ಝೀ ಕನ್ನಡ ವೇದಿಕೆ ಮೇಲೆ ಮತ್ತೆ ಒಂದಾದ ‘ಮಾಲ್ಗುಡಿ ಡೇಸ್’ ಖ್ಯಾತಿಯ ಸ್ವಾಮಿ - ರಾಜಮ್
ಮಾಲ್ಗುಡಿ ಡೇಸ್ ಮೂಲಕ ಕರ್ನಾಟಕ ಮಾತ್ರ ಅಲ್ಲ, ದೇಶದ ಮೂಲೆ ಮೂಲೆಯಲ್ಲೂ ಮನೆಮಾತಾಗಿದ್ದ ಸ್ವಾಮಿ ಮತ್ತು ರಾಜಮ್ ಜೋಡಿ ಇದೀಗ 38 ವರ್ಷದ ನಂತರ ಝೀ ವೇದಿಕೆ ಮೇಲೆ ಒಂದಾಗಿದ್ದಾರೆ.
ಬರೋಬ್ಬರಿ ಮೂವತ್ತ ಎಂಟು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ (Malgudi Days) ಸೀರಿಯಲ್ ನೆನಪಿದ್ಯಾ? ಖಂಡಿತಾ ನೆನಪಿರಲೇಬೇಕು ಅಲ್ವಾ? ಕರ್ನಾಟಕ ಮಾತ್ರ ಅಲ್ಲ, ದೇಶದ ಮೂಲೆ ಮೂಲೆಯಲ್ಲೂ ಜನರನ್ನು ಸೆಳೆದ ಸೀರಿಯಲ್ ಇದಾಗಿತ್ತು. ಇಂದಿಗೂ ಮಾಲ್ಗುಡಿ ಡೇಸ್ ಎಂದ ಕೂಡಲೇ ಜನರ ಮುಖದಲ್ಲಿ ಮಂದಹಾಸ ಮೂಡುತ್ತೆ ಅಂದ್ರೆ, ಅದಕ್ಕೆ ಕಾರಣ ದೂರದರ್ಶನದ ಆ ಸೀರಿಯಲ್ ಅಂದು ಗಳಿಸಿದ್ದ ಜನಪ್ರಿಯತೆ. ಯುವಕರಿಂದ ಹಿಡಿದು ಮುದುಕರವರೆಗೂ ಆ ಸೀರಿಯಲ್ ಸೆಳೆದಿದ್ದ ರೀತಿ.
ಮಾಲ್ಗುಡಿ ಡೇಸ್, ಪಲ್ಲವಿ ಅನುಪಲ್ಲವಿ ಮೂಲಕ ಮೋಡಿ ಮಾಡಿದ ಈ ಬಾಲ ನಟ ಈವಾಗ ಏನ್ ಮಾಡ್ತಿದ್ದಾರೆ ಗೊತ್ತಾ?
ನಟ ಭಯಂಕರ ಶಂಕರ್ ನಾಗ್ (Shankar Nag) ಅವರ ಕನಸಿನ ಕೂಸು ಮಾಲ್ಗುಡಿ ಡೇಸ್. ಶಿವಮೊಗ್ಗದ ಶಿವಪ್ಪನಾಯಕನ ಅರಮನೆ, ಆಗುಂಬೆ, ಅರಸಾಳು ರೈಲ್ವೆ ನಿಲ್ದಾಣ ಸೇರಿ ಶಿವಮೊಗ್ಗದ ಸುಂದರವಾದ ತಾಣದಲ್ಲಿ ಈ ಸೀರಿಯಲ್ ಚಿತ್ರೀಕರಿಸಲಾಗಿತ್ತು. ಈವಾಗ ಯಾಕಪ್ಪ ಬಂತು ಮಾಲ್ಗುಡಿ ಡೇಸ್ ವಿಷ್ಯ ಅಂದ್ರೆ. ಅದಕ್ಕೆ ಕಾರಣ ಮಾಲ್ಗುಡಿ ಡೇಸ್ ನ ಸ್ವಾಮಿ ಮತ್ತು ರಾಜಮ್. ಮಾಲ್ಗುಡಿ ಡೇಸ್ ಪ್ರಸಾರವಾಗಿ ಬರೋಬ್ಬರಿ 38 ವರ್ಷಗಳ ಬಳಿಕ ಇದೀಗ ಸ್ವಾಮಿ ಮತ್ತು ರಾಜಮ್ ಝೀ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಶಂಕರ್‌ನಾಗ್ ಗೌರವಾರ್ಥ ಅರಸಾಳು ರೇಲ್ವೆ ಸ್ಟೇಶನ್ ಆಯ್ತು ಮಾಲ್ಗುಡಿ ಮ್ಯೂಸಿಯಂ
ಮಾಲ್ಗುಡಿ ಡೇಸ್ ನಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದ ಪಾತ್ರ ಎಂದರೆ ಅದು ಸ್ವಾಮಿ ಮತ್ತು ರಾಜಮ್. ಸ್ವಾಮಿ ಮತ್ತು ರಾಜಮ್ ನ (Rajam and Swamy) ಬಾಲ್ಯದ ಪಾತ್ರಗಳಲ್ಲಿ ಸ್ವಾಮಿಯಾಗಿ ಮಾಸ್ಟರ್ ಮಂಜುನಾಥ್ ಹಾಗೂ ರಾಜಮ್ ಆಗಿ ರೋಹಿತ್ ಶ್ರೀನಾಥ್ (Rohith Sreenath) ನಟಿಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ಈ ಜೋಡಿ ಝೀ ವೇದಿಕೆಯ ಮೇಲೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇದಿಕೆಯಲ್ಲಿ ಈ ಜೋಡಿ ತಮ್ಮ ಸ್ನೇಹದ ಕುರಿತು ಮಾತನಾಡಿದ್ದಾರೆ. ಮಾಸ್ಟರ್ ಮಂಜುನಾಥ್ ಮತ್ತು ರೋಹಿತ್ ಇಬ್ಬರು ಮಾಲ್ಗುಡಿ ಡೇಸ್ ನಲ್ಲಿ ಮಾತ್ರ ಸ್ನೇಹಿತರಾಗಿಲ್ಲ, ಬದಲಾಗಿ ನಿಜ ಜೀವನದಲ್ಲೂ ಇಬ್ಬರು ಬೆಸ್ಟ್ ಫ್ರೆಂಡ್ಸ್. ಕಳೆದ 42 ವರ್ಷಗಳಿಂದಲೂ ಈ ಜೋಡಿ ಸ್ನೇಹಿತರಂತೆ. ಇವತ್ತಿಗೂ ಮಂಜುನಾಥ್ ದೇಶ, ವಿದೇಶಕ್ಕೂ ಹೋದ್ರೂ ಜನ ನೀವಿನ್ನೂ ರಾಜಮ್ ಜೊತೆ ಫ್ರೆಂಡ್ ಆಗಿದ್ದೀರಾ ಅಂತ ಕೇಳ್ತಾರೆ ಅನ್ನೋ ವಿಷಯವನ್ನು ಬಿಚ್ಚಿಟ್ಟರು ಮಂಜುನಾಥ್.
ನಟನೆ ಬಿಟ್ಟು 30 ವರ್ಷವಾಯ್ತು: ಎಲ್ರೂ ಈಗ್ಲೂ ಸ್ವಾಮಿ ಅಂತನೇ ಕರೀತಾರೆ ಎಂದ ಮಂಜುನಾಥ್
ಮಾಲ್ಗುಡಿ ಡೇಸ್ ಸೀರಿಯಲ್ ಬಗ್ಗೆ ಹಳೆಯ ನೆನಪುಗಳನ್ನು ಬಿಚ್ಚಿಟ್ಟ ಮಂಜುನಾಥ್ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಆದ, ಸೀರಿಯಲ್ ,ಸಿನಿಮಾ ಅಂದರೆ ಅದು ಮಾಲ್ಗುಡಿ ಡೇಸ್. ಇಂಟರ್ನೆಟ್ ಎಲ್ಲ ಬರೋ ಮೊದಲೇನೆ ಈ ಸಿನಿಮಾ 16 ರಿಂದ 18 ದೇಶಗಳಲ್ಲಿ ಡಬ್ ಆಗಿ ರಿಲೀಸ್ ಆಗಿದೆ ಅನ್ನೋದು ಹೆಮ್ಮೆ ಎಂದಿದ್ದಾರೆ. ಅದಾಗಿ ಇಷ್ಟು ವರ್ಷಗಳು ಕಳೆದರೂ ಸಹ ನಮ್ಮ ಮೇಲೆ ಇನ್ನೂ ಅದೇ ಪ್ರೀತಿ, ವಿಶ್ವಾಸವನ್ನು ಜನರು ತೋರಿಸುತ್ತಿರೋದನ್ನು ನೋಡಿ ಖುಷಿಯಾಗಿದೆ ಎಂದಿದ್ದಾರೆ ಮಂಜುನಾಥ್ (Master Manjunath). ಕೊನೆಗೆ ಮಾಲ್ಗುಡಿ ಡೇಸ್ ಮಾಡಿದಂತಹ ಶಂಕರ್ ನಾಗ್ ಅವರನ್ನು ನೆನೆದು, ಅವರು ಇವತ್ತಿಗೂ ಜನರ ಮನಸಲ್ಲಿ, ಹೃದಯದಲ್ಲಿ, ಕೆಲಸದಲ್ಲಿ ಪ್ರೇರಣೆಯಾಗಿ ಎಲ್ಲಾ ಕಡೆಯೂ ಇದ್ದಾರೆ ಎಂದಿದ್ದಾರೆ.