ನನ್ನ ಬ್ಯಾಚ್‌ನಲ್ಲಿ ಮೊದಲು ನಾನೇ ಮದುವೆಯಾಗಿದ್ದು, ನನ್ನ ಬಿಟ್ಟು ಬೇರೆ ಎಲ್ಲರಿಗೂ ಮಕ್ಕಳಿದ್ದಾರೆ; ಚೈತ್ರಾ ವಾಸುದೇವನ್
ನನ್ನ ಬ್ಯಾಚ್‌ನಲ್ಲಿ ನಾನೇ ಮೊದಲು ಮದುವೆಯಾಗಿದ್ದು. ಆದರೆ, ನನಗಿಂತ ತಡವಾಗಿ ಮದುವೆಯಾದ ಎಲ್ಲರಿಗೂ ಮಕ್ಕಳಿದ್ದಾರೆ. ನನ್ನ ಜೀವನದಲ್ಲಿ ಅದ್ಯಾವುದೂ ಈಡೇರಲಿಲ್ಲ.
ಬೆಂಗಳೂರು (ಆ.04): ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋ ನಿರೂಪಕಿ ಚೈತ್ರಾ ವಾಸುದೇವನ್ ನೋಡಲು ಗೊಂಬೆಯಂತಿದ್ದು, ಪಟ ಪಟನೇ ಮಾತನಾಡುತ್ತಾ ಮೋಡಿ ಮಾಡುತ್ತಾರೆ. ಆದರೆ, ಅವರ ನಗುವಿನ ಹಿಂದೆ ಒಂದು ಕಾರಾಳ ಕಥೆಯಿದೆ. ನಾನು ಕಾಲೇಜು ಓದಿದ ಬ್ಯಾಚ್‌ನಲ್ಲಿ ಮೊದಲು ಮದುವೆ ಆಗಿದ್ದೇನೆ. ಆದರೆ, ನನಗಿಂದ ತಡವಾಗಿ ಮದುವೆಯಾದವರೆಲ್ಲರೂ ಮಕ್ಕಳಿದ್ದಾರೆ, ನನಗೆ ಮಾತ್ರ ಮಗುವಿಲ್ಲ ಎಂದು ಚೈತ್ರಾ ವಾಸುದೇವನ್ ಅಳಲು ತೋಡಿಕೊಂಡಿದ್ದಾರೆ.
ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಸಂದರ್ಶನದಲ್ಲಿ ಜೀವನದ ಕರಾಳ ಕಥೆಯನ್ನು ಹಂಚಿಕೊಂಡಿರುವ ಚೈತ್ರಾ ವಾಸುದೇವನ್ ಹಂಚಿಕೊಂಡಿದ್ದಾರೆ. ಆದರೆ, ಇದಕ್ಕಿಂತಲೂ ಮುಂಚಿತವಾಗಿ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ತಮಗೆ ಡಿವೋರ್ಸ್ ಆಗಿರುವ ಕಹಿ ಘಟನೆಯನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದರು. ಇಲ್ಲಿ ನಿರೂಪಕಿ ಅನುಶ್ರೀ ಹಾಗೂ ನವರಸನಾಯಕ ಜಗ್ಗೇಶ್ ಎಲ್ಲರೂ ಸೇರಿ ಧೈರ್ಯವಾಗಿ ಸಮಾಜವನ್ನು ಎದುರಿಸುತ್ತಿದ್ದೀಯ. ಎಲ್ಲ ಕಷ್ಟಗಳ ಹಿಂದೆಯೇ ಸುಖ ಜೀವನವೂ ಬರುತ್ತದೆ. ಮುಂದೆ ಬರುವ ಒಳ್ಳೆಯ ಜೀವನವನ್ನು ಅನುಭವಿಸುತ್ತೀಯ ಎಂದು ಎಲ್ಲರೂ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಿದ್ದರು.
ಎನೋ ಸೀಕ್ರೆಟ್ ಹೇಳ್ಬಿಟ್ರು ಬಿಗ್ ಬಾಸ್ ಖ್ಯಾತಿ ಚೈತ್ರಾ ವಾಸುದೇವನ್; ಚಿಕ್ಕ ವಯಸ್ಸಲ್ಲೇ ಇಷ್ಟೊಂದ್ ಅನುಭವ?
ಇದಾದ ಬಳಿಕ ರ್ಯಾಪಿಡ್ ರಶ್ಮಿ ಅವರ ಯೂಟೂಬ್ ಚಾನೆಲ್‌ಗೆ ಸಂದರ್ಶನ ನೀಡಿ ತಮ್ಮ ಜೀವನದಲ್ಲಿ ಎದುರಿಸಿದ ಕರಾಳ ಘಟನೆಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾ ಹೋಗಿದ್ದಾರೆ. ಇನ್ನು ಈವೆಂಟ್ ಮ್ಯಾನೇಜ್‌ಮೆಂಟ್ ಮಾಡುತ್ತಾ, ನಿರೂಪಣೆ ಮಾಡುತ್ತಾ ಕಿರುತೆರೆಯಲ್ಲಿ ಗುರುತಿಸಿಕೊಂಡ ಚೈತ್ರಾ, ತಮ್ಮ ಕಾಲೇಜು ಬ್ಯಾಚ್‌ನಲ್ಲಿ ಓದುತ್ತಿದ್ದವರ ಪೈಕಿ ಅತಿ ಬೇಗನೇ ಮದುವೆ ಮಾಡಿಕೊಂಡ ಹುಡಿಗಿ ಆಗಿದ್ದಳು. ಅಂದರೆ 2017ರಲ್ಲಿಯೇ ಸತ್ಯ ನಾಯ್ಡು ಎಂಬುವರೊಂದಿಗೆ ಮದುವೆಯಾಗಿ ಜೀವನ ಆರಂಭಿಸುತ್ತಾರೆ. ಆದರೆ, ಚೈತ್ರಾ ವೈವಾಹಿಕ ಜೀವನದ ಕನಸು ಕಂಡಿದ್ದಕ್ಕೂ, ನಿಜ ಜೀವನದಲ್ಲಿ ನಡೆಯುತ್ತಿರುವುದಕ್ಕೂ ಸಂಬಂಧವೇ ಇರಲಿಲ್ಲ. ಗಂಡನೊಂದಿಗೆ ಸಂಸಾರ ಆರಂಭಿಸಿದ ಪ್ರತಿ ಕ್ಷಣಗಳನ್ನು ನರಕದಂತೆ ಕಳೆದ ಚೈತ್ರಾ ವಾಸುದೇವನ್ ಸುಮಾರು 6 ವರ್ಷಗಳು ಎಲ್ಲವನ್ನೂ ಸಹಿಸಿಕೊಂಡು ಕೊನೆಗೆ ಗಂಡನಿಗೆ ಡಿವೋರ್ಸ್ ಕೊಟ್ಟು ತಂದೆ ತಾಯಿಯೊಂದಿಗೆ ಉಳಿದುಕೊಂಡಿರುವ ಸತ್ಯವನ್ನು ಹಂಚಿಕೊಂಡಿದ್ದಾಳೆ.
ಮದುವೆಯಾದರೂ ಸಣ್ಣದಕ್ಕೂ ಕಿತ್ತಾಡಿಕೊಂಡು ಅಪ್ಪ ಅಮ್ಮನ ಮನೆಗೆ ಹೋಗುವಂತಹ ಸಿಲ್ಲಿ ಗರ್ಲ್ ನಾನಾಗಿರಲಿಲ್ಲ. ಕುಟುಂಬದ ಜವಾಬ್ದಾರಿಗಳನ್ನು ಅರಿತು ನಡೆದುಕೊಳ್ಳಬೇಕೆಂದು ತುಂಬಾ ತಾಳ್ಮೆಯಿಂದ ನಡೆದುಕೊಳ್ಳುತ್ತಿದ್ದೆ. ಕಾರಣ, ನಾನು ಜೀವನ ಹಾಗೂ ಸಂಸಾರದ ಸಾಕಷ್ಟು ಪ್ಲಾನ್ ಹಾಕಿದ್ದೆ. ನಾನು, ನನ್ನ ಕುಟುಂಬ, ನನ್ನ ಗಂಡ, ನಮ್ಮ ಮಕ್ಕಳು.... ಹೀಗೆ ನೂರೆಂಟು ಕನಸು ಕಂಡಿದ್ದೆನು. ಒಂದು ಹುಡುಗ ಅವರ ಅಪ್ಪ ಅಮ್ಮನೊಂದಿಗೆ ಇದ್ದಾಗ, ಕುಟುಂಬದ ಮೌಲ್ಯಗಳ ಬಗ್ಗೆ ಗೊತ್ತಿರುತ್ತದೆ. ಅಂಥ ಕುಟುಂಬದ ಆಯ್ಕೆಯೇ ನನ್ನದಾಗಿತ್ತು. ಇನ್ನು ನನಗೆ ಹುಟ್ಟುವ ಮಗುವಿಗೆ ಏನೆಲ್ಲಾ ಹೇಳಿಕೊಡಬೇಕು, ಸಮಾಜಕ್ಕೆ ಮಗುವನ್ನು ಹೇಗೆ ಮಾದರಿಯಾಗಿ ವ್ಯಕ್ತಿತ್ವ ರೂಪಿಸಬೇಕು ಎಂಬ ಬಗ್ಗೆ ಸಾಕಷ್ಟು ಕಲ್ಪನೆಯನ್ನು ಕಟ್ಟಿಕೊಂಡಿದ್ದನು. ಆದರೆ, ಅದ್ಯಾವುದೂ ಈಡೇರಲಿಲ್ಲ.
ನಮ್ಮ ಕಾಲೇಜಿನ ಬ್ಯಾಚ್‌ನಲ್ಲಿಯೇ ನನ್ನದೇ ಬಹುಬೇಗ ಮದುವೆ ಆಗಿದ್ದು. ಆದರೆ, ನನಗಿಂತ ತಡವಾಗಿ ಮದುವೆಯಾದ ಎಲ್ಲ ಸ್ನೇಹಿತರಿಗೂ ಸುಂದರ ಕುಟುಂಬವಿದ್ದು, ಅವರಿಗೆ ಮಕ್ಕಳಿದ್ದಾರೆ. ಆದರೆ, ನನ್ನ ಜೀವನದಲ್ಲಿ ನಾನಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಮುಂದಿನ ದಿನಗಳಲ್ಲಿ ಟ್ರೂ ಲವ್ ಹುಡುಕಾಟದಲ್ಲಿದ್ದೇನೆ, ನೋಡೋಣ. ಆದರೆ, ನಮ್ಮ ಜೀವನದಲ್ಲಿ ಯಾರೇ ಬಂದು ಹೋದರೂ ಅದಕ್ಕೊಂದು ಕಾರಣವಿರುತ್ತದೆ. ಕೆಲವರು ನಿಮಗೆ ಒಳ್ಳೆಯ ನೆನಪಾಗಿ ಉಳಿಯುತ್ತಾರೆ. ಇನ್ನು ಕೆಲವರು ಖುಷಿಯನ್ನು ಹಂಚಿ ಹೋಗುತ್ತಾರೆ. ಮತ್ತೆ ಕೆಲವರು ನೀನು ಹೀಗೆ ಮಾರಬಾರದು ಎಂದು ಬುದ್ಧಿಯನ್ನು ಹೇಳಿ ಹೋಗುತ್ತಾರೆ. ಆದರೆ, ಇದಕ್ಕೆಲ್ಲ ನನ್ನ ಪೂರ್ವ ಜ್ಮದ ಕರ್ಮದ ಫಲವೇ ಇರಬೇಕು ಎಂದು ನಾನು ಎಲ್ಲವನ್ನು ನುಂಗಿಕೊಂಡಿದ್ದೇನೆ.