ಮನೆಯಲ್ಲಿಯೇ ಲಾಕ್ ಆದ ಮಾನವ, ಸಮಯ, ಸಂದರ್ಭವನ್ನು ಖುಷ್ ಖುಷಿಯಾಗಿ ಬಳಸಿಕೊಳ್ಳುವುದು ಅನಿವಾರ್ಯ. ಅಂಥ ಕೆಲಸಕ್ಕೆ ಕೈ ಹಾಕಿದೆ ಈ ಫ್ಯಾಮಿಲಿ. ಟಿಕ್ ಟಾಕ್ ಮೂಲಕ ಮನಸ್ಸಿಗೆ ಬೇಜಾರು ಆಗದಂತೆ ನೋಡಿಕೊಳ್ಳುತ್ತಿದೆ ಈ ಫ್ಯಾಮಿಲಿ.
ಮಂಡ್ಯದಲ್ಲಿದೆ ಸೂಪರ್ ಟಿಕ್ ಟಾಕ್ ಫ್ಯಾಮಿಲಿ
ಮಂಡ್ಯದಲ್ಲೂಂದು ಸೂಪರ್ ಎನ್ನಿಸೋ ಟಿಕ್ ಟಾಕ್ ಫ್ಯಾಮಿಲಿ ಇದೆ..ಕರೋನಾ ದಿಂದ ಮನೆಯಲ್ಲಿ ಲಾಕ್ ಆಗಿರೋ ಸೂರಪ್ಪಚಾರ್ ಫ್ಯಾಮಿಲಿ ತಮಗಿರೋ ಇರೋ ಸಮಯವನ್ನ ಹಾಳು ಮಾಡದೇ ತಮ್ಮದೇ ಸ್ಟೈಲ್ ನಲ್ಲಿ ಟಿಕ್ ಟಾಕ್ ಮಾಡುತ್ತಾ ಕಳೆಯುತ್ತಾರೆ ..ಮನೆಯಲ್ಲಿರೋ20ಕ್ಕೂ ಹೆಚ್ಚು ಜನರು ಸೇರಿ ಒಂದೇ ಹಾಡಿಗೆ ಟಿಕ್ ಟಾಕ್ ಮಾಡ್ತಿರೋದು ಸ್ಪೆಷಲ್...
@dileepkgowda6 ಪ್ರೀತಿಯೆ ನನ್ನುಸಿರು ಫ್ಯಾಮಿಲಿ making video ನಿಮಗೋಸ್ಕರ (thnks for ur unconditional love and support lov u all🥰❤️director yaru anta keltidralla nane😅🦸
Ad1♬ original sound - Dileep K Gowda
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಮಂಡ್ಯ ಫ್ಯಾಮಿಲಿ
ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಫ್ರಾನ್ಸ್ ಆಗಿರೋ ಇವ್ರೆಲ್ಲರೂ ಒಟ್ಟಿಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ನಂತ್ರ ಟಿಕ್ ಟಾಕ್ ಮಾಡ್ತಾರೆ..ವಿಷ್ಣು ದಾದನ ಪ್ರೀತಿಯೇ ನನ್ನುಸಿರು ಹಾಡಿಗೆ ಮಾಡಿರೋ ಟಿಕ್ ಟಾಕ್ ಸೋಷಿಯಲ್ ನೆಟ್ವರ್ಕ್ ನಲ್ಲಿ ಸಖತ್ ವೈರಲ್ ಆಗಿದೆ ..
@dileepkgowda6 ಯಾರೋ ಇದನ್ನ(hack) ಮಾಡಿ ಡಿಲೀಟ್ ಮಾಡಿದ್ದಾರೆ ಅದಕ್ಕೆ ಮತ್ತೆ Re-upload ಮಾಡ್ತಾ ಇದೀನಿ.. ಡಿಲೀಟ್ ಆಗಿದ್ದು ವಿಡಿಯೋ ಅಷ್ಟೇ ಇದಕ್ಕೆ ಸಿಕ್ಕಿರೋ ಪ್ರೀತಿಯಲ್ಲ❣️❤️🥰lov u all
♬ original sound - Dileep K Gowda
ಸೂರಪ್ಪಚಾರ್ ಫ್ಯಾಮಿಲಿ ಎನರ್ಜಿ ಗೆ ಸಖತ್ ಫ್ಯಾನ್ಸ್
ಬೆಂಗಳೂರಿನಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರೋ ದಿಲೀಪ್ ಕೆ ಗೌಡ ಕರೋನಾ ಎಫೆಕ್ಟ್ ನಿಂದ ಮಂಡ್ಯದ ಮನೆಯಲ್ಲಿ ತಿಂಗಳಿಂದ ಕಾಲಕಳೆಯುತ್ತಿದ್ದಾರೆ...ಈ ಸಮಯವನ್ನ ಬಳಸಿಕೊಂಡು ಜನರನ್ನ ಎಂಟರ್ಟೈನ್ಮೆಂಟ್ ಮಾಡಲು ಫ್ಯಾಮಿಲಿ ಜೊತೆ ಟಿಕ್ ಟಾಕ್ ಮಾಡ್ತಿದ್ದಾರೆ. ದಿಲೀಪ್ ಕೊರಿಯೋಗ್ರಾಫ್ ಗೆ ಚಂದ್ರು.ಸುಶ್ಮಿತಾ. ಮಧು. ಶಶಿಶೇಖರ್. ಲೋಕೇಶ್. ಸಂತೋಶ್ .ಪ್ರ್ಈಪ್. ಆರ್ಯನ್. ಚಂದನ. ಆರ್ಯನ್ ಸೇರಿದಂತೆ ಸಣ್ಣವರಿಂದ ದೊಡ್ಡವರು ಎಲ್ಲರೂ ಸೇರಿ ಕುಣಿದು ಇಡೀ ರಾಜ್ಯದ ಜನರನ್ನೇ ರಂಜಿಸುತ್ತಿದ್ದಾರೆ
