ಕೊರೋನಾ ವೈರಸ್‌ ಹೆಚ್ಚಾದ ಕಾರಣ ಮನೋರಂಜನಾ ಕ್ಷೇತ್ರದಲ್ಲಿ ನಡೆಯಬೇಕಿದ್ದ ಸಾಕಷ್ಟು ಕಾರ್ಯಕ್ರಮಗಳಿಗೆ ಈಗಾಗಲೇ ಬಿಗ್ ಬ್ರೇಕ್‌ ಬಿದ್ದಿದೆ. ಅದರಲ್ಲೂ ಮಾಲಯಾಳಂ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್‌ ಸೀಸನ್-2' ಸಹ ಇದೀಗ ಸೇರ್ಪಡೆಯಾಗಿದೆ.

ಸೀಸನ್‌ ಶುರುವಾದಾಗಿನಿಂದಲೂ ಅಡೆ ತಡೆಗಳನ್ನು ಎದುರಿಸುತ್ತಾ, ಸಂಕಷ್ಟದಲ್ಲಿರುವ ರಿಯಾಲಿಟಿ ಶೋಗೆ ಬ್ರೇಕ್‌ ಬಿದ್ದಿರುವುದನ್ನು ಕೇಳಿ ವೀಕ್ಷಕರು ಬೇಸರಗೊಂಡಿದ್ದಾರೆ. ಕಾರ್ಯಕ್ರಮ ನಿರ್ಮಾಪಕರಾದ Endemol Shine ಸಂಸ್ಥೆ ಇತ್ತೀಚಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. 'ಕೊರೋನಾ ವೈರಸ್‌ ಕಡಿಮೆ ಆಗುವವರೆಗೂ ಆಡಳಿತ ಮತ್ತು ನಿರ್ಮಾಣ ಇಲಾಖೆ ಕೆಲಸಗಳು ಸ್ಥಗಿತಗೊಳ್ಳುತ್ತದೆ' ಎಂದು. ಆದರೆ ರಿಯಾಲಿಟಿ ಶೋ ನಡೆಯುವುದರ ಬಗ್ಗೆ ಯಾವುದೇ ಖಚಿತ ಮಾಹಿತಿಯೂ ನೀಡಿಲ್ಲ.

ಕೊರೋನಾ ಎಚ್ಚರಿಕೆ ಪಾಲಿಸಿದ ಬಿಗ್ ಬಾಸ್ ಸ್ಪರ್ಧಿ ಅರೆಸ್ಟ್!

ಒಬ್ಬೊಬ್ಬರಾಗಿ ಸ್ಪರ್ಧಿಗಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್‌ಜೆ ರಾಘು, ಅಲಾಸಂದ್ರಾ, ಸುಜೋ, ದಯಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ತಕ್ಷಣವೇ ಸಂಸ್ಥೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ರಜತ್‌ ಕುಮಾರ್‌ ಖಾರದ ಪುಡಿಯನ್ನು ಪ್ರತಿಸ್ಪರ್ಧಿ ರೇಷ್ಮಾಳಿಗೆ ಎರಚಿದ ಕಾರಣ ಕಣ್ಣಿನ ಸೋಂಕು ಆಗಿದ್ದು ರಿಯಾಲಿಟಿ ಶೋನಿಂದಾನೇ ಹೊರ ಹೋಗಿದ್ದಾರೆ. 

ಬಿಗ್ ಬಾಸ್‌ ಸೀಸನ್‌-2, 10 ಸ್ಪರ್ಧಿಗಳ ಜೊತೆ ಕೇವಲ ನಾಲ್ಕು ವಾರದಲ್ಲಿ ಫಿನಾಲೆ ತಲುಪುವುದರಲ್ಲಿತ್ತು.