ಮನು ತಮ್ಮನ್ನು ಬ್ಲ್ಯಾಕ್‌ಮೇಲ್‌ ಮಾಡಿ ಅಪ್ಪಣ್ಣ ರಾಮದುರ್ಗ ವಿರುದ್ಧ ವಿಡಿಯೋ ಮಾಡಿಸಿದ್ದಾರೆ ಎಂದು ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರು ಮನು ವಿರುದ್ಧ ಸಹನಟಿಯೊಬ್ಬರು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ʼಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ಮಡೆನೂರು ಮನು ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಅದಾದ ಬಳಿಕ ಮನು ವಿರುದ್ಧ ಮಾತನಾಡಿರೋದು ತಪ್ಪು, ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದರು. ಈಗ ಆ ಸಂತ್ರಸ್ತೆಯು ನನ್ನ ಹಾಗೂ ಅಲೋಕ್‌ ಬ್ರೇಕಪ್‌ ಆಗಲು ಅಪ್ಪಣ್ಣ ಕಾರಣ ಎಂದು ಹೇಳಿರುವ ಆಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಒಳಗಾದ ಬಳಿಕ ಈ ಬಗ್ಗೆ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ಸಂತ್ರಸ್ಥೆ ಹೇಳಿದ್ದೇನು?

“ಮನು ಅವರು, ಈ ಹಿಂದೆ ನನ್ನ ಪಾಸ್ಟ್‌ ವಿಷಯ ಇಟ್ಕೊಂಡು, ವಿಡಿಯೋ ಮಾಡಿಸಿಕೊಂಡು ನನ್ನ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ನಾನು ಮೋಸಗಾರ ಅಂತ ನನ್ನ ಮೊಬೈಲ್‌ನಲ್ಲಿ ಮನು ನಂಬರ್‌ ಸೇವ್‌ ಮಾಡಿಕೊಂಡಿದ್ದೇನೆ. ಅಪ್ಪಣ್ಣನ ವಿರುದ್ಧ ಮಾತನಾಡುವ ವಿಡಿಯೋವನ್ನು ನೀನು ನನಗೆ ಮಾಡಿಕೊಡಬೇಕು ಅಂತ ಜೀವ ಬೆದರಿಕೆ ಹಾಕಿದ್ದನು. ಮನು ಮೇಲಿನ ಅತಿಯಾದ ಪ್ರೀತಿಗೆ ನಾನು ವಿಡಿಯೋ ಮಾಡಿಕೊಟ್ಟಿದ್ದೆ. ಇನ್ನು ನಾನು ಫೋನ್‌ನಲ್ಲಿ ಅಲೋಕ್‌ ಬಗ್ಗೆ ಮಾತಾಡಿರೋದನ್ನು ಮನು ರೆಕಾರ್ಡ್‌ ಮಾಡಿಕೊಂಡಿರೋದು ಕೂಡ ನನಗೆ ಗೊತ್ತಿರಲಿಲ್ಲ. ಅಪ್ಪಣ್ಣನ ಜೊತೆ ನಾನು ಶೋಗೆ ಹೋಗೋದು ಅವನಿಗೆ ಇಷ್ಟ ಆಗ್ತಿರಲಿಲ್ಲ. ಹೀಗಾಗಿ ಅವನು ಅಪ್ಪಣ್ಣನ ವಿರುದ್ಧ ವಿಡಿಯೋ ಮಾಡಿಸಿದ್ದಾನೆ. ಅಪ್ಪಣ್ಣ ನನ್ನ ನಂಬರ್‌ ಬ್ಲಾಕ್‌ ಮಾಡಿದ್ದಾನೆ. ಆಗ ನಾನು ಆರ್‌ ಆರ್‌ ನಗರಕ್ಕೆ ಹೋಗಿ ಅಪ್ಪಣ್ಣನಿಗೆ ಕ್ಷಮೆ ಕೇಳಿದ್ದೀನಿ” ಎಂದು ಸಂತ್ರಸ್ತೆ ಹೇಳಿದ್ದಾರೆ.

“ರಿಯಾಲಿಟಿ ಶೋ ಬರುವ ಮುನ್ನ ನನ್ನ ತಾಯಿ ಯಾವಾಗ ಮದುವೆ ಆಗ್ತೀಯಾ ಅಂತ ಕೇಳುತ್ತಿದ್ದಳು. ಮದುವೆ ಆಗದಿದ್ರೆ ಸಾಯ್ತೀನಿ ಅಂತ ಅಮ್ಮ ಹೇಳಿದ್ದಳು. ಅಲೋಕ್‌ ಎನ್ನುವ ವ್ಯಕ್ತಿಗೆ ಸಮಾಜಸೇವೆ ಮಾಡುವ ಆಸೆ ಇತ್ತು, ಮದುವೆ ಬಗ್ಗೆ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ. ನಾನು ಅಲೋಕ್‌ ಮದುವೆ ಆಗ್ತಿದ್ದೀವಿ ಅಂತ ತಾಯಿ ಬಳಿ ನಂಬಿಸಿದ್ದೆ. ಸೆಟಲ್‌ ಆದ್ಮೇಲೆ ಮದುವೆ ಆಗೋದು ನೋಡೋಣ ಅಂತ ಅಲೋಕ್‌ ಹೇಳಿದ್ದರು. ಅಲೋಕ್‌, ನನ್ನ ಮಧ್ಯೆ ಯಾವುದೇ ಲವ್‌ ಇಲ್ಲ. ಈ ವಿಚಾರ ಮನುಗೆ ಗೊತ್ತಿತ್ತು” ಎಂದು ಸಂತ್ರಸ್ತೆ ಹೇಳಿದ್ದಾರೆ.

“ನಾನು ಫೋನ್‌ ಮಾಡಿ, ನನಗೆ ಎರಡು ಬಾರಿ ಪ್ರಗ್ನೆಂಟ್‌ ಆಗಿದೀನಿ ಅಂತ ಮನು ಹೆಂಡ್ತಿಗೆ ಹೇಳಿದ್ದೆ. ಆಗ ಅವಳು ಮೊದಲೇ ಹೇಳಬಹುದಿತ್ತು ಅಂತ ಹೇಳಿದ್ದಳು. ನಾನು ಮೊದಲೇ ಅವನ ಹೆಂಡ್ತಿಗೆ ಫೋನ್‌ ಮಾಡಿ ಹೇಳಿದ್ರೆ ಮನು ನಮ್ಮನ್ನು ಸಾಯಿಸ್ತಿದ್ದ. ಈ ಹಿಂದೆ ಎರಡು ವರ್ಷಗಳಿಂದ ನನ್ನ ಹಾಗೂ ಮನು ಜೊತೆ ನಡೆದ ವಿಷಯವನ್ನು ಬಿಡಿ. ಕಳೆದ ಶನಿವಾರ ನನಗೆ ಕುಡಿಸಿ, ಲೈಂಗಿಕ ದೌರ್ಜನ್ಯ ಮಾಡಿದ್ದಕ್ಕೆ ನಾನು ದೂರು ಕೊಟ್ಟಿದೀನಿ ಅಷ್ಟೇ” ಎಂದು ಹೇಳಿದ್ದಾರೆ.

“ನನಗೆ ಮನು ಮದ್ಯವನ್ನು ಕುಡಿಸಿ, ಸಾಕಷ್ಟು ಆಡಿಯೋ, ವಿಡಿಯೋ ಮಾಡಿದ್ದಾನೆ. ಮೊನ್ನೆ ಶನಿವಾರ ನನಗೆ ಕುಡಿಸಿ, ಖಾಸಗಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ವೈರಲ್ ಆಗಿರುವ ಆಡಿಯೋ, ವಿಡಿಯೋಗಳನ್ನು ಬಲವಂತವಾಗಿ ಮನುನೇ ಮಾಡಿಸಿದ್ದಾನೆ. ಶನಿವಾರ ಕ್ರೂರವಾಗಿ ನಡ್ಕೊಂಡಿದ್ದಕ್ಕೆ ನಾನು ಕಂಪ್ಲೆಂಟ್ ಕೊಟ್ಟಿದೀನಿ. ಸಿನಿಮಾ ವಿಚಾರಕ್ಕೂ ಈ ದೂರಿಗೂ ಸಂಬಂಧ ಇಲ್ಲ. ಸಿನಿಮಾ ಟೀಂನವರು ದೂರು ಕೊಡದಂತೆ ಮನವಿ ಮಾಡ್ಕೊಂಡಿದ್ದರು. ಆದರೆ ನನಗೆ ಮೋಸ ಆಗಿರೋದಿಕ್ಕೆ ದೂರು ಕೊಟ್ಟಿದ್ದೀನಿ” ಎಂದು ಹೇಳಿದ್ದಾರೆ.

ವೈರಲ್‌ ಆಡಿಯೋದಲ್ಲಿ ಏನಿದೆ?

“ಕಾಮಿಡಿ ಕಿಲಾಡಿಗಳು ಶೋನಲ್ಲಿ ಅಪ್ಪಣ್ಣ ರಾಮದುರ್ಗ ಅಂತ ಇದ್ದಾನೆ. ಈ ಶೋ ಸೀಸನ್‌ 2 ರಿಂದ ನನಗೆ ಕಾಟ ಕೊಡುತ್ತಿದ್ದಾನೆ. ಇತ್ತೀಚೆಗೆ ಅವನ ಕಾಟ ಜಾಸ್ತಿ ಆಗ್ತಿದೆ. ಶೋಗೆ ಬಾ ಅಂತ ತುಂಬ ಕಾಟ ಕೊಡುತ್ತಿದ್ದಾನೆ. ಇದರಿಂದ ನನ್ನ, ಬಾಯ್‌ಫ್ರೆಂಡ್‌ ಅಲೋಕ್‌ ಬ್ರೇಕಪ್‌ ಮಾಡಿಕೊಳ್ಳಲು ಅಪ್ಪಣ್ಣ ಕಾರಣ. ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಅಪ್ಪಣ್ಣ ಕಾರಣ” ಎಂದು ಹೇಳಿದ್ದಾರೆ.