ಮಜಾ ಟಾಕೀಸ್‌ ಸುಂದರಿ, ಕಿರುತೆರೆಯ ಮಾತಿನ ಮಲ್ಲಿ ಶ್ವೇತಾ ಚಂಗಪ್ಪ ಪುತ್ರ ಜಿಯಾನ್ ಆಗಮನದ ಬಳಿಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಆಗಿದ್ದಾರೆ. ಪುತ್ರನ ಖಾತೆಯಲ್ಲಿ ಫೋಸ್ಟ್‌ ಮಾಡುತ್ತಾ, ತಮ್ಮ ಮಜಾ ಎಪಿಸೋಡ್‌ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ ಈ ಕೊಡಗಿನ ಸುಂದರಿ. ಆದರೆ, ಇತ್ತೀಚಿಗೆ ಶೇರ್ ಮಾಡಿದ ಸೀರೆ ಲುಕ್‌ ಸಖತ್ ವೈರಲ್ ಆಗ್ತಿದೆ.

ನಟಿ ಶ್ವೇತಾ ಚಂಗಪ್ಪ ಪುತ್ರ ಜಿಯಾನ್‌ ತುಂಟಾಟ; ಅಮ್ಮನಿಗೆ ಡಬಲ್ ಕೆಲಸ! 

ಕನ್ನಡಿಗೆ ಮುಖ ಮಾಡಿ ಕ್ಯಾಮೆರಾಗೆ ಬೆನ್ನು ತೋರಿಸುತ್ತಿರುವ ಶ್ವೇತಾ ಸೀರೆಯಲ್ಲೂ ಸುಂದರವಾಗಿ ಕಾಣಿಸುತ್ತಾರೆ ಎಂಬುದಕ್ಕೆ ಈ ಪೋಟೋನೇ ಸಾಕ್ಷಿ. 'ನಮ್ಮ ಬೆಲೆಯನ್ನು ಇಲ್ಲಿ ಯಾರೂ ಯಾರಿಗೂ ಸಾಬೀತು ಮಾಡುವ ಅವಶ್ಯಕತೆ ಇಲ್ಲ. ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡರೆ ಸಾಕು. ಕನ್ನಡಿಯಲ್ಲಿ ಕಾಣುವ ವ್ಯಕ್ತಿಗೆ ಮಾತ್ರ ನಾವು ಉತ್ತರ ನೀಡಬೇಕು,' ಎಂದು ಶ್ವೇತಾ ಬರೆದುಕೊಂಡಿದ್ದಾರೆ.

ಶ್ವೇತಾ ಚಂಗಪ್ಪ ಹುಟ್ಟು ಹಬ್ಬಕ್ಕೆ ಮಧ್ಯರಾತ್ರಿ ಸರ್ಪ್ರೈಸ್‌ ಕೊಟ್ಟ ಸೃಜನ್ ಲೋಕೇಶ್! 

ಹಸಿರು ಪ್ಲೋರಲ್‌ ಸೀರೆಗೆ ಡಿಸೈನರ್ ಬ್ಲೌಸ್‌ ಧರಿಸಿದ್ದಾರೆ ಶ್ವೇತಾ. ಕಿರುತೆರೆ ಸ್ನೇಹಿತರು ಹಾಗೂ ಆಪ್ತರು ಸೂಪರ್, ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಮಜಾ ಟಾಕೀಸ್‌ನಲ್ಲಿ ಶ್ವೇತಾ ಮಾತಿಗಿಂತ, ಆಕೆ ಧರಿಸುವ ಬಟ್ಟೆಗಳ ಬಗ್ಗೆ ಗೃಹಿಣಿಯರು ಹೆಚ್ಚಿನ ಗಮನ ನೀಡುತ್ತಾರೆ. ಪುತ್ರನ ಆಗಮನ ನಂತರ ಶ್ವೇತಾ ತುಂಬಾ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸೀರೆಯಲ್ಲಿಯೂ ಎಷ್ಟೆಲ್ಲಾ ಸ್ಟೈಲ್ ಮಾಡಬಹುದು ಎಂದು ಈ ಪೋಟೋ ಮೂಲಕ ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ್ದಾರೆ.