಕೆ ಸರಿಯಾಗಿ ತಿಳಿದಿಲ್ಲದೆ ಇರಬಹುದು, ಆದ್ರೆ ತಾನು ಏನೇ ಮಾಡಿದ್ರೂ ಜನರು ನೋಡ್ತಾರೆ ಎಂಬ ಸತ್ಯ ಗೊತ್ತಾಗಿದೆ. ಅದು ನಿಜ ಕೂಡ ಆಗಿದೆ. ಮೂರು ದಿನಗಳ ಹಿಂದೆ ಮೋನಾಲಿಸಾ ಯುಟ್ಯೂಬ್ ನಲ್ಲಿ ಪಾತ್ರೆ ತೊಳೆಯುವ ವಿಡಿಯೋ ಪೋಸ್ಟ್ ಮಾಡಿದ್ದರು. ಸಂಜೆ ಆಗ್ತಿದೆ, ಪಾತ್ರೆ ತೊಳೆದು, ಅಡುಗೆ ಮಾಡ್ಬೇಕು ಎನ್ನುತ್ತ ಒಂದಿಷ್ಟು ಪಾತ್ರೆಯನ್ನು ಹೊರಗೆ ತೆಗೆದುಕೊಂಡು ಹೋಗುವ ಮೋನಾಲಿಸಾ, ಪಾತ್ರೆ ಕ್ಲೀನ್ ಮಾಡ್ತಿರೋದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋವನ್ನು ಈವರೆಗೆ 28 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ. 1661ಕ್ಕೂ ಹೆಚ್ಚು ಕಮೆಂಟ್ ಬಂದಿದೆ. ಯುಟ್ಯೂಬರ್ ತಮ್ಮ ವಿಡಿಯೋವನ್ನು ಜನರು ನೋಡ್ಲಿ ಅಂತ ಏನೆಲ್ಲ ಕಸರತ್ತು ಮಾಡ್ತಾರೆ. ಒಂದಿಷ್ಟು ಟ್ಯಾಗ್ಸ್, ಕೀ ವರ್ಡ್ ಹಾಕಿ, ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡ್ತಾರೆ. ಆದ್ರೆ ಮೋನಾಲಿಸಾ ಅದ್ಯಾವ ಕೆಲಸವನ್ನೂ ಮಾಡಿಲ್ಲ. ಹಾಕಿರುವ ವಿಡಿಯೋ ಕೆಳಗೆ ಡಿಸ್ಕ್ರಿಪ್ಶನ್ ಕೂಡ ಇಲ್ಲ. ಆದ್ರೂ ಲಕ್ಷ ಲಕ್ಷದಲ್ಲಿ ಈ ವಿಡಿಯೋಕ್ಕೆ ವೀವ್ಸ್ ಬಂದಿದೆ.
ಕುಂಭಮೇಳ ಸುಂದರಿ ಮೊನಾಲಿಸಾ ಐಎಎಸ್ ಅಧಿಕಾರಿ! ಅಬ್ಬಬ್ಬಾ ಇದೆಂಥ ಸುದ್ದಿ? ಫೋಟೋ ನೋಡಿ ಸುಸ್ತಾದ ಫ್ಯಾನ್ಸ್
ನೀವು ನ್ಯಾಚ್ಯುರಲ್ ಬ್ಯೂಟಿ, ನಿಮ್ಮ ಸೌಂದರ್ಯ ಹಾಗೂ ಮುಗ್ದತೆ ಜನರಿಗೆ ಇಷ್ಟವಾಗಿದೆ. ಅದನ್ನು ಹಾಳು ಮಾಡ್ಕೊಳ್ಳಬೇಡಿ ಎಂದು ಜನರು ಕಮೆಂಟ್ ಹಾಕ್ತಿದ್ದಾರೆ. ಈ ಹಿಂದೆ ಮೋನಾಲಿಸಾ ಫೇಮಸ್ ಆಗ್ತಿದ್ದಂತೆ ಅವರಿಗೆ ಮೇಕ್ ಓವರ್ ಮಾಡಲಾಗಿತ್ತು. ಸಿನಿಮಾಕ್ಕೆ ಆಫರ್ ಕೂಡ ಬಂದಿದೆ ಎಂಬ ಸುದ್ದಿ ಇದೆ. ಆದ್ರೆ ಜನಸಾಮಾನ್ಯರು ಮೋನಾಲಿಸಾ ಮೇಕ್ ಓವರ್ ಇಷ್ಟಪಟ್ಟಿಲ್ಲ. ಮುಗ್ದತೆಯನ್ನು ಹಾಳು ಮಾಡ್ಬೇಡಿ ಎಂದಿದ್ದರು. ಸದ್ಯ ಮೋನಾಲಿಸಾ ಇನ್ಸ್ಟಾ ಐಡಿ ಹ್ಯಾಕ್ ಆಗಿದೆ. ಇದು ಅವರ ಬೇಸರಕ್ಕೆ ಕಾರಣವಾಗಿದ್ದು, ಹೊಸ ಐಡಿ ಕ್ರಿಯೇಟ್ ಮಾಡಿದ್ದು, ಅದಕ್ಕೆ ಬೆಂಬಲ ನೀಡುವಂತೆ ಮೋನಾಲಿಸ ಮನವಿ ಮಾಡಿದ್ದಾರೆ.

