Asianet Suvarna News Asianet Suvarna News

ಲಕ್ಷ್ಮೀ ಬಾರಮ್ಮ: ಹೆಂಡತಿಗೋಸ್ಕರ ಮಂಡಿಯೂರು ಆದರೆ ತಾಂಡವ್ ತರ ಹೆಣ್ಣಿಗೋಸ್ಕರ ಮಂಡಿಯೂರಬೇಡ

ವೈಷ್ಣವ್ ಹೆಂಡತಿ ಮುಂದೆ ಮಂಡಿಯೂರಿ ಸಾರಿ ಕೇಳಿದಾಗ ಲಕ್ಷ್ಮೀ ಕರಗಿ ಹೋಗುತ್ತಾಳೆ. ಆದರೆ, ಗಂಡ ತನ್ನದೇ ಕಾರ್ಟೂನ್ ಕೊಟ್ಟು 'ನೀನು ಲೆಕ್ಷರ್ ಕೊಡ್ತೀಯಾ' ಎಂದಾಗ ಹುಸಿಕೋಪ ಮಾಡಿಕೊಳ್ಳುತ್ತಾಳೆ. ಇಲ್ಲಿ, ಗಂಡ ತನ್ನ ಕಾರ್ಟೂನ್ ಕೊಟ್ಟಾಗ ಅವಳಿಗೆ ಖುಷಿಯಾದರೂ, ತನ್ನನ್ನು ಲೆಕ್ಷರ್ ಕೊಡುವಾಕೆ ಎಂದಿದ್ದಕ್ಕೆ ಆಕೆಗೆ ಬೇಸರವಿದೆ.

Lakshmi Baramma serial vaishnav started to love his wife Lakshmi srb
Author
First Published Oct 25, 2023, 3:53 PM IST

ಕಲರ್ಸ್ ಕನ್ನಡದಲ್ಲಿ ಸಂಜೆ 7.30ಕ್ಕೆ ಪ್ರಸಾರವಾಗುತ್ತಿರುವ ಧಾರಾವಾಹಿ 'ಲಕ್ಷ್ಮೀ ಬಾರಮ್ಮ'. ಈ ಧಾರಾವಾಹಿಯಲ್ಲಿ ಬರುವ ವೈಷ್ಣವ್ ಮತ್ತು ಮಹಾಲಕ್ಷ್ಮೀ ಪಾತ್ರಗಳು ಟಿವಿ ವೀಕ್ಷಕರನ್ನು 'ಮೈಸೂರ್ ಪಾಕ್‌'ನಂತೆ ಸೆಳೆಯುತ್ತಿವೆ. ಈ ಧಾರಾವಾಹಿಯಲ್ಲಿ ಸದ್ಯ ಸಂತೋಷ-ಸಂಭ್ರಮದ ಕ್ಷಣಗಳು ಮೂಡಿಬರುತ್ತಿವೆ. ವೈಷ್ಣವ್ ಹಾಗೂ ಅವನ ತಾಯಿಯನ್ನು ಒಂದು ಮಾಡಲು ಸ್ವತಃ ಲಕ್ಷ್ಮೀ ಪ್ರಯತ್ನಿಸುತ್ತಿದ್ದಾಳೆ. ಹೆಂಡತಿ ಲಕ್ಷ್ಮಿಯ ಒಳ್ಳೇತನ ನೋಡಿ ಗಂಡ ವೈಷ್ಣವ್ ಕರಗಿ ನೀರಾಗಿದ್ದು, ಅವಳ ಮುಂದೆ ಮಂಡಿಯೂರಿದ್ದಾನೆ. 

ಲಕ್ಷ್ಮೀ ಬಾರಮ್ಮ ಪ್ರೊಮೋ ನೋಡಿ ಹಲವರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು 'ಹೆಂಡತಿಗೋಸ್ಕರ ಮಂಡಿಯೂರು ಆದರೆ ತಾಂಡವ್ ತರ ಹೆಣ್ಣಿಗೋಸ್ಕರ ಮಂಡಿಯೂರಬೇಡ' ಎಂದು ಕಾಮೆಂಟ್ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೊಬ್ಬರು 'ಕಾವೇರಿ ಎಲ್ಲಿದ್ದಿಯಾ, ಇಲ್ಲಿ ಬಂದು ಮಗ ಸೊಸೆನಾ ನೋಡಿ ಹೊಟ್ಟೆ ಉರ್ಕೊಳ್ಳುವಂತೆ' ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೇ ಬಹಳಷ್ಟು ವಿಭಿನ್ನ ಟೀಕೆ-ಟಿಪ್ಪಣೆಗಳು ಈ ಸೀರಿಯಲ್ ಪ್ರೊಮೋ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮೂಡಿ ಬಂದಿವೆ. 

ಬಿಗ್ ಬಾಸ್ ಕನ್ನಡ: ದೊಡ್ಮನೆಯಲ್ಲಿ ಫೈರ್ ಕ್ಯಾಂಪ್, ಹಲವು ಕತೆಗಳು ಕಣ್ಣೀರಾಗಿ ಹರಿದವು!

ವೈಷ್ಣವ್ ಹೆಂಡತಿ ಮುಂದೆ ಮಂಡಿಯೂರಿ ಸಾರಿ ಕೇಳಿದಾಗ ಲಕ್ಷ್ಮೀ ಕರಗಿ ಹೋಗುತ್ತಾಳೆ. ಆದರೆ, ಗಂಡ ತನ್ನದೇ ಕಾರ್ಟೂನ್ ಕೊಟ್ಟು 'ನೀನು ಲೆಕ್ಷರ್ ಕೊಡ್ತೀಯಾ' ಎಂದಾಗ ಹುಸಿಕೋಪ ಮಾಡಿಕೊಳ್ಳುತ್ತಾಳೆ. ಇಲ್ಲಿ, ಗಂಡ ತನ್ನ ಕಾರ್ಟೂನ್ ಕೊಟ್ಟಾಗ ಅವಳಿಗೆ ಖುಷಿಯಾದರೂ, ತನ್ನನ್ನು ಲೆಕ್ಷರ್ ಕೊಡುವಾಕೆ ಎಂದಿದ್ದಕ್ಕೆ ಆಕೆಗೆ ಬೇಸರವಿದೆ. ಆದರೂ ನೀನು ಕೋಪ ಮಾಡಿಕೊಂಡಾಗ ಇನ್ನೂ ಚೆಂದ ಎಂದು ಗಂಡ ಹೇಳಿದಾಗ ಮುಖ ಸ್ವಲ್ಪ ಕೆಂಪಗಾಗುತ್ತದೆ. ಏನೇ ಆದರೂ ವೈಷ್ಣವ್ ಈಗ ಹೆಂಡತಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದ್ದಾನೆ. 

ಮಗನಿಗೆ ಊಟದಲ್ಲಿ ವಿಷ ಹಾಕಿ ಸಾಯಿಸ್ಬಿಡಿ ಅಂದಿದ್ರು; ತಾರಾ ಬಳಿ ದುಃಖ ತೋಡಿಕೊಂಡ ಪ್ರತಾಪ್!

ಒಟ್ಟಿನಲ್ಲಿ, ಲಕ್ಷ್ಮೀ ಬಾರಮ್ಮ ಸೀರಿಯಲ್, ಈ ಸೀರಿಯಲ್ ಪ್ರಿಯರಿಗೆ ಈಗ ಇನ್ನೂ ಹೆಚ್ಚು ಇಷ್ಟವಾಗತೊಡಗಿದೆ. ಏಕೆಂದರೆ, ಈಗ ಲಕ್ಷ್ಮಿ ಮತ್ತು ವೈಷ್ಣವ್ ಹತ್ತಿರವಾಗುತ್ತಿರುವ ಜತೆಗೆ, ಕಾವೇರಿಗೆ ಈಗ ಕಷ್ಟವಾಗತೊಡಗಿದೆ. ಮಗ-ಸೊಸೆ ಒಂದಾದರೆ ಕಾವೇರಿಗೆ ಕಷ್ಟ ಎಂಬುದು ವೀಕ್ಷಕರ ವಲಯದ ಅನಿಸಿಕೆ. ಆದರೆ, ಸೊಸೆ ಲಕ್ಷ್ಮೀ ತನ್ನ ಅತ್ತೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಹೊಂದಿದ್ದಾಳೆ. ಈ ಕಾರಣಕ್ಕೇ ಲಕ್ಷ್ಮೀ, ಗಂಡ ವೈಷ್ಣವ್ ಹಾಗೂ ಅತ್ತೆ ಕಾವೇರಿಯನ್ನು ಒಂದು ಮಾಡಲು ಸತತ ಪ್ರಯತ್ನ ನಡೆಸಿದ್ದಾಳೆ. ಅಂದಹಾಗೆ, ಲಕ್ಷ್ಮೀ ಬಾರಮ್ಮ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. 

Follow Us:
Download App:
  • android
  • ios