ಪಾಚು ಅಲಿಯಾಸ್ ಶಾಲಿನಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ 'ಸುವರ್ಣ ಸೂಪರ್ ಸ್ಟಾರ್‌' ರಿಯಾಲಿಟಿ ಶೋನಲ್ಲಿ ಇದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ನಟಿ ಮಯೂರಿಗೆ ಸೀಮಂತ  ಮಾಡಿದ್ದಾರೆ. ಪತಿ ಅರುಣ್ ಜೊತೆ ಮಯೂರಿ ಹೆಜ್ಜೆ ಹಾಕಿರುವುದನ್ನು ನೋಡಿ ವೀಕ್ಷಕರ ಮೆಚ್ಚಿಕೊಂಡಿದ್ದಾರೆ.

ಸಂಕ್ರಾಂತಿ ಸಂಚಿಕೆಯಲ್ಲಿ ಶಾಲಿ  ನಡೆಸಿಕೊಡುವ ಕಾರ್ಯಕ್ರಮದಲ್ಲಿ ಸ್ಪರ್ಶ ರೇಖಾ, ವನಿತ ವಾಸು ಹಾಗೂ ಸಂಗೀತ ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ.  ಇದೇ ಎಪಿಸೋಡ್‌ನಲ್ಲಿ ನಟಿ ಮಯೂರಿಗೆ ಸೀಮಂತ ಮಾಡಲಾಗುತ್ತದೆ. ಜೊತೆ ಮಯೂರಿ ಪತಿ ಅರುಣ್ ಜೊತೆ ಹೆಜ್ಜೆ ಹಾಕಿದ್ದಾರೆ. ಪ್ರೋಮೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.

ನಟಿ ಮಯೂರಿ ಸರಳ ಸೀಮಂತ; ಪುಟ್ಟ ಕಂದಮ್ಮನ ಆಗಮಕ್ಕೆ ಕಾಯುತ್ತಿದೆ ಕುಟುಂಬ! 

ಜೂ.12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಯೂರಿ ಶೀಘ್ರವೇ ಕುಟುಂಬಕ್ಕೆ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಮಯೂರಿ ತನ್ನ ಪ್ರೆಗ್ನೆಂಸಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಹಾಗೂ ಇನ್ನಿತ್ತರ ಗರ್ಭಿಣಿಯರ ಜೊತೆ ಕೆಲವೊಂದು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.

 

 
 
 
 
 
 
 
 
 
 
 
 
 
 
 

A post shared by mayuri (@mayurikyatari)