ಬಿಲ್ಡಿಂಗ್ ಮೇಲೆ ಹಗ್ಗ ಹಿಡಿದು ನೇತಾಡಿದ ಲಕ್ಷ್ಮೀ ಬಾರಮ್ಮ ಕಾವೇರಿ! ಮೈ ಝುಂ ಎನ್ನುವ ಶೂಟಿಂಗ್ ದೃಶ್ಯ
ಸೀರಿಯಲ್ಗಳಲ್ಲಿ ಸಾಹಸ ದೃಶ್ಯಗಳನ್ನು ಮಾಡುವಾಗ ಎಷ್ಟು ರಿಸ್ಕ್ ಇರುತ್ತದೆ ಎನ್ನುವುದು ಬಿಲ್ಡಿಂಗ್ ಮೇಲೆ ಹಗ್ಗ ಹಿಡಿದು ನೇತಾಡಿದ ಲಕ್ಷ್ಮೀ ಬಾರಮ್ಮ ಕಾವೇರಿಯ ದೃಶ್ಯ ತೋರಿಸುತ್ತದೆ ನೋಡಿ...
ಸಿನಿಮಾ ಅಥವಾ ಸೀರಿಯಲ್ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಬೀಳೋ ದೃಶ್ಯಗಳು, ಆತ್ಮಹತ್ಯೆ ಮಾಡಿಕೊಳ್ಳಲು ಮಹಡಿಯಿಂದ ಬೀಳುವ ದೃಶ್ಯಗಳು ಸರ್ವೇ ಸಾಮಾನ್ಯ. ಆತ್ಮಹತ್ಯೆ ಮಾಡಿಕೊಳ್ಳೋದು, ಯಾರೋ ತಳ್ಳೋದು ಇತ್ಯಾದಿ ಎಲ್ಲಾ ನಡೆದೇ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇಂಥ ಸೀನ್ಗಳಿಗಾಗಿ ಡ್ಯೂಪ್ಗಳನ್ನು ಇಟ್ಟಿರುತ್ತಾರೆ. ಎಕ್ಸ್ಪರ್ಟ್ಗಳು ಅದನ್ನು ಮಾಡುತ್ತಾರೆ. ಇಂಥವುಗಳಲ್ಲಿ ತುಂಬಾ ನುರಿತರು ಇರುತ್ತಾರೆ. ಮೇಲಿನಿಂದ ಬೀಳುವ ಸಂದರ್ಭಗಳಲ್ಲಿ ಕೆಳಗೆ ನೆಟ್ ಹಿಡಿದುಕೊಂಡೋ ಅಥವಾ ಇನ್ನಾವುದೋ ಮುಂಜಾಗರೂಕತೆಯನ್ನು ತೆಗೆದುಕೊಳ್ಳಲಾಗುತ್ತದೆ. ಕೆಲವು ನಾಯಕಿ, ನಾಯಕಿಯರು ಡ್ಯೂಪ್ಗಳನ್ನು ಬಳಸದೇ ತಾವೇ ಖುದ್ದು ಇಂಥ ಸೀನ್ ಮಾಡುವುದೂ ಇದೆ. ಮಹಡಿಗಳ ಮೇಲಿನಿಂದ ಬೀಳುವ ದೃಶ್ಯಗಳಲ್ಲಿ ಕೆಳಗಡೆ ಸೋಫಾ ಇಟ್ಟಿರಲಾಗುತ್ತದೆ. ಕೊನೆಯಲ್ಲಿ ಬ್ಲ್ಯೂಸ್ಕ್ರೀನ್ ಉಪಯೋಗಿಸಿ ಅಲ್ಲಿರುವ ಸೋಫಾ ಅಥವಾ ಸುರಕ್ಷಿತ ಸಾಧನಗಳನ್ನು ಕಾಣದ ಹಾಗೆ ಮಾಡಿ, ರಿಯಲ್ ಆಗಿ ಬಿದ್ದವರ ಹಾಗೆ ತೋರಿಸಲಾಗುತ್ತದೆ.
ಅದೇ ರೀತಿ ಲಕ್ಷ್ಮೀ ಬಾರಮ್ಮಾ ಸೀರಿಯಲ್ನ ಶೂಟಿಂಗ್ ಸೆಟ್ನಲ್ಲಿ ನಡೆದ ಕಾವೇರಿಯ ಆತ್ಮಹತ್ಯೆಯ ದೃಶ್ಯಗಳ ಬಗ್ಗೆ ಇದೀಗ ಲಕ್ಷ್ಮೀ ಬಾರಮ್ಮ ಸೀರಿಯಲ್ನ ಗಂಗಾ ಪಾತ್ರಧಾರಿ ಹರ್ಷಿತಾ ಅವರು ತಮ್ಮ ಯೂಟ್ಯೂಬ್ಬಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕಾವೇರಿ ಪಾತ್ರಧಾರಿಯ ಬದಲು ಬಿಲ್ಡಿಂಗ್ನಲ್ಲಿ ಡ್ಯೂಪ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವಿದೆ. ಇದರಲ್ಲಿ ಮಹಿಳೆ ಮಾಡುತ್ತಿರುವ ದೃಶ್ಯವನ್ನು ನೋಡಿದರೆ ಮೈ ಝುಂ ಎನ್ನಿಸುತ್ತದೆ. ಇದರಲ್ಲಿ ಕಾವೇರಿ ಹಗ್ಗವನ್ನು ಹಿಡಿದು ನೇತಾಡುವ ದೃಶ್ಯವಿದೆ. ಎಷ್ಟೇ ಕೈ ನೋವಾದರೂ ಈ ದೃಶ್ಯವನ್ನು ಆ ಮಹಿಳೆ ಕಷ್ಟಪಟ್ಟು ಮಾಡಿರುವುದಾಗಿ ಹರ್ಷಿತಾ ಹೇಳಿಕೊಂಡಿದ್ದಾರೆ.
ಪುಟ್ಟಕ್ಕನ ಮಗಳು ಸ್ನೇಹಾಳನ್ನು ಚಿತೆಗೇರಿಸೋ ಮುನ್ನ ಶೂಟಿಂಗ್ ಸೆಟ್ನಲ್ಲಿ ಆಗಿದ್ದೇನು? ವಿಡಿಯೋ ವೈರಲ್
ಅಷ್ಟಕ್ಕೂ, ಎಲ್ಲಾ ಸಂದರ್ಭಗಳಲ್ಲಿಯೂ ಶೂಟಿಂಗ್ ಈಸಿ ಇರುತ್ತದೆ ಎಂದು ಹೇಳಲೂ ಆಗದು. ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ.
ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್ ನಡೆಯುತ್ತದೆ. ಈ ಶೂಟಿಂಗ್ನಲ್ಲಿಯೂ ಒಂದು ದೃಶ್ಯಕ್ಕೆ ಎಷ್ಟೊಂದು ಟೆನ್ಷನ್ ಕ್ರಿಯೇಟ್ ಆಗಿದೆ ಎಂದು ನೋಡಬಹುದು. ಕೆಳಗಡೆ ಸುರಕ್ಷತಾ ಕ್ರಮಗಳು ಇವೆಯೋ ಇಲ್ಲವೋ ಎನ್ನುವುದು ಈ ವಿಡಿಯೋದಲ್ಲಿ ಅಷ್ಟು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಸುರಕ್ಷತೆಗಳನ್ನೂ ತೆಗೆದುಕೊಂಡಿರಲಾಗುತ್ತದೆ. ಆದರೂ ಇಂಥ ಸಾಹಸ ದೃಶ್ಯ ಮಾಡುವಾಗ ಸಾಹಸ ಅಂತೂ ಬೇಕೇ ಬೇಕು.
ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ