ಕರ್ಮ​ ರಿಟರ್ನ್ಸ್​ ಎನ್ನೋದು ಇದಕ್ಕೇ ಅಲ್ವಾ? ಶಾರ್ವರಿ ಬಂಡವಾಳ ತುಳಸಿ ಮುಂದೆ ಬಯಲಾಗುತ್ತಾ?

ಶಾರ್ವರಿಗೆ ಈಗ ಗಂಡನೇ ಬಿಸಿತುಪ್ಪವಾಗಿದ್ದಾನೆ. ಆಗಾಗ್ಗೆ ಹಿಂದಿನದ್ದನ್ನು ಕೆದಕುತ್ತಾ ಈಕೆಯ ನೆಮ್ಮದಿ ಹಾಳು ಮಾಡುತ್ತಿದ್ದಾನೆ. ಕರ್ಮ ರಿಟರ್ನ್ಸ್​ ಎನ್ನೋದು ಇದಕ್ಕೇ ಅಲ್ವಾ?
 

Mahesh spoils Sharvaris peace by digging past as karma returns in Shreerastu Shubhamastu suc

ಮಾಧವ್​ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಿರುವುದು ಮಹೇಶ್​ಗೆ ಮಾತ್ರ. ಅದೇ ಅಪಘಾತದಲ್ಲಿ ಮಹೇಶ್​ ನೆನಪು ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಆತ ಹುಷಾರಾಗಿ ಬಿಟ್ಟರೆ ತನ್ನ ಗುಟ್ಟೆಲ್ಲಿ ಬಯಲಾಗುವುದೋ ಎಂದುಕೊಂಡಿದ್ದ ಶಾರ್ವರಿ, ಆತನಿಗೆ ಹುಷಾರು ಆಗದ ರೀತಿಯಲ್ಲಿ ಏನೇನೋ ಮಾತ್ರೆಗಳನ್ನು ನೀಡುತ್ತಿದ್ದಳು. ಆದರೆ ತುಳಸಿ ಯಾವಾಗ ಆ ಮನೆಗೆ ಕಾಲಿಟ್ಟಳೋ ಎಲ್ಲವೂ ಬದಲಾಯಿತು. ಶಾರ್ವರಿಯ ತಂತ್ರ, ಕುತಂತ್ರ ಏನೂ ಅರಿಯದ ಮುಗ್ಧ ತುಳಸಿ ಮಹೇಶ್​ನ ಸೇವೆ ಮಾಡುತ್ತಲೇ, ಆತ ಹುಷಾರಾಗಿದ್ದಾನೆ. ಆತ ಹಾಸಿಗೆ ಮೇಲೆ ಇರುವಾಗಲೂ ಸದಾ ಖರ್ಜೂರ ಖರ್ಜೂರ ಎನ್ನುತ್ತ ಏನೋ ನೆನಪು ಮಾಡಿಕೊಳ್ಳುತ್ತಿದ್ದ. ಈ ಶಬ್ದ ಕೇಳುತ್ತಿದ್ದಂತೆಯೇ ಶಾರ್ವರಿ ಗರ ಬಡಿದವಳಂತೆ ಆಗುತ್ತಿದ್ದಳು. ಅಪಘಾತಕ್ಕೂ ಮುನ್ನ ಖರ್ಜೂರ ತಿಂದದ್ದಕ್ಕೂ, ಪೂರ್ಣಿಯ ಗರ್ಭಪಾತವಾಗುವುದಕ್ಕೂ ಎಲ್ಲದಕ್ಕೂ ಲಿಂಕ್​ ಇದೆ ಎನ್ನುವುದು ಅವನ ಮಾತಿನಿಂದ ತಿಳಿದು ಬರುತ್ತಿತ್ತು. ಆದರೆ ಅರೆಬರೆ ನೆನಪಿನಲ್ಲಿದ್ದ ಮಹೇಶ್​

ತುಳಸಿ, ಪೂರ್ಣಿ ಮತ್ತು ಮಾಧವ್​ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿಗೆ ಈಗ ಸಂಕಟ ಎದುರಾಗಿದೆ. ಅದೂ ಖುದ್ದು ಪತಿ ಮಹೇಶ್​ನಿಂದಲೇ. ಮಹೇಶ್​ನಿಗೆ ಶಾರ್ವರಿಯ ಎಲ್ಲಾ ಮಸಲತ್ತುಗಳ ಪರಿಚಯ ಚೆನ್ನಾಗಿಯೇ ಇದೆ. ಇದೀಗ ಸಂಪೂರ್ಣವಾಗಿ ಹುಷಾರಾದ ಮೇಲೂ ಆ ವಿಷಯವನ್ನು ಕೆದಕಿರಲಿಲ್ಲ. ಆದರೆ ಪತ್ನಿ ಶಾರ್ವರಿಯ ಕುತಂತ್ರ ಆತನಿಗೆ ಚೆನ್ನಾಗಿ ಗೊತ್ತು. ಇದೀಗ ಪತ್ನಿಯನ್ನು ಹೊಗಳುವಂತೆ ಮಾಡಿ, ಮತ್ತೆ ಖರ್ಜೂರದ ವಿಷಯ ತೆಗೆದಿದ್ದ.  ತುಳಸಿ, ಪೂರ್ಣಿಯನ್ನು ಯಾಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಹೇಶ್​ ಕೇಳಿದಾಗ, ಅವರಿಬ್ಬರೂ ಹೊರಗಿನವರಲ್ವಾ, ಅದಕ್ಕೆ ಹಾಗೆ ಅಂದಿದ್ದಾಳೆ ಶಾರ್ವರಿ. ಹಾಗಿದ್ದರೆ ದೀಪಿಕಾ ಕೂಡ ಹೊರಗಿನವಳಲ್ವಾ ಎಂದಿದ್ದ ಮಹೇಶ್​. ಅದಕ್ಕೆ ಶಾರ್ವರಿ, ಹಾಗೇನು ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವುದೇ ನನ್ನ ಆಸೆ ಎಂದಿದ್ದಳು.

ಜಯಾ ಬಚ್ಚನ್​@76: ಪತಿ ಅಮಿತಾಭ್ ಬಚ್ಚನ್​​-ರೇಖಾ ಸಂಬಂಧದ ಕುರಿತು ನಟಿ ಹೇಳಿದ್ದೇನು?

ಇದೀಗ ಮತ್ತೆ ಮಹೇಶ್​ ಪತ್ನಿಗೆ ಶಾಕ್​ ಕೊಟ್ಟಿದ್ದಾನೆ. ಅಪಘಾತಕ್ಕೂ ಮುನ್ನ ಕೆಲವೊಬ್ಬರಿಂದ ಸಾಲ ಮಾಡಿದ್ದೆ. ಇನ್ನೂ ಕೆಲವು ಕೆಲಸ ಬಾಕಿ ಇದೆ. ಯಾವ ಕೆಲಸವನ್ನೂ ಉಳಿಸಿಕೊಳ್ಳಬಾರದು. ಎಲ್ಲವನ್ನೂ ವಸೂಲು ಮಾಡಬೇಕು ಎಂದು ದ್ವಂದ್ವಾರ್ಥದಲ್ಲಿ ಮಹೇಶ್​ ಹೇಳಿದ್ದಾನೆ. ಎಲ್ಲರೂ ಇದೇನು ಹೇಳುತ್ತಿದ್ದೀರಿ ಎಂದು ಗೊತ್ತಾಗುತ್ತಿಲ್ಲ ಎಂದಾಗ, ಶಾರ್ವರಿಗೆ ಎಲ್ಲವೂ ಅರ್ಥವಾಗಿದೆ. ಇದಕ್ಕೆ ಸುಮ್ಮನಾಗದ ಮಹೇಶ್​, ನಿಮಗೆ ಅರ್ಥವಾಗಲ್ಲ... ಶಾರ್ವರಿಗೆ ಅರ್ಥವಾಗತ್ತೆ ಎಂದು ಶಾಕ್​ ಕೊಟ್ಟಿದ್ದಾನೆ. ಸದಾ ಕುತಂತ್ರ ಮಾಡುತ್ತಿರುವ ಶಾರ್ವರಿಗೆ ಈಗ ಪತಿಯಿಂದಲೇ ಶಾಕ್​ ಮೇಲೆ ಶಾಕ್​ ಎದುರಾಗಿದೆ. ಇಷ್ಟಕ್ಕೆ ಸುಮ್ಮನಾಗದ ಮಹೇಶ್​ ಎಲ್ಲವೂ ವಾಪಸ್​ ಬರಲೇಬೇಕು. ಅದಕ್ಕೇ ಕರ್ಮ ರಿಟರ್ನ್ಸ್​ ಎನ್ನೋದು ಅಲ್ವಾ ಶಾರ್ವರಿ ಎಂದು ಪ್ರಶ್ನಿಸಿದ್ದಾನೆ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿಯಾದರೂ ತುಳಸಿಗೆ ಏನೋ ಅನುಮಾನ ಶುರುವಾಗಿದೆ.

ಮಹೇಶ್​ ಹಿಂದೆ ಹುಷಾರಿಲ್ಲದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಸಂದರ್ಭಗಳಲ್ಲಿ ಅಪಘಾತದ ಬಗ್ಗೆ ಆತನಿಗೆ ಏನೋ ರಹಸ್ಯ ತಿಳಿದಿದೆ ಎನ್ನುವ ಅನುಮಾನ ತುಳಸಿಗೆ ಮೊದಲಿನಿಂದಲೂ ಇತ್ತು. ಇದೀಗ ಮತ್ತೆ ಅನುಮಾನ ಶುರುವಾಗಿದೆ. ಶಾರ್ವರಿಯ ಮಾತಿಗೂ, ಮಹೇಶ್​ಗೂ ಏನೋ ಸಂಬಂಧವಿದೆ, ಇದರಲ್ಲಿ ಏನೋ ರಹಸ್ಯವಿದೆ ಎಂದುಕೊಂಡಿರುವ ತುಳಸಿ, ಇದನ್ನು ಹೇಗಾದರೂ ಮಾಡಿ ತಿಳಿದುಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದಾಳೆ. ತುಳಸಿಗೆ ರಹಸ್ಯ ಗೊತ್ತಾಗಿಬಿಡುತ್ತಾ? ರಹಸ್ಯ ಗೊತ್ತಾದರೆ ಸೀರಿಯಲ್​ ಅರ್ಧ ಮುಗಿದಂತೆಯೇ, ಅದು ಇಷ್ಟು ಬೇಗ ಗೊತ್ತಾಗಲ್ಲ ಅಂತಿದ್ದಾರೆ ಶ್ರೀರಸ್ತು, ಶುಭಮಸ್ತು ಫ್ಯಾನ್ಸ್​. ಹಾಗಿದ್ದರೆ ಮುಂದೇನು? ಎಲ್ಲರನ್ನೂ ಮನಸೋ ಇಚ್ಛೆ ಆಡಿಸುತ್ತಿರುವ ಶಾರ್ವರಿಗೆ ಈಗ ಇಂಗು ತಿಂದ ಮಂಗನ ಸ್ಥಿತಿ, ಅದೂ ಖುದ್ದು ಪತಿಯಿಂದಲೇ. ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ ಸೀರಿಯಲ್​ ಅಭಿಮಾನಿಗಳು.

ಯುಗಾದಿಯಂದೇ ಭಾಗ್ಯ- ತಾಂಡವ್​ ಭರ್ಜರಿ ಪ್ರತಿಜ್ಞೆ: ಗೆಲುವು ಯಾರಿಗೆ, ಹೇಗೆ?


Latest Videos
Follow Us:
Download App:
  • android
  • ios