ಹಬ್ಬದಲ್ಲಿ ನಾನು ಮನೆ ಮಗಳು ಜಾನಕಿ: ಗಾನವಿ ಲಕ್ಷ್ಮಣ್
ಈ ಸಲ ಊರಿಗೆ ಹೋಗಿ ಅಲ್ಲಿ ಹಬ್ಬ ಆಚರಿಸಿಕೊಂಡು ಊರಿನವರಿಗೆಲ್ಲ ಸರ್‌ಪ್ರೈಸ್ ಕೊಡಲಿದ್ದಾರೆ ಮಗಳು ಜಾನಕಿ.
- ಬಾನಿ
ಮಗಳು ಜಾನಕಿ ಸೀರಿಯಲ್‌ನಿಂದ ಫೇಮಸ್ ಆಗಿರುವ ಗಾನವಿ ಲಕ್ಷ್ಮಣ್, ಈಗ ಹೀರೋ ಸಿನಿಮಾದ ಹೀರೋಯಿನ್ ಆಗಿ ಕೆರಿಯರ್‌ನಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಅವರ ರೀತಿನೀತಿ ಬದಲಾಗಿರಬಹುದು ಅಂತ ನೀವಂದುಕೊಂಡಿದ್ದರೆ, ಸಾರಿ. ಈ ಸಲದ ಹಬ್ಬ ಊರಿನಲ್ಲಿ ಆಚರಿಸಿಕೊಳ್ಳಲಿರುವ ಅವರು ತಾವು ಮನೆಯಲ್ಲಿ ಸಿಂಪಲ್ ಮಗಳು ಜಾನಕಿ ಎಂದೇ ಹೇಳಿಕೊಳ್ತಾರೆ.
- ಈ ಸಲದ ಹಬ್ಬ ಭರ್ಜರೀನಾ? ಎಲ್ಲಿ ಆಚರಣೆ?
ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ನಾನು ಎಲ್ಲಿರುತ್ತೇನೆ ಅಂತಲೇ ಹೇಳೋಕಾಗೋಲ್ಲ. ಆಕ್ಟಿಂಗ್ ಶೆಡ್ಯೂಲ್ ಇರುತ್ತೆ ಕೆಲವೊಮ್ಮೆ. ಆದ್ರೆ ಈ ಸಲ ಸರ್‌ಪ್ರೈಸ್ ಕೊಡೋಣ ಅಂತ್ಲೇ ಊರಿಗೆ ಹೋಗ್ತಾ ಇದೀನಿ. ಯುಗಾದಿ ನಮ್ಮ ಹಳ್ಳೀಲಿ ತುಂಬಾ ಚೆನ್ನಾಗಿರ್ತದೆ. ತುಂಬಾ ಖುಷಿಯಾಗಿ ಆಚರಿಸುತ್ತೀವಿ. ನಮ್ಮ ಫ್ಯಾಮಿಲಿ ಜೊತೆಗೆ ಆಚರಿಸೋದೇ ನಂಗೆ ಖುಷಿ. ಹೆಚ್ಚಾಗಿ ಫ್ರೀ ಇದ್ದರೆ ಅಲ್ಲೇ ಹೋಗಿಬಿಡುತ್ತೀನಿ. ಆದ್ರೆ ಕಳೆದ ಒಂದು ಎರಡು ವರ್ಷದಿಂದ ಮಗಳು ಜಾನಕಿ ಸೀರಿಯಲ್‌ನಿಂದಾಗಿ ಬ್ಯೂಸಿ ಶೆಡ್ಯೂಲ್ ಇತ್ತು ಹೋಗೋಕಾಗಲಿಲ್ಲ. ಬೆಂಗಳೂರಲ್ಲೇ ಇದ್ದೆ.
ಚಿಕ್ಕ ವಯಸ್ಸಿನಲ್ಲಿ ಹೇಗಿತ್ತು ಅಂದ್ರೆ ಹಾಸ್ಟೆಲ್‌ನಿಂದ ಮನೆಗೆ ಹೋಗಿ ಯುಗಾದಿ ಆಚರಿಸ್ತಿದ್ದೆವು. ಆಮೇಲೆ ನಮ್ಮ ನಮ್ಮದೇ ಕೆಲಸಗಳಿಂದಾಗಿ ಹೋಗೋಕೆ ಆಗ್ತಿರಲಿಲ್ಲ. ಈ ಸಲ ಹೋಗ್ಲೇಬೇಕು ಅಂತ ನಿರ್ಧಾರ ಮಾಡಿ ಹೊರಟ್ಬಿಟ್ಟೆ.
- ಯಾವೂರು ನಿಮ್ಮದು? ಅಲ್ಲಿ ಹೇಗೆ ಯುಗಾದಿ ಆಚರಿಸ್ತೀರಾ?
ನಮ್ಮೂರು ಔತಿಹೊಸಳ್ಳಿ ಅಂತ ಚಿಕ್ಕಮಗಳೂರಿನಲ್ಲಿದೆ. ನಮ್ಮೂರು ಬೆಟ್ಟಗಳ ಮಧ್ಯೆ ಇರೋ ತುಂಬಾ ಸುಂದರವಾದ ಊರು. ಹಳ್ಳಿಗೆ ಹೋಗುವುದೇ ನನಗೆ ಸಂಭ್ರಮದ ವಿಚಾರ. ಅಲ್ಲಿ ಯುಗಾದಿ ಆಚರಣೆಯಲ್ಲಿ ಒಂಥರಾ ಖುಷಿ ಇದೆ. ಅಂದು ಹಿರಿಯರಿಗೆಲ್ಲ ಎಡೆ ಇಡುತ್ತೇವೆ. ಮನೆಯಲ್ಲಿ ಪೂಜೆ ಮಾಡ್ತೀವಿ. ದೇವಸ್ಥಾನಕ್ಕೆ ಹೋಗ್ತೀವಿ. ಫ್ಯಾಮಿಲಿಯವರೆಲ್ಲಾ ಇರುತ್ತಾರೆ. ಅಣ್ಣ ಫಾರಿನ್‌ನಲ್ಲಿ ಇದಾನೆ. ಲಾಕ್‌ಡೌನ್ ಕಾರಣ ಹಬ್ಬಕ್ಕೆ ಊರಿಗೆ ಬರೋಕೆ ಅವನಿಂದ ಆಗ್ತಾ ಇಲ್ಲ. ಆದ್ರೆ ಅತ್ತೆ ಮಕ್ಕಳು, ಅಣ್ಣಂದಿರು, ಇರುತ್ತಾರೆ. ನಮ್ಮೆಲ್ಲರ ಮನೆಗಳೂ ಅಕ್ಕಪಕ್ಕದಲ್ಲೇ ಇವೆ. ಎಲ್ಲರೂ ಪರಸ್ಪರರ ಮನೆಗಳಿಗೆ ಹೋಗ್ತೀವಿ. ಇಡೀ ಹಳ್ಳೀಲಿ ಇರೋರೆಲ್ಲ ರಕ್ತಸಂಬಂಧಿಗಳೇ. ಹೀಗಾಗಿ ಇಡೀ ಹಳ್ಳೀನೇ ಒಂದು ಫ್ಯಾಮಿಲಿ. ಊರ ದೇವರಿಗೆ ಪೂಜೆ ಇರುತ್ತೆ. ನಾಲ್ಕೂರಮ್ಮ ತಾಯಿ ಅಂತ ನಮ್ಮ ಗ್ರಾಮದೇವರ ಹೆಸರು. ಊರಿನ ಜನ ಸೇರಿ ಪೂಜೆ ಮಾಡ್ತೀವಿ. ಅಕ್ಕಪಕ್ಕದ ಮನೆಗಳಿಗೆ ಹೋಗುತ್ತೇವೆ.
'ಹೀರೋ' ಬಿಡುಗಡೆ ಆದ್ಮೇಲೆ 'ಮಗಳು ಜಾನಕಿ' ಮಾಡಿಸಿದ ಬೋಲ್ಡ್ ಫೋಟೋ ಶೂಟ್; ಇಲ್ಲೊಂದು ಗುಟ್ಟಿದೆ? ...
- ನೀವೀಗ ಹೀರೋಯಿನ್, ಹಳ್ಳಿಯ ಜನ ನಿಮ್ಮನ್ನು ಹೇಗೆ ನೋಡ್ತಾರೆ?
ಏನೂ ಬದಲಾಗೊಲ್ಲ. ನಾನು ಎಷ್ಟೇ ಬೆಳೆದರೂ ಅದೇ ಹಳೆಯ ಗಾನವೀನೇ. ನನ್ನ ಊರಿನ, ಮನೆ ಮಗಳೇ. ನಾನು ಕಲಾ ಮಾಧ್ಯಮದಲ್ಲಿ ಸ್ವಲ್ಪ ಬೆಳೆದಿದ್ದೇನೆ ಬಿಟ್ಟರೆ, ಊರಿಗೆ ಹೋದರೆ ಅದೇ ಗಾನವಿಯಾಗೇ ಇರುತ್ತೇನೆ. ಮನೆಯಲ್ಲಿ ಮೊದಲು ಹೇಗೆ ಇದ್ದೆನೋ ಹಾಗೇ ಇರುತ್ತೇನೆ. ಮನೆಗೆ ನೆಂಟರು ಬಂದರೆ ನಾವು ಚಾಪೆ ಹಾಸಿಕೊಂಡು ಕೆಳಗೆ ಮಲಗುವುದು- ಇದೆಲ್ಲ ಹಾಗೇ ಇದೆ, ಏನೂ ಬದಲಾಗಿಲ್ಲ. ನಾವು ಎಷ್ಟು ಬೆಳೆದರೂ ಫ್ಯಾಮಿಲಿ ಜೊತೆ ನಡೆದುಕೊಳ್ಳುವ ರೀತಿಯಲ್ಲಿ ಬದಲಾಗೋಲ್ಲ.
ತನಗಿಂತ 17 ವರ್ಷ ಹಿರಿಯ ನಟನನ್ನು ಪ್ರೀತಿಸಿ ಮದುವೆಯಾದ ಯುವರತ್ನ ಹಿರೋಯಿನ್ ...
- ಹಬ್ಬ ಅಂದ್ರೆ ಸವಿನೆನಪುಗಳು ಇದ್ದೇ ಇರ್ತವೆ ಅಲ್ವಾ?
ಬಾಲ್ಯದಲ್ಲಿ ಆಚರಿಸುತ್ತಿದ್ದ ಯುಗಾದಿಯ ಸವಿನೆನಪುಗಳು ಹಾಗೇ ನನ್ನ ಕಣ್ಣಲ್ಲಿ ಇನ್ನೂ ಹಸಿರಾಗಿ ಇವೆ. ನಾವೇ ಮನೆಯನ್ನೆಲ್ಲಾ ಅಲಂಕರಿಸ್ತಾ ಇದ್ದೆವು. ತೋರಣ ಕಟ್ಟುವುದು ಇತ್ಯಾದಿ ಮಾಡ್ತಾ ಇದ್ದೆವು. ಆ ಬಾಲ್ಯದ ನೆನುಗಳನ್ನು ಮರೆಯುವುದಕ್ಕಾಗುವುದಿಲ್ಲ. ಈಗ ದೊಡ್ಡವರಾದಂತೆ ನಮಗೆ ಸಿಗೋ ಹಬ್ಬದ ಹೊಣೆಗಾರಿಕೆಗಳು ಬೇರೆ ಇರುತ್ತವೆ. ಆದರೆ ಬಾಲ್ಯದಲ್ಲಿ ನಮಗೆ ಕೊಡುತ್ತಿದ್ದ ಕೆಲಸಗಳೆಲ್ಲಾ ಬೇರೆ ಥರ ಇರ್ತಿದ್ದವು. ಪುಟ್ಟ ಪುಟ್ಟ ಕೆಲಸಗಳನ್ನು ಹೇಳೋರು. ಏನು ಅಡುಗೆ ಮಾಡ್ತಾ ಇದ್ದಾರೆ ಅಂತ ಹೋಗಿ ನೋಡೋದು, ತರಲೆ ಮಾಡೋದು, ಅವರು ನಮ್ಮನ್ನು ಮುದ್ದು ಮಾಡೋದು, ಅವೆಲ್ಲಾ ಬಾಲ್ಯದ ಹಬ್ಬದ ಮರೆಯಲಾಗದ ನೆನಪುಗಳು. ಹಬ್ಬಕ್ಕೆ ಮಾಡೋ ಹೋಳಿಗೆ, ಕಾಯಿ ಕಡುಬು ಇವೆಲ್ಲಾ ನನ್ನ ಫೇವರಿಟ್. ಯುಗಾದಿಗೆ ಇವು ಇರಲೇಬೇಕು. ಕರ್ಜಿಕಾಯಿ, ಚಕ್ಲಿ, ಕೋಡುಬಳೆ ಇವೆಲ್ಲಾ ಇದ್ದೇ ಇರುತ್ವೆ. ಇವನ್ನೆಲ್ಲ ಈಗ್ಲೂ ಮಾಡ್ತೀವಿ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಈಕೆ! .