* ಕನ್ನಡದ ಬಿಗ್ ಬಾಸ್ ಫಿನಾನೆ* ಮಂಜು ಪಾವಗಡ ವಿನ್ನರ್* ಹಾಸ್ಯ ಕಲಾವಿದನಿಗೆ ಒಲಿದ ಪಟ್ಟ* ಮಜಾಭಾರತ ಖ್ಯಾತಿಯ ಹಳ್ಳಿ ಹುಡುಗ

ಬೆಂಗಳೂರು(ಆ. 08) ಕೊರೋನಾ ಕಾರಣಕ್ಕೆ ಬಿಗ್ ಬಾಸ್ ಸೀಸನ್ ಶೂಟಿಂಗ್ ಬಂದ್ ಆಗಿದ್ದ ನಂತರ ಪುನಃ ಆರಂಭವಾಗಿತ್ತು. ಮತ್ತೆ ಶುರುವಾಗಿದ್ದಾಗ ಮಾತನಾಡಿದ್ದ ಮಂಜುಪಾವಗಡ 'ಏನೋ ಸಾಧನೆ ಮಾಡಬೇಕು ಅಂತ ಇಲ್ಲಿ ಬಂದಿದ್ದೇವು.. ಆದರೆ ಹೀಗೆ ಆಗಿಹೋಯಿತು' ಎಂದು ಮಂಜು ನೊಂದಿದ್ದರು.

ಬೆಳಗಲಿ ನಗೆಗಾರ ಎಂದು ಚಕ್ರವರ್ತಿ ಹಾರೈಸಿ ಹೋಗಿದ್ದರು. ಈಗ ಮಂಜು ಪಾವಗಡ ವಿನ್ನರ್ ಆಗಿದ್ದಾರೆ. ಕಷ್ಟ ಪಟ್ಟು ಮೇಲೆ ಬಂದ ಮಂಜು ಪಾವಗಡ ಅವರಿಗೆ ಅದ್ಭುತವಾದ ಯಶಸ್ಸು ಸಿಕ್ಕಿದೆ.

ಮಜಾಭಾರತದಲ್ಲಿ ಮನೆ ಮನೆಗೆ ನಗು ಹಂಚಿಸುತ್ತಿದ್ದ ಮಂಜು ವಿನ್ನರ್ ಆಗಬೇಕು ಎಂದು ಮಜಾಭಾರತದ ಕಲಾವಿದರು ಹಾರೈಸಿದ್ದರು. ಮಜಾಭಾರತದ ತೀರ್ಪುಗಾರರ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಮಂಜುಗೆ ಶುಭ ಹಾರೈಸಿದ್ದರು.

ಹೊರಬಂದ ಪ್ರಶಾಂತ್ ಮಾಡಿದ ಶಪಥ

ಟಾಸ್ಕ್ ಮತ್ತು ಮನರಂಜನೆ ನೀಡುವುದರಲ್ಲಿ ಮಿಂಚಿದ ಮಂಜು ಅವರಿಗೆ ಪಟ್ಟ ಒಲಿದು ಬಂದಿದೆ. ಎಲ್ಲ ಬಿಗ್ ಬಾಸ್ ಸ್ಪರ್ಧಿಗಳ ಎದುರಿನಲ್ಲಿ ಮಂಜು ಪಾವಗಡ ಕೈಯನ್ನು ಸುದೀಪ್ ಎತ್ತಿದ್ದಾರೆ. ಈ ಮೂಲಕ 50 ಲಕ್ಷದ ಬಹುಮಾನದ ಮೊತ್ತ ಮಂಜು ಪಾಲಾಗಿದೆ. ಗೆಲುವನ್ನು ಮಂಜು ಪಾವಗಡ ಮಜಾಭಾರತ ತಂಡಕ್ಕೆ ಅರ್ಪಿಸಿದ್ದಾರೆ.

ಬಿಗ್ ಬಾಸ್ ಮನೆ ಫಿನಾಲೆ ಹಂತದಲ್ಲಿ ಇದೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದಾರೆ. ಭಾನುವಾರ ಮೊದಲೆಯವರಾಗಿ ದಿವ್ಯಾ ಯು ಹೊರಗೆ ಬಂದಿದ್ದರು.

ಮತಗಳ ಲೆಕ್ಕ; ಮಾತನಾಡುತ್ತ ಸುದೀಪ್ ನಿಮಗೆ ಒಂದು ಅಚ್ಚರಿ ಹೇಳುತ್ತೇನೆ. ಈ ಬಾರಿ ಹಿಂದಿನ ಎಲ್ಲ ಬಿಗ್ ಬಾಸ್ ಗಳನ್ನು ಮೀರಿ ಜನ ವೋಟ್ ಮಾಡಿದ್ದಾರೆ. ಮೊದಲನೆ ಸ್ಥಾನದವರಿಗೆ 45 ಲಕ್ಷ ಎರಡನೇ ಸ್ಥಾನ ಪಡೆದುಕೊಂಡವರಿಗೆ 43 ಲಕ್ಷ ಮತ ಬಿದ್ದಿದೆ ಎಂದು ತಿಳಿಸಿದ್ದರು.