ತುಮಕೂರು(ಮೇ  10)   ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಹದಿನಾಲ್ಕು ದಿನಗಳ ಸೆಮಿ ಲಾಕ್ ಡೌನ್ ಆರಂಭವಾಗಿದೆ. ಒಳಾಂಗಣ ಮತ್ತು ಹೊರಾಂಗಣ ಶೂಟಿಂಗ್  ಗೆ ನಿಷೇಧ ಹೇರಿದೆ.

ಆದರೆ ಲಾಕ್ ಡೌನ್ ಇದ್ರೂ 'ಗಟ್ಟಿಮೇಳ' ಧಾರವಾಹಿ ಶೂಟಿಂಗ್ ನಡೆಯುತ್ತಲೆ ಇದೆ. ಕುಣಿಗಲ್ ಬಳಿಯ ರಾಯಲ್ ಕಿಂಬರ್ಲಿ ರೆಸಾರ್ಟ್ ನಲ್ಲಿ ಗಟ್ಟಿಮೇಳ ಧಾರವಾಹಿ ಶೂಟಿಂಗ್ ನಡೆಯುತ್ತಿದೆ.

ಸುಮಾರು 20 ಮಂದಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಮೇ 10 ರಿಂದ 24 ರ ತನಕ ಯಾವುದೇ ಧಾರವಾಹಿ ಶೂಟ್ ಮಾಡಬಾರದು ಅಂತಾ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸೂಚನೆ ನೀಡಿತ್ತು.. ಹೀಗಿದ್ರೂ ಶೂಟಿಂಗ್ ನಡೆಸಲಾಗ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. 

ಬಿಗ್  ಬಾಸ್ ಮನೆಗೂ ಬೀಗ  ಹಾಕಿದ  ಕೊರೋನಾ

ಗಟ್ಟಿಮೇಳದ ನಟ ಪವನ್ ಕುಮಾರ್  ಕುಟುಂದ ಮೇಲೆ ಕೊರೋನಾ ಕರಿನೆರಳು ಬೀರಿತ್ತು. ಕೊರೋನಾ ವೈರಸ್‌ನಿಂದಾಗಿ ತಮ್ಮ ಭಾವ ಹಾಗೂ ಅವರ ತಂದೆಯನ್ನು ಎರಡು ದಿನದ ಅಂತರದಲ್ಲಿಯೇ ಕಳೆದುಕೊಂಡಿದ್ದರು. 

'ಕೋವಿಡ್‌19 ಗ್ರೌಂಡ್ ರಿಯಾಲಿಟಿ ಹೇಳುವೆ. ಈಗಿನ ಪರಿಸ್ಥಿತಿ ನೋಡಿದರೆ ಯಾವ ವೈದ್ಯಕೀಯ ಕ್ಷೇತ್ರವೂ  ಮ್ಯಾನೇಜ್ ಮಾಡಲು ಆಗದಷ್ಟು ಪರಿಸ್ಥಿತಿ ಹದಗೆಟ್ಟಿದೆ. ಎಲ್ಲವೂ ನಮ್ಮ ಕೈ ಮೀರಿ ಹೋಗುತ್ತಿದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇದು ಪ್ಯಾಂಡಮಿಕ್ ಅಲ್ಲ ಸರ್ಕಾರ ಸಮೂಹಿಕವಾಗಿ ಮಾಡುತ್ತಿರುವ ಕೊಲೆ,' ಎಂದು ಪವನ್ ಆಕ್ರೋಶ ಹೊರಹಾಕಿದ್ದರು .