ಬಿಗ್​ಬಾಸ್​ ಮನೆಯಲ್ಲಿ ಅಶ್ಲೀಲದ ಪರಮಾವಧಿ! ಸ್ಪರ್ಧಿಗಳ ರೊಮ್ಯಾನ್ಸ್​ ವಿಡಿಯೋ ನೋಡಿ ಉಫ್​ ಅಂದ ಫ್ಯಾನ್ಸ್​

ಬಿಗ್​ಬಾಸ್​ ಅಶ್ಲೀಲತೆಗೆ ಪ್ರಚೋದನೆ ಕೊಡುತ್ತಿದೆಯೆ ಎಂಬ ವಿಷಯ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇದಕ್ಕೆ ಕಾರಣ ಈ ವೈರಲ್​ ವಿಡಿಯೋ...
 

Lot of discussion on social media Bigg Boss is encouraging obscenity video viral suc

ಬಿಗ್​ಬಾಸ್​ ಭಾಷೆ ಯಾವುದೇ ಇರಲಿ... ಅಲ್ಲಿ  ನಡೆಯುವುದೆಲ್ಲವೂ ಹೈಡ್ರಾಮಾಗಳೇ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲಿ ಏನೇ ನಡೆದರೂ, ಯಾವುದೇ ಕೃತ್ಯ ಜರುಗಿದರೂ ಅದು ಎಲ್ಲವೂ ಅಚಾನಕ್​ ಆಗಿ ನಡೆಯುವಂಥದ್ದು ಎಂದು ಬಿಗ್​ಬಾಸ್​ ಪ್ರಿಯರೆಲ್ಲಾ ಕಣ್​ಕಣ್​ ಬಿಟ್ಟು ನೋಡುತ್ತಿದ್ದರೂ,  ಅದರಲ್ಲಿ ನಡೆಯುವ ಘಟನೆಗಳೆಲ್ಲವೂ  ಸ್ಕ್ರಿಪ್ಟೆಡ್​ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್​ಬಾಸ್​​  ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು. ಅಳುವುದು, ಕಿರುಚಾಡುವುದು, ಹೊರಗಡೆ ಇದ್ದಾಗ ಕುಟುಂಬದವರ ಬಳಿ ಸುಳಿಯದೇ ಇದ್ದವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಅವರು ನೆನಪಾಗುತ್ತಾರೆ, ಇವರು ನೆನಪಾಗುತ್ತಾರೆ ಎಂದು ತಾವೂ ಅಳುವುದು ಅಲ್ಲದೇ, ಪ್ರೇಕ್ಷಕರನ್ನೂ ಅಳಿಸುವುದು, ಅದಕ್ಕೆ ಬಿಗ್​ಬಾಸ್​ ನಡೆಸಿಕೊಡುವವರೂ ಸೇರಿದಂತೆ ಮತ್ತೊಂದಿಷ್ಟು ಮಂದಿ ಸಮಾಧಾನ ಮಾಡಿದಂತೆ ಮಾಡುವುದು... ಹೀಗೆ ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುತ್ತದೆ, ಮನೆಯೊಳಕ್ಕೆ ಇದ್ದವರು ಕೈಗೊಂಬೆಗಳಷ್ಟೇ ಎಂದು ಬೇರೆ ಬೇರೆ ಭಾಷೆಗಳ ಸ್ಪರ್ಧಿಗಳೂ ಹೇಳಿದ್ದಾರೆ.  


ಇನ್ನು ಇಲ್ಲಿ ಅಶ್ಲೀಲತೆಗೂ ಕೊರತೆ ಏನಿಲ್ಲ. ಬಿಗ್​ ಬಾಸ್​ ಎಂದ ಮೇಲೆ ಭಾಷೆ ಯಾವುದೇ ಆಗಿರಲಿ, ಅಲ್ಲಿ ಪ್ರೀತಿ-ಪ್ರೇಮ ಒಂದಿಷ್ಟು ಅಶ್ಲೀಲ ಎಲ್ಲವೂ ಕಾಮನ್​ ಆಗಿವೆ.    ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್​ಬಾಸ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್​, ಜಗಳ, ಕ್ಯಾಮೆರಾ ಕಣ್ಣು ತಮ್ಮ ಮೇಲೆ ಇದೆ ಎಂದು ತಿಳಿದರೂ ರೊಮ್ಯಾನ್ಸ್​ ಮಾಡುವುದು, ಎಲ್ಲೆಂದರಲ್ಲಿ ಮುಟ್ಟಿಕೊಳ್ಳುವುದು ಇದು ಮಾಮೂಲಾಗಿದ್ದು, ಇದನ್ನು ನೋಡಿ ದೊಡ್ಡ ಮಟ್ಟದ ಪ್ರೇಕ್ಷಕರು ಎಂಜಾಯ್​ ಮಾಡುತ್ತಿದ್ದಾರೆ. ಇದೀಗ ಅಂಥದ್ದೇ ಒಂದು ವಿಡಿಯೋ ಹಿಂದಿ ಬಿಗ್​ಬಾಸ್​ ಮನೆಯಿಂದ ಬಂದಿದೆ. 

ಅಮ್ಮಾ-ಅಪ್ಪಾ ತಪ್ಪು​ ಮಾಡ್ಬಿಟ್ಟೆ, ತುಂಬಾ ನೋವಾಗ್ತಿದೆ ಎಂದು ಕಣ್ಣೀರು ಹಾಕಿದ ನಮ್ರತಾ: ಕಾಲೆಳೀತಿರೋ ನೆಟ್ಟಿಗರು!

ಬಿಗ್‌ ಬಾಸ್‌ ಹಿಂದಿ 16 ಆವೃತ್ತಿಗಳನ್ನು ಮುಗಿಸಿ ಇದೀಗ 17 ನೇ ಸೀಸನ್‌ ನಡೆಯುತ್ತಿದೆ. ಆದರೆ ಈ ಬಾರಿ ನೋಡುಗರ ಮುಜುಗರಕ್ಕೆ ಕಾರಣವಾಗುವ ಹಲವು ಘಟನೆಗಳು ಬಿಗ್‌ ಬಾಸ್‌ ಮನೆಯಲ್ಲಿ ನಡೆಯುತ್ತಿದೆ. ಬಿಗ್‌ ಬಾಸ್‌ 17 ಸ್ಪರ್ಧಿಗಳಾದ ಇಷಾ ಮಾಲವ್ಯ ಹಾಗೂ ಸಮರ್ಥ್ ಅವರ ಅನೇಕ ಫೋಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇಶಾ ಮತ್ತು ಸಮರ್ಥ್‌ ಅವರ ರೊಮ್ಯಾನ್ಸ್​ ನೋಡಿ ಪ್ರೇಕ್ಷಕರು ಉಫ್​ ಎನ್ನುತ್ತಿದ್ದಾರೆ. ಇವರ ರೊಮ್ಯಾನ್ಸ್​ ಮಿತಿ ಮೀರುತ್ತಿದ್ದು, ಕ್ಯಾಮೆರಾ ಎದುರೇ ಅಸಭ್ಯ ವರ್ತನೆ ಮಾಡುತ್ತಿರುವುದು ವೀಕ್ಷಕರಲ್ಲಿ ಸಂದೇಹ ಮೂಡಿಸಿದೆ. ಜನರು ತಮ್ಮನ್ನು ನೋಡುತ್ತಿದ್ದರೂ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರೆ ಇದು ಅವರಿಗೆ ಮುಂಚೆಯೇ ಹೇಳಿಕೊಡಲಾಗುತ್ತದೆಯೆ? ಟಿಆರ್​ಪಿಗೋಸ್ಕರ ಬಿಗ್​ಬಾಸ್​ ಅಶ್ಲೀಲತೆಯನ್ನು ಪ್ರಚೋದಿಸುತ್ತಿದೆಯೇ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಪ್ರಶ್ನಿಸುತ್ತಿದ್ದಾರೆ.

ಅಸಲಿಗೆ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಬಿಗ್​ಬಾಸ್​ ಮನೆಯಲ್ಲಿರುವ ಗಾರ್ಡನ್​ನಲ್ಲಿ  ಇಶಾ ಮತ್ತು ಸಮರ್ಥ್ ಇಬ್ಬರು ಮಲಗಿಕೊಂಡು ಮಾತನಾಡುತ್ತಿದ್ದಾರೆ. ಇಶಾ ಸ್ವಲ್ಪ ಅಸಹ್ಯ ರೀತಿಯಲ್ಲಿಯೇ  ಮಲಗಿದ್ದಾರೆ.  ಈ ವೇಳೆ ಇಶಾ ಅವರ ಕೆನ್ನೆಗೆ ಸಮರ್ಥ ಕಿಸ್‌ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಕಿಸ್​ ಮಾಡಿದ್ದಷ್ಟೇ ಅಲ್ಲ, ಇದು ಇನ್ನೂ ಮುಂದುವರೆದಿದೆ. ಸದ್ಯ ಅದರ ವಿಡಿಯೋ ಹೊರಬಂದಿಲ್ಲ ಎಂದು ಬಿಗ್​ಬಾಸ್​ ವೀಕ್ಷಕರು ಕಮೆಂಟ್​ ಮಾಡುತ್ತಿದ್ದಾರೆ. 

ರಣಬೀರ್​ ಜೊತೆ ಬೆತ್ತಲಾದಾಗ ಉದ್ವೇಗಗೊಂಡೆ, ಕೈ ಉಜ್ಜಿಕೊಳ್ತಿದ್ದನ್ನು ಅಪ್ಪ ಗಮನಿಸಿ ಹೀಗೆ ಕೇಳಿದ್ರು...

 
 
 
 
 
 
 
 
 
 
 
 
 
 
 

A post shared by Watch More (@watchmore1995)

Latest Videos
Follow Us:
Download App:
  • android
  • ios