ಜಯಮಾಲಾ ಮತ್ತು ಅಂಬಿಕಾ, 80-90ರ ದಶಕದ ಕ್ಲೈಮ್ಯಾಕ್ಸ್ ಸೀನ್‌ಗಳ ಭಯಾನಕ ಅನುಭವಗಳನ್ನು ಮಜಾ ಟಾಕೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಎತ್ತರದ ಭಯದಿಂದ ಅಂಬಿಕಾ ತೊಂದರೆ ಅನುಭವಿಸಿದರೆ, ಜಯಮಾಲಾ ಹೊಗೆನೆಕಲ್‌ನಲ್ಲಿ ನೀರಿನಲ್ಲಿ ಮುಳುಗುವ ಅಪಾಯದಿಂದ ಪಾರಾಗಿದ್ದು ರಾಜ್‌ಕುಮಾರ್ ಅವರ ಸಮಯಪ್ರಜ್ಞೆಯಿಂದ ಎಂದು ವಿವರಿಸಿದ್ದಾರೆ. ಆ ದಿನಗಳ ಸುರಕ್ಷತಾ ಕ್ರಮಗಳ ಬಗ್ಗೆ ಅವರು ಮಾತನಾಡಿದ್ದಾರೆ.
80 ಮತ್ತು 90ರ ದಶಕದಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಲ್ಲಿ ನಟಿಸಿರುವ ಜಯಮಾಲಾ ಮತ್ತು ಅಂಬಿಕಾ ತಮ್ಮ ಜೀವನದಲ್ಲಿ ಮರೆಯಲಾಗದ ಕ್ಲೈಮ್ಯಾಕ್ಸ್ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ನಡೆಯುತ್ತಿದ್ದ ಕ್ಲೈಮ್ಯಾಕ್ಸ್ ಸೀನ್‌ಗಳು ಎಷ್ಟು ಮುಖ್ಯವಾಗಿತ್ತು? ಪ್ರತಿ ಸೀನ್‌ಗಳಲ್ಲಿ ಎಷ್ಟು ಭಯ ಹುಟ್ಟಿಸುತ್ತಿತ್ತು? ಆ ಕಾಲದಲ್ಲಿ ಯಾವ ರೀತಿಯಲ್ಲಿ ಸೇಫ್ಟಿ ಇರುತ್ತಿತ್ತು ಎಂದು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
'ನನಗೆ ಹೈಟ್ ಸಮಸ್ಯೆ ಇದೆ. ಕರೆಕ್ಟ್ ಕ್ಲೈಮ್ಯಾಕ್ಸ್ ಚಿತ್ರೀಕರಣ ಸಮಯದಲ್ಲಿ ನನ್ನ ಪಾತ್ರಕ್ಕೆ ಹೈಟ್‌ನಲ್ಲಿ ನಿಲ್ಲಿಸಿಬಿಡುತ್ತಾರೆ. ಬಜಾರ್ ಸೀನಾ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್‌ನ ಮೈಸೂರಿನ ಫ್ಯಾಕ್ಟರಿಯಲ್ಲಿ ಮಾಡಿದ್ದರು. ಎತ್ತರದಲ್ಲಿ ಗೀತಾ ಮತ್ತು ನನ್ನನ್ನು ಕಟ್ಟು ಹಾಕಿದರು, ಕೆಳಗಡೆ ಬೆಂಕಿ ಇದೆ ನಾವು ನಡೆದುಕೊಂಡು ಹೋಗಬೇಕು. ನನಗೆ ಹಾರ್ಟ್ ಬೀಟ್ ಜಾಸ್ತಿ ಆಯ್ತು ಸತ್ತು ಹೋಗುತ್ತೀನಿ ಅಂದುಕೊಂಡೆ. ಸಿನಿಮಾದ ಆ ಸೀನ್ ಈಗಲೂ ನೋಡಿದರೆ ನನ್ನ ಮುಖದಲ್ಲಿ ಭಯ ಎತ್ತು ಕಾಣುತ್ತದೆ. ಭಯ ಅನ್ನೋದ್ದಕ್ಕಿಂತ ಸತ್ತು ಹೋಗುತ್ತೀನಿ ಅನಿಸುತ್ತದೆ. ಇದೊಂದೆ ಅಲ್ಲ ಹಲವು ಸಿನಿಮಾಗಳಲ್ಲಿ ಕ್ಲೈಮ್ಯಾಕ್ಸ್‌ಗೆ ಅಂತ ಹೈಟ್‌ನಲ್ಲಿ ನಿಲ್ಲಿಸಿಬಿಡುತ್ತಿದ್ದರು' ಎಂದು ಅಂಬಿಕಾ ಮಾತನಾಡಿದ್ದಾರೆ.
'ಗಿರಿಕನ್ಯ ಸಿನಿಮಾ ಮತ್ತು ಒಂದೆರಡು ಸಿನಿಮಾದಲ್ಲಿ ನಾನು ಸಾಯುವಂತ ಸಮಯ ಬಂದಿತ್ತು. ಹೊಗೆನೆಕಲ್‌ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತದೆ ಆಗ ನನ್ನನ್ನು ನೀರಿಗೆ ತಳ್ಳಿಬಿಡುತ್ತಾರೆ. ಆ ಸಮಯದಲ್ಲಿ ನನಗೆ ಹಗ್ಗ ಕಟ್ಟಿ ಒಂದು ಕಡೆ ನಿಲ್ಲಿಸಿದ್ದರು ಆಗ ಗೊಂದಲ ಸೃಷ್ಟಿ ಆಯ್ತು. ಸ್ವಾಮಿ ಅಂದುಕೊಂಡರು ಶಿವಯ್ಯ ಹತ್ರ ಹಗ್ಗ ಇದೆ ಅಂತ, ಶಿವಯ್ಯ ಅಂದುಕೊಂಡರು ಸ್ವಾಮಿ ಹತ್ರ ಹಗ್ಗ ಇದೆ ಎಂದು. ಇಲ್ಲಿ ರಾಜ್‌ಕುಮಾರ್ ಅವರ ಸಮಯ ಪ್ರಜ್ಞೆಯನ್ನು ಮೆಚ್ಚಬೇಕು. ದೊಡ್ಡವರು ಸಣ್ಣವರು ಎಂದು ಕಲಾವಿದರಲ್ಲಿ ಭೇದಭಾವ ಇಲ್ಲದೆ ಪ್ರತಿಯೊಂದು ದೃಶ್ಯಗಳನ್ನು ನೋಡುತ್ತಿದ್ದರು. ಈ ಘಟನೆ ನನಗೆ ನೀರಿನಿಂದ ಹೊರ ಬಂದ ಮೇಲೆ ತಿಳಿಯಿತ್ತು. ನಾನು ನೀರಿಗೆ ಬಿದ್ದು ಬಿಟ್ಟ ತಕ್ಷಣವೇ ರಾಜ್‌ಕುಮಾರ್ ಹಗ್ಗ ಹಿಡಿದುಕೊಂಡು ನನ್ನನ್ನು ಇಟ್ಟುಕೊಳ್ಳಿ ಎಂದು ಅಲ್ಲಿದ್ದವರಿಗೆ ಹೇಳಿ ನನ್ನನ್ನು ಮೇಲೆ ಕರ್ಕೊಂಡು ಬರ್ತಾರೆ. 20 ನಿಮಿಷ ಸುಧಾರಿಸಿಕೊಂಡೆ. ಅದಾದ ಮೇಲೆ ಶೂಟಿಂಗ್ ಪ್ಯಾಕಪ್ ಮಾಡಿದರು. ಕಲಾವಿದರನ್ನು ಬದುಕಿಸಬೇಕು ಅನ್ನೋ ಮನೋಭಾವ ಎಂದೂ ಮರೆಯುವುದಿಲ್ಲ' ಎಂದು ಜಯಮಾಲಾ ಹೇಳಿದ್ದಾರೆ.
