ಮಗುವಿಗೆ ಹಾಲುಣಿಸುತ್ತಿರುವೆ, ಕಮ್‌ಬ್ಯಾಕ್‌ಗೆ ಸಮಯವಿಲ್ಲ ಆದರೆ ಡ್ಯಾನ್ಸ್ ಮಾಡುತ್ತಿರುವೆ: ಕಿರುತೆರೆ ನಟಿ ಮಾನಸ ಜೋಶಿ
ಡ್ಯಾನ್ಸ್ ಮಾಡಲು ನಿರ್ಧರಿಸಿರುವೆ ಆದರೆ ಕಮ್‌ಬ್ಯಾಕ್ ಮಾಡಲು ಕೊಂಚ ಸಮಯ ಬೇಕು ಎಂದು ಕಿರುತೆರೆ ನಟಿ ಮಾನಸ ಜೋಶಿ.
ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಮಾನಸ ಜೋಶಿ ಹೆಣ್ಣು ಮಗವಿಗೆ ಜನ್ಮ ನೀಡದ ಮೇಲೆ ಬಣ್ಣದ ಪ್ರಪಂಚದಿಂದ ಬ್ರೇಕ್ ತೆಗೆದುಕೊಂಡರು. ಫ್ಯಾಮಿಲಿ ಮತ್ತು ಮದರ್‌ಹುಡ್ ಎಂಜಾಯ್ ಮಾಡುತ್ತಿರುವ ನಟಿ ಏನೆಲ್ಲಾ ಚಾಲೆಂಜ್‌ಗಳನ್ನು ಎದುರಿಸುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
'ಪ್ರೆಗ್ನೆನ್ಸಿ ನಂತರ ಮತ್ತೆ ಡ್ಯಾನ್ಸ್‌ಗೆ ಮರುಳುವುದು ದೊಡ್ಡ ಜರ್ನಿ. ಮದರ್‌ಹುಡ್ ತುಂಬಾ ಕ್ರೇಜಿ ಜರ್ನಿ ಅದರಲ್ಲೂ ಡ್ಯಾನ್ಸ್ ಮಾಡುವುದು ಇನ್ನೂ ದೊಡ್ಡ ಕ್ರೇಜಿ ನಿರ್ಧಾರ ಏಕೆಂದರೆ ನಮ್ಮ ದೇಹ ಸಪೋರ್ಟ್ ಮಾಡುವುದಿಲ್ಲ. ನಮ್ಮ ಭಾರ ಅನಿಸುತ್ತದೆ. ಡೆಲಿವರಿ ಆದ್ಮೇಲೆ ಮೊದಲ ಸಲ ಡ್ಯಾನ್ಸ್ ಮಾಡಿದೆ ಅದು ಕಡಿಮೆ ಸಮಯ. ವೇದಿಕೆ ಮೇಲೆ ಮತ್ತೆ ಡ್ಯಾನ್ಸ್ ಮಾಡುವುದಕ್ಕೆ ಖುಷಿಯಾಗುತ್ತದೆ. ನನ್ನ ಗುರುಗಳಾದ ಮಾಯಾ ಕೃಷ್ಣ ರಾವ್ ಅವರಿಗೆ ಟ್ರಿಬ್ಯೂಟ್ ನಾನೇ ಕೋರಿಯೋಗ್ರಾಫ್ ಮಾಡಿ ಡ್ಯಾನ್ಸ್ ಮಾಡುತ್ತಿರುವೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Manasa Joshi ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಮಾನಸ ಜೋಶಿ
'ಮದುವೆ ಮಗುಗೂ ಮುನ್ನ ನನ್ನ ಹಳೆ ತನಕ್ಕೆ ಮರುಳುವುದು ಕಷ್ಟವಾಗುತ್ತದೆ. ಏನೇ ಮಾಡಿದ್ದರೂ ನಮ್ಮ ದೇಹ ಆಗಿದ್ದ ಕಂಫರ್ಟ್ ಫೇಸ್ ತಲುಪುವುದಿಲ್ಲ. ಆರಾಮ್ ಆಗಿ ಕುಳಿತುಕೊಂಡು ಎದ್ದೇಳುವುದು ಕೂಡ ಕಷ್ಟವಾಗುತ್ತದೆ ಒಮ್ಮೆ. ಹಳೆ ಮಾನಸಿ ಇದ್ದ ರೀತಿಯಲ್ಲಿ ನಾನು ಇರುವುದು ಕಷ್ಟ ಆಗಬಹುದು ಆದರೆ ಇಲ್ಲಿಂದ ಈಗಿಂದ ನನ್ನನ್ನು ನಾನೇ channelise ಮಾಡಿಕೊಂಡು ನನ್ನ ದೇಹಕ್ಕೆ ಏನು ಅಗತ್ಯವಿದೆ ಅದನ್ನು ಮಾಡಬೇಕು. ನನ್ನಲ್ಲಿ ಆಗಿರುವ ಹೊಸ ಬದಲಾವಣೆ ಈಗ ನಾನು ಇರಬೇಕಿರು ರೀತಿಯನ್ನು ಅಭ್ಯಾಸ ಮಾಡಿಕೊಳ್ಳುತ್ತಿರುವೆ' ಎಂದು ಮಾನಸ ಹೇಳಿದ್ದಾರೆ
'ನನ್ನ ಸಂಪೂರ್ಣ ಶೆಡ್ಯೂಲ್ ನನ್ನ ಮಗಳ ಮೇಲಿದೆ. ಆಕೆ ದಿನಚರಿಯನ್ನು ತಲೆಯಲ್ಲಿ ಇಟ್ಟುಕೊಂಡು ನನ್ನ ದಿನ ಪ್ಲ್ಯಾನ್ ಮಾಡುವೆ. ಕೆಲವೊಮ್ಮೆ ನಾವು ಅಂದುಕೊಂಡ ರೀತಿಯಲ್ಲಿ ನಡೆಯುವುದಿಲ್ಲ. ಪ್ರತಿ ದಿನವೂ ಚಾಲೆಂಜ್ ಆಗಿದೆ ಪ್ರತಿ ದಿನವೂ ವಿಭಿನ್ನವಾಗಿದೆ ಆದರೆ ಕೊನೆಯಲ್ಲಿ ನನ್ನ ಮಗಳ ನಗು ಎಲ್ಲಾ ನೋವು ಕಷ್ಟಗಳನ್ನು ಮರೆಸುತ್ತದೆ. ಟೈಮ್ ಮ್ಯಾನೇಜ್‌ಮೆಂಟ್‌ನ ಕಲಿಯುತ್ತಿರುವೆ. ಮೊದಲು ಅಷ್ಟು ಜವಾಬ್ದಾರಿಗಳು ಇರಲಿಲ್ಲ ನನ್ನ ಕೆಲಸಗಳನ್ನು ಯಾವಾಗ ಬೇಕೋ ಆಗ ಮಾಡಿಕೊಂಡು ಇರುತ್ತಿದ್ದೆ ಆದರೆ ಈಗ ನನ್ನ ಮಗಳು ಹೇಳುವ ರೀತಿ ನಡೆಯುತ್ತದೆ. ನನ್ನ ಪತಿ ಮತ್ತು ನನ್ನ ತಾಯಿ ಕೆಲಸಗಳು ಅವರ ಟೈಂ ನೋಡಿಕೊಂಡು ನಾನು ಮುಂದುವರೆಯಬೇಕು. ಮಗುವಿಗೆ ನಾನು ಹಾಲುಣಿಸುತ್ತಿರುವ ಕಾರಣ ಇರಲೇ ಬೇಕು' ಎಂದಿದ್ದಾರೆ ಮಾನಸ.
ಒಂದೊಳ್ಳೆ ಕಾರಣಕ್ಕೆ ಕೂದಲು ದಾನ ಮಾಡಿದ ಗರ್ಭಿಣಿ ನಟಿ ಮಾನಸಾ ಜೋಶಿ
'ಒಂದುವರೆ ತಿಂಗಳಿನಲ್ಲಿ ನನ್ನ ಮಗಳು ಒಂದು ವರ್ಷ ಮುಟ್ಟುತ್ತಾಳೆ. ಸಮಯ ಬೇಗ ಓಡುತ್ತಿದೆ. ಮಗುವಿಗೆ ಜನ್ಮ ನೀಡುವ ಕ್ಷಣ ಈ ಜರ್ನಿ ಅದ್ಭುತ ಆದರೆ ಆರ್ಟಿಸ್ಟ್ ಆಗಿ ಕೊಂಚ ಕಷ್ಟ ಅನಿಸುತ್ತದೆ. ಗರ್ಭಿಣಿ ಆದ ಸಮಯದಲ್ಲಿ ತುಂಬಾ ಆಫರ್‌ಗಳು ಬಂತು ಆದರೆ ಮ್ಯಾನೇಜ್ ಮಾಡಲು ಕಷ್ಟ ಆಗುತ್ತದೆ ಎಂದು ರಿಜೆಕ್ಟ್ ಮಾಡಿದೆ. ನನ್ನ ಮಗಳು ಸ್ವಲ್ಪ ದೊಡ್ಡವಳಾಗಬೇಕು ಆನಂತರ ನಾನು ನಟನೆಗೆ ಬರುವೆ. ಸಣ್ಣ ಪುಟ್ಟ ಪಾತ್ರ ಅಥವಾ ಗೆಸ್ಟ್ ಆಗಿ ಆದರೂ ಮಾಡಲು ರೆಡಿಯಾಗಿರುವೆ. ಡ್ಯಾನ್ಸ್ ವಿಚಾರದಲ್ಲಿ ತುಂಬಾ ಸೀರಿಯಸ್ ಆಗಿರುವೆ' ಎಂದು ಮಾನಸ ಹೇಳಿದ್ದಾರೆ.