ತಿರುವನಂತಪುರಂ(ಮಾ. 17)  ಕೊರೋನಾ ವೈರಸ್ ಹುಚ್ಚಾಟ ತಡೆಯಲು ಕೇರಳ ಸರ್ಕಾರ ಹೊರಡಿಸಿದ್ದ ಆದೇಶ ಉಲ್ಲಂಘಿಸಿದ ಬಿಗ್ ಬಾಸ್ ಸ್ಪರ್ಧಿಯನ್ನು ಬಂಧಿಸಲಾಗಿದೆ.

ಯಾಕಾಗಿ ರಂಜಿತ್ ಅರೆಸ್ಟ್: ಬಿಗ್ ಬಾಸ್ ಸ್ಪರ್ಧಿ ರಂಜಿತ್ ಕುಮಾರ್ ಅವರನ್ನು ಬಂಧಿಸಲಾಗಿದೆ.  ಭಾನುವಾರ ಸಂಜೆ ರಂಜಿತ್ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಭಾರತದಲ್ಲಿ ಕೊರೋನಾ ಬದುಕಲ್ಲ ಎಂದಿದ್ದ ಡಾಕ್ಟರ್ ಗೆ ಎಂಥಾ ಸ್ಥಿತಿ ಬಂತು!

ಜನರು ಸೇರಬಾರದು ಎಂದು ಸರ್ಕಾರದ ಆದೇಶ ಇದ್ದರೂ ರಂಜಿತ್ ಅವರನ್ನು ರಿಸೀವ್ ಮಾಡಿಕೊಳ್ಳಲು ಜನಜಂಗುಳಿ ನೆರೆದಿದ್ದು. ಇದೇ ಕಾರಣಕ್ಕೆ ಪೊಲಿಶರು 75 ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಸುದ್ದನ 500 ಮೀಟರ್ ವ್ಯಾಪ್ತಿಯಲ್ಲಿ ಜನರ ನಿರ್ಬಂಧ ಇದ್ದರೂ ಈ ಘಟನೆ ನಡೆದಿದ್ದಕ್ಕೆ ಹಲವರನ್ನು ಬಂಧಿಸಲಾಗಿದೆ.

ಬಿಗ್ ಬಾಸ್ ಮಲಯಾಳಂ 2 ಆವೃತ್ತಿ ನಡೆಯುತ್ತಿದ್ದು ರಂಜಿತ್ ಕುಮಾರ್ ಹೊರ ಬಿದ್ದಿದ್ದಕ್ಕೆ ತರೇವಾರಿ ಪ್ರತಿಕ್ರಿಯೆಗಳು ಬಂದಿವೆ. ಬಿಗ್ ಬಾಸ್ ಶೋ ದಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಕೇರಳ ಸೋಶಿಯಲ್ ಮೀಡಿಯಾ ಹೇಳಿದೆ.

ಇಂಗ್ಲಿಷ್ ನಲ್ಲಿಯೂ ಓದಿ