ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

ದರ್ಶನ್‌ ಜೊತೆಗಿನ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡ ಸೃಜನ್ ಲೋಕೇಶ್. ಮೋರಿ ಪಕ್ಕದಲ್ಲಿ ವಡಾ ಪಾವ್ ತಿಂದಿದ್ದು ನಿಜವೇ?

Maja Talkies Srujan Lokesh talks about Darshan shiradi incident vcs

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್‌ ಕಾರ್ಯಕ್ರಮದಲ್ಲಿ ಈ ವಾರ ಶರಣ್ಯಾ ಶೆಟ್ಟಿ, ಶಾನ್ವಿ ಶ್ರೀವಾತ್ಸ ಹಾಗೂ ಮಾನ್ವಿತಾ ಕಾಮತ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಸಾಮಾನ್ಯವಾಗಿ ಮೇಕಪ್ ಇಲ್ಲದೆ ಸೆಲೆಬ್ರಿಟಿಗಳು ರಸ್ತೆ ಮೇಲೆ ಬಂದರೆ ಕಂಡು ಹಿಡಿಯುವುದು ಕಷ್ಟ ಅಂತಾರೆ. ಒಂದು ಪಕ್ಷ ನೇರವಾಗಿ ಕೇಳಿಬಿಟ್ಟರೆ ಒಂದು ರೀತಿ, ಗೊತ್ತಾಗದೆ ಮುಖ ಮುಖ ನೋಡಿದರೆ ತುಂಬಾ ವಿಚಿತ್ರ ಅನಿಸುತ್ತದೆ ಎಂದು ಚರ್ಚೆ ಮಾಡುವಾಗ ಸೃಜನ್ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

'ಶಿರಡಿಯಲ್ಲಿ ದಿನಕರ್ ಮದುವೆ ನಡೆಯುತ್ತಿತ್ತು. ನಟ ದರ್ಶನ್ ಜೊತೆ ನಾನು ಹೋಗಿದ್ದೆ. ನಾನು ದರ್ಶನ್ ಮತ್ತು ಕುಟುಂಬದವರೆಲ್ಲಾ ಹೋಗಿದ್ವಿ. ದಿನಕರ್ ಮದುವೆ ಮಾರನೇ ದಿನ ಇತ್ತು ಅಲ್ಲೇ ವಡಾ ಪಾವ್‌ ತಿನ್ನೋಣ ಅಂತ ದರ್ಶನ್ ಹೇಳಿದ. ಸರಿ ಅಂತ ಹೋಗಿ ಅಲ್ಲೇ ವಡಾ ಪಾವ್ ಅಂಗಡಿ ಪಕ್ಕದಲ್ಲಿ ಒಂದು ಮೋರಿ ಇತ್ತು. ಅಲ್ಲಿ ಒಂದು ಬೆಂಚಿನ ಮೇಲೆ ಕುಳಿತುಕೊಂಡು ನಾನು ಮತ್ತು ದರ್ಶನ್ ತಿನ್ನುತ್ತಿದ್ವಿ. ಆಗ ಅಲ್ಲೇ ಒಬ್ಬ ವ್ಯಕ್ತಿ ಹೋಗಿ ಬರುತ್ತಿದ್ದ ಅವನು ನಮ್ಮನ್ನು ನೋಡಿ ಶಾಕ್ ಆದ್ರು. ಅಲ್ಲಿ ನಮ್ಮ ಕಾರು ನಿಂತಿತ್ತು. ಕರ್ನಾಟಕದ ಕಾರು ಅಂತ ಅಕ್ಕಪಕ್ಕ ನೋಡಲು ಶುರು ಮಾಡಿದ್ದರು. ನನ್ನ ಮತ್ತು ದರ್ಶನ್‌ನನ್ನು ನೋಡಿ 10ರಿಂದ 15 ನಿಮಿಷ ನಮ್ಮನ್ನು ನೋಡುಕೊಂಡು ಹೋಗುವುದು ಮಾಡುತ್ತಿದ್ದ. ವಾಪಸ್‌ ಬಂದು ಮತ್ತೆ ನೋಡಿದ. 'ಅಯ್ಯೋ ಯಾಕೆ ಮೋರಿ ಪಕ್ಕದಲ್ಲಿ ಕುಳಿತುಕೊಂಡು ವಡಾ ಪಾವ್ ತಿನ್ನುತ್ತಾರೆ? ಇವರು ದರ್ಶನ್ ಆಗಿರುವುದಕ್ಕೆ ಚಾನ್ಸೇ ಇಲ್ಲ' ಅಂತ ಅಲ್ಲಿದ್ದ ಒಬ್ಬ ಹೇಳಿದ. ಇನ್ನೇನು ಎದ್ದು ಹೋಗುವ ಸಮಯದಲ್ಲಿ ಅವರ ಮಗ ಅಪ್ಪಾ ಅಪ್ಪ ಇದು ದರ್ಶನ್ ಎಂದು ಕೂಗಿದ. ಗಾಬರಿಯಾಗಿ ಅವನು ದರ್ಶನ್‌ನನ್ನು ತಬ್ಬಿಕೊಳ್ಳುವ ಬದಲು ನನ್ನನ್ನು ತಬ್ಬಿಕೊಂಡ ಮಾತನಾಡಿದ. ನಾನು ಅಲ್ಲ ದರ್ಶನ್ ಪಕ್ಕದಲ್ಲಿ ಇರುವುದು ಅಂತ ಹೇಳಿದ್ದಕ್ಕೆ ಅವನನ್ನು ತಬ್ಬಿಕೊಂಡರು. ಅಷ್ಟು ಗಾಬರಿ ಆಗಿಬಿಟ್ಟರು. ಇದೆಲ್ಲಾ ನಾವು ಮರೆಯುವುದಕ್ಕೆ ಸಾಧ್ಯವಿಲ್ಲ' ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ.

ರಂಜಾನ್ ಉಪವಾಸ ಬಿಟ್ಟು ಕಾಟೇರಮ್ಮ ದೇವಸ್ಥಾನಕ್ಕೆ ಓಡಿ ಬಂದ ರೀಲ್ಸ್ ರೇಶ್ಮಾ ಆಂಟಿ!

ದರ್ಶನ್ ಮತ್ತು ಸೃಜನ್ ಲೋಕೇಶ್ ಆತ್ಮೀಯ ಸ್ನೇಹಿತರು. ಎಲ್ಲೇ ಹೋದರೂ ಒಟ್ಟಿಗೆ ಹೋಗಿ ಒಟ್ಟಿಗೆ ಬರುತ್ತಿದ್ದರು. ಇವರ ಸ್ನೇಹ ಬೆಳೆದಿದ್ದು ಅವರ ತಂದೆ ತೂಗುದೀಪ ಶ್ರೀನಿವಾಸ್ ಮತ್ತು ಲೋಕೇಶ್ ಸ್ನೇಹದಿಂದ.  ಆದರೆ ಸಣ್ಣ ಪುಟ್ಟ ಮನಸ್ಥಾಪದಿಂದ ಇಬ್ಬರು ಮಾತನಾಡುತ್ತಿಲ್ಲ...ಯಾಕೆ ಒಟ್ಟಿಗೆ ಇಲ್ಲ ಎಂದು ಪ್ರಶ್ನೆ ಮಾಡುತ್ತಿದ್ದರು. ಇದಕ್ಕೆ ಉತ್ತರ ಸಿಗಲಿಲ್ಲ. ಆದರೆ ದರ್ಶನ್ ಡೆವಿಲ್ ಸಿನಿಮಾ ಪ್ರಚಾರ ಮಾಡಲು ಮಜಾ ಟಾಕೀಸ್‌ಗೆ ಬರಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ದರ್ಶನ್ ಮತ್ತು ಸೃಜನ್ ಸ್ನೇಹದ ಕಥೆಗಳನ್ನು ಕೇಳಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. 

ದೇವರ ಮುಂದೆ ಯಾರೂ ಸೂಪರ್‌ ಸ್ಟಾರ್ ಅಲ್ಲ...: ಧ್ರುವ ಸರ್ಜಾ ಪತ್ನಿ ಹೇಳಿಕೆ ವೈರಲ್

 

Latest Videos
Follow Us:
Download App:
  • android
  • ios