"ಶ್ರಾವಣಿ ಸುಬ್ರಹ್ಮಣ್ಯ" ಧಾರಾವಾಹಿಯಲ್ಲಿ, ವಿಜಯಾಂಬಿಕಾ ಆಸ್ತಿಗಾಗಿ ತಮ್ಮನ ಕುಟುಂಬವನ್ನು ನಾಶ ಮಾಡಲು ಸಂಚು ರೂಪಿಸುತ್ತಿದ್ದಾಳೆ. ವೀರೇಂದ್ರ ದೇಸಾಯಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ವಿಡಿಯೋವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದಳು. ಆದರೆ ಲಲಿತಾ ದೇವಿಯಿಂದ ಆಕೆಯ ಯೋಜನೆ ವಿಫಲವಾಯಿತು.  

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ (Shravani Subramanya Serial ) ತನ್ನ ತಮ್ಮನ ಪರಿವಾರವನ್ನು ಹೇಗಾದರೂ ಮಾಡಿ ನಾಶ ಮಾದಿ ಆಸ್ತಿಯನ್ನು ಪಡೆಯೋದಕ್ಕೆ ಅಕ್ಕ ವಿಜಯಾಂಬಿಕ ಇಲ್ಲಿವರೆಗೂ ಹಲವಾರು ಯೋಜನೆಗಳನ್ನು ಮಾಡಿ, ಅದರಲ್ಲಿ ಸೋಲು ಕಂಡಿದ್ದಾಳೆ. ಈ ಮೊದಲು ತನ್ನ ಮಗನನ್ನು ಶ್ರಾವಣಿಗೆ ಮದುವೆ ಮಾಡಿಸಿ, ಆಕೆಯ ಆಸ್ತಿಯನ್ನು ಹೊಡೆಯಲು ಪ್ಲ್ಯಾನ್ ಮಾಡಿದ್ದಳು. ಶ್ರಾವಣಿಯ ಮದುವೆಗೆ ವೀರೇಂದ್ರ ದೇಸಾಯಿ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಕೊನೆಗೆ ಆಗಿದ್ದೇ ಬೇರೆ. ಶ್ರಾವಣಿ ಇಷ್ಟಪಟ್ಟಿದ್ದು, ಸುಬ್ಬುನನ್ನು, ಹಾಗಾಗಿ ಮದುವೆಯ ಕೊನೆಯ ಗಳಿಗೆಯಲ್ಲಿ ತನಗೆ ತಾನೇ ತಾಳಿ ಹಾಕಿಕೊಂಡ ಶ್ರಾವಣಿ, ತನ್ನ ಗಂಡ ಸುಬ್ರಹ್ಮಣ್ಯ ಎಂದು ಎಲ್ಲರೆದುರು ಹೇಳುವ ಮೂಲಕ, ವಿಜಯಾಂಬಿಕ ಆಟಕ್ಕೆ ಕೊನೆಗಾಣಿಸಿದ್ದಳು. 

ಶ್ರಾವಣಿ ಸುಬ್ರಮಣ್ಯ ನಿರ್ದೇಶಕರಿಗೆ ಲಲಿತಾ ದೇವಿ ಆರೋಗ್ಯದ ಕಾಳಜಿ ಇಲ್ಲವಾ? ಅಜ್ಜಿಯೇ ಇಷ್ಟು ಗಟ್ಟಿನಾ?

ಇದೀಗ ಮತ್ತೊಂದು ಯೋಜನೆ ಮೂಲಕ, ವಿಜಯಾಂಬಿಕ ವೀರೇಂದ್ರ ದೇಸಾಯಿಯ (Veerendra Desai) ಮಾರ್ಯಾದೆ ತೆಗೆದು, ಅವರನ್ನು ಅಧಿಕಾರದಿಂದ ಇಳಿಸುವ ಯೋಜನೆ ಮಾಡಿದ್ದಾಳೆ. ಅದೇನೆಂದರೆ, ತನ್ನ ಯಜಮಾನರನ್ನು ವೀರೇಂದ್ರ ದೇಸಾಯಿ ಅವರೇ ಸಾಯಿಸಿರೋದಾಗಿ ವಿಡೀಯೋ ಮಾಡಿ, ಅದನ್ನು ಮಾಧ್ಯಮಕ್ಕೆ ಹರಿಯ ಬಿಟ್ಟ ವಿಜಯಾಂಬಿಕ, ಅದನ್ನು ತಡೆಯಲು ಹೋಗುತ್ತಿರುವ ಲಲಿತಾ ದೇವಿಯನ್ನೇ ಮುಗಿಸುವ ಪ್ಲ್ಯಾನ್ ಮಾಡಿದ್ದಳು. ಆದರೆ ಇದೀಗ ವಿಜಯಾಂಬಿಕ ಪ್ಲ್ಯಾನ್ ಉಲ್ಟಾ ಹೊಡೆದಿದೆ. 

ಬೆಸ್ಕಾಂ ಕೃಪೆಯಿಂದ ಸಬ್ಬುಗೆ ಸಿಕ್ತು ಶ್ರಾವಣಿಯ ಸಿಹಿ ಚುಂಬನ; ವಿಶಾಲಕ್ಷಿ ಶಾಕ್, ಪದ್ಮನಾಭ್ ಫುಲ್ ಖುಷ್!

ಮಾಧ್ಯಮದ ಎದುರು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವೀರೇಂದ್ರ, ನಾನು ರಾಜಕೀಯಕ್ಕೆ ಬಂದಾಗಿನಿಂದ ಯಜಮಾನರು ಹಾಕಿ ಕೊಟ್ಟ ದಾರಿಯಲ್ಲೇ ನಾನು ನಡೆಯುತ್ತಿದೇನೆ. ಅವರು ಹಾಗೂ ಅವರ ಆದರ್ಶಗಳು ಯಾವಾಗ್ಲೂ ನನ್ನಲ್ಲಿ ಜೀವಂತವಾಗಿವೆ ಎನ್ನುತ್ತಾರೆ. ಆವಾಗ ಮಾಧ್ಯಮದವರು ನಿಮಗೆ ಆದರ್ಶ ಇರೋದೆ ಆದ್ರೆ ರಾಜೀನಾಮೆ ಕೊಡಿ ಎನ್ನುತ್ತಾರೆ. ಇದನ್ನು ಕೇಳಿ ವಿಜಯಾಂಬಿಕ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಾಳೆ, ಒಂದೆದೆ ಆ ಲಲಿತಾ ದೇವಿ ಕಥೆ ಮುಗಿದ್ರೆ, ಇನ್ನೊಂದು ಕಡೆ ವೀರೇಂದ್ರ ಕಥೆ ಮುಗಿಯುತ್ತೆ ಎನ್ನುತ್ತಿರುತ್ತಾಳೆ. ಇತ್ತ ವೀರೇಂದ್ರ ದೇಸಾಯಿ ಕೂಡ ರಾಜೀನಾಮೇ ಕೊಡೋದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅಷ್ಟರಲ್ಲೇ ಅಲ್ಲಿಗೆ ಬರುವ ಲಲಿತಾ ದೇವಿ, ನೀನು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎನ್ನುತ್ತಾಳೆ. ಇದನ್ನು ನೋಡಿ ವಿಜಯಾಂಬಿಕ ಶಾಕ್ ಆಗುತ್ತಾಳೆ. ಇನ್ನು ಮುಂದೆ ಇದೆ ಕಥೆಯಲ್ಲಿ ಟ್ವಿಸ್ಟ್. 

ಮುಂದೆ ವೀರೇಂದ್ರ ದೇಸಾಯಿ ಮಂತ್ರಿಯಾಗಿ ಮುಂದುವರೆಯುತ್ತಾರೆಯೇ? ಮಗಳು ಮತ್ತು ಅಳಿಯನನ್ನು ಅವರು ಸ್ವೀಕರಿಸುತ್ತಾರೆಯೇ? ಅಕ್ಕ ವಿಜಯಾಂಬಿಕ ಕುತಂತ್ರ ಅವರಿಗೆ ಗೊತ್ತಾಗುತ್ತದೆಯೇ? ಅನ್ನೋದೆಲ್ಲಾ ಕಾದು ನೋಡಬೇಕು. ಅಂದಹಾಗೇ ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಅಮೋಘ್ ಆದಿತ್ಯ, ಆಸಿಯಾ ಫಿರ್ದೋಸೆ, ಮೋಹನ್, ಸ್ನೇಹಾ,ಬಾಲರಾಜ್ ಮೊದಲಾದ ತಾರಾಗಣ ಇದೆ. 

View post on Instagram