Master Anand daughter: ಪಟಾಕಿ ಹುಟ್ಟಿಸಿಬಿಟ್ಯಲ್ಲೋ ಆನಂದ! ಸೃಜನ್ ಲೋಕೇಶ್ ಮಾಸ್ಟರ್ ಆನಂದ್ ಗೆ ಹೀಗಂದಿದ್ಯಾಕೆ ಗೊತ್ತಾ?

ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ಮಾಸ್ಟರ್ ಆನಂದ್(Master Anand) ಮಗಳು ವಂಶಿಕಾ ಮಾಡ್ತಿರೋ ಮೋಡಿ ಅಷ್ಟಿಷ್ಟಲ್ಲ. ಈಕೆಯ ಮಾತು ಕೇಳಿ ಪಟಾಕಿ ಹುಟ್ಟಿಸಿಬಿಟ್ಯಲ್ಲೋ ಆನಂದ ಅಂತ ಮಾಸ್ಟರ್ ಆನಂದ್ ಕಾಲೆಳೆದಿದ್ದಾರೆ ಸೃಜನ್.

 

Master Anands daughter sets Nammamma Super star stage crazy

ಅನಂತ್ ನಾಗ್ (Anant nag) ಅವರ ಹಳೆಯ ಸಿನಿಮಾ ನೋಡಿದರೆ ಪುಟಾಣಿ ಹುಡುಗನೊಬ್ಬ ಪಟಾಕಿ ಥರ ಮಾತಾಡೋದು ಕಾಣಬಹುದು. ಹಿರಿಯ ನಟ ದೊಡ್ಡಣ್ಣ ಅವರ ಜೊತೆಗೆ ಈತನ ಆಕ್ಟಿಂಗ್ ಕಂಡರೆ ಹೊಟ್ಟೆ ಹಣ್ಣಾಗುವಂತೆ ನಗುವವರಿದ್ದಾರೆ. ಇದೀಗ ಈತನ ಮಗಳ ಸರದಿ. ತಂದೆಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲ ಅಂತ ಈ ಪುಟಾಣಿ ಪಟಾಕಿ ಸಿಡಿದಂಗೆ ಮಾಡುತ್ತಿದ್ದಾಳೆ. 'ನನ್ನಮ್ಮ ಸೂಪರ್‌ ಸ್ಟಾರ್' (Super star Reality show) ರಿಯಾಲಿಟಿ ಶೋದಲ್ಲಿ ಈ ಪುಟಾಣಿಯದ್ದೇ ಹವಾ ಈಗ.

'ನನ್ನ ಹೆಸರು ವಂಶಿಕಾ ಅಂಜನಿ ಕಶ್ಯಪ್. ಎಲ್ಲರೂ ನನ್ನ ವಂಶಿ ಅಂತ ಕರೆಯುತ್ತಾರೆ. ಅದಕ್ಕೆ ಇಷ್ಟು ಉದ್ದ ಹೆಸರು ಬೇಕಾ? ಎಲ್ಲರೂ ನನ್ನನ್ನು ಮಾಸ್ಟರ್ ಆನಂದ್ (Master Anand) ಮಗಳು ಅಂತ ಕರೆಯುತ್ತಾರೆ. ಇನ್ಮೇಲೆ ನನ್ನ ಹೆಸರನ್ನೇ ಕರೆಯಬೇಕು... ' ಹೀಗೆ ಮಾತು ಶುರು ಮಾಡುವ ಪುಟಾಣಿ ಆಮೇಲಾಮೇಲೆ ತನ್ನಪ್ಪನನ್ನೇ ಮೀರಿಸುವಂಥಾ ಡೈಲಾಗ್ ಹೊಡೀತಾಳೆ. ಬಾಲನಟನಾಗಿ ಹೆಸರು ಮಾಡಿರುವ ಮಾಸ್ಟರ್ ಆನಂದ್ ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ನಟ, ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗಲೂ ಕೂಡ ಮಾಸ್ಟರ್ ಆನಂದ್ ಎಂದೇ ಅವರನ್ನು ಕರೆಯಲಾಗುತ್ತದೆ. ಈಗ ಅವರ ಮಕ್ಕಳ ಸರದಿ. ಈ ಹಿಂದೆ ಕೆಲ ರಿಯಾಲಿಟಿ ಶೋನಲ್ಲಿ ಮಾಸ್ಟರ್ ಆನಂದ್ ಪುತ್ರ ಕಾಣಿಸಿಕೊಂಡಿದ್ದರೆ, ಈಗ ಮಗಳು ವಂಶಿಕಾ ಸರದಿ ಎನ್ನಬಹುದು.

#MeToo case: ವಿಚಾರಣೆಗೆ ಹಾಜರಾಗಲು ನಾತಿಚರಾಮಿ ನಟಿಗೆ ನೋಟಿಸ್!

ವಂಶಿಕಾ 'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಸ್ಪರ್ಧಿ. ವಯಸ್ಸು ಇನ್ನೂ 4 ವರ್ಷ. ಈಗಷ್ಟೇ ಮಾತು ಕಲಿತಿರುವ ತೊದಲು ನುಡಿಗಳ ಕಂದಮ್ಮ ಈಕೆ. ಆದರೆ ಆ ಪುಟ್ಟ ಬಾಯಿಯಿಂದ ಹೊರಬರುವ ಮಾತೋ.. ಎಂಥಾ ಮಾತುಗಾರರನ್ನೇ ಬೆಚ್ಚಿ ಬೀಳಿಸೋ ಹಾಗಿದೆ. ವಂಶಿಕಾ ಈಗ ಪ್ರೇಕ್ಷಕರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾಳೆ.

ಈ ಹಿಂದೆ 'ರಾಜಾ ರಾಣಿ' ಗ್ರ್ಯಾಂಡ್ ಫಿನಾಲೆಯಲ್ಲಿ 'ನನ್ನಮ್ಮ ಸೂಪರ್ ಸ್ಟಾರ್' ಶೋ ಮಕ್ಕಳನ್ನು ಪರಿಚಯಿಸಲಾಗಿತ್ತು. ಅಲ್ಲಿಯೂ ವಂಶಿಕಾ ಹೈಲೈಟ್ ಆಗಿದ್ದಳು. 'ನನ್ನ ಅಪ್ಪ ಟಿವಿ ನೋಡುತ್ತಿದ್ದರುವಾಗ ನಾನು ಮಾತನಾಡಿದರೆ ಸುಮ್ಮನಿರು ಅಂತಾರೆ, ಆಮೇಲೆ ಅವರೇ ಮಾತನಾಡುತ್ತಾರೆ, ಮನೆಯಲ್ಲಿಯೂ ಅವರೇ ಮಾತನಾಡುತ್ತಾರೆ, ಎಲ್ಲ ಕಡೆ ಅವರು ಮಾತನಾಡುತ್ತಾರೆ' ಅಂತ ಈ ಕಂದಮ್ಮ ಜಡ್ಜಸ್ ಗಳಾದ ಸೃಜನ್ ಲೋಕೇಶ್, ತಾರಾ ಮುಂದೆಯೇ ದೂರು ಹೇಳಿಕೊಂಡಿದ್ದಾಳೆ. ಆಗ ಸೃಜನ್ (Srujan) 'ಲೋ, ಆನಂದ ಪಟಾಕಿ ಹುಟ್ಟಿಸಿಬಿಟ್ಟಿದ್ಯಲ್ಲೋ..' ಅಂದಿದ್ದು ಅಕ್ಷರಶಃ ಪ್ರೇಕ್ಷಕರ ಮಾತೂ ಆಗಿದ್ದ ಕಾರಣ ಸಖತ್ ವೈರಲ್ ಆಗಿದೆ. ಜೊತೆಗೆ ವಂಶಿಕಾ ಮಾತುಗಳನ್ನು ಜನ ಮತ್ತೆ ಮತ್ತೆ ಕೇಳಿ ನಗುತ್ತಿದ್ದಾರೆ. 

Aishwarya Rai Bachchan: ಸರ್ವರ್ ಆದ ಐಶ್ವರ್ಯಾ ರೈ, 30 ಜನಕ್ಕೆ ಊಟ ಬಡಿಸಿದ ಬಿಗ್‌ಬಿ ಸೊಸೆ

'ನನ್ನಮ್ಮ ಸೂಪರ್‌ ಸ್ಟಾರ್' ಶೋ ಈ ಶನಿವಾರದಿಂದ ಆರಂಭವಾಗಿದ್ದು, ಇಂದೂ ಪ್ರಸಾರವಾಗಲಿದೆ. ಪ್ರತೀ ವೀಕೆಂಡ್ ಅಂದರೆ ಶನಿವಾರ, ಭಾನುವಾರ ಸಂಜೆ 7.30ಗೆ ಪುಟ್ಟ ಮಕ್ಕಳು ಹಾಗೂ ಅಮ್ಮಂದಿರು ಭಾಗವಹಿಸಲಿದ್ದಾರೆ.

ವಂಶಿಕಾ ಜೊತೆಗೆ ಗೀತಾ ಧಾರಾವಾಹಿ ನಟಿ ಅಮೃತಾ ನಾಯ್ಡು  ಹಾಗೂ ಅವರ ಮಗಳು ಸಮನ್ವಿ, ಕಮಲಿ ಧಾರಾವಾಹಿ ನಟಿ ಭವ್ಯಶ್ರೀ ರೈ ಹಾಗೂ ಅವರ ಮಗು ಸುಪ್ರಭಮ್, ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ಭಾಗ್ಯಶ್ರೀ ಮತ್ತು ಅವರ ಮಗ ಆಯುಷ್ಮಾನ್, ಆರ್‌ಜೆ ಪುನೀತಾ ಮತ್ತವರ ಪುತ್ರ ಆರ್ಯಾ, ಗೀತಾ ಧಾರಾವಾಹಿ ನಟಿ ವಿಂಧ್ಯಾ ಆರ್ ಮತ್ತು ಅವರ ಮಗ ರೋಹಿತ್, ಕುಲವಧು ಧಾರಾವಾಹಿ ನಟಿ ಸುಪ್ರೀತಾ ಹಾಗೂ ಅವರ ಮಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಕಿರುತೆರೆಯ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಜೊತೆಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರುವುದು ಪ್ರೇಕ್ಷಕರ ಮೆಚ್ಚುಗೆಗೂ ಕಾರಣವಾಗಿದೆ. 

Shamita Shetty health: ಅನ್ನ ತಿನ್ನೋಕೆ ಆಗಲ್ಲ, ಶೆಲ್ಪಾ ಶೆಟ್ಟಿ ತಂಗಿಗಿದೆ ವಿಚಿತ್ರ ಕಾಯಿಲೆ?
 

Latest Videos
Follow Us:
Download App:
  • android
  • ios