ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವೀಕ್ಷಕರಿಗೆ ಫುಲ್ ಗುಡ್‌ನ್ಯೂಸ್ ಸಿಕ್ಕಿದೆ.
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೆ ಇನ್ನೊಂದು ಮದುವೆ ಮಾಡ್ತೀನಿ ಅಂತ ಕಾವೇರಿ ಭಾರೀ ಶೋಶ್‌ನಲ್ಲಿದ್ದಳು. ಈಗ ವೈಷ್ಣವ್ ಮಾತಿನಿಂದ ಈ ಶೋಶ್ ನೆಲಕಚ್ಚಿದೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಲಕ್ಷ್ಮೀಯನ್ನು ಮದುವೆ ಆಗ್ತೀನಿ ಅಂತ ನಿತಿನ್ ಹುಚ್ಚಾಟ ಮೆರೆದಿದ್ದ. ಈಗ ಮತ್ತೆ ಅವನು ಅದೇ ಪ್ರಯತ್ನ ಮಾಡಿದ್ದಾನೆ.
ನಿತಿನ್ ಮುಂದೆ ವೈಷ್ಣವ್ ಆರ್ಭಟ!
ಲಕ್ಷ್ಮೀ ಇದ್ದ ಮನೆಗೆ ನಿತಿನ್ ಬಂದಿದ್ದಾನೆ. ಅವಳು ಎಚ್ಚರದಲ್ಲಿದ್ದಾಗಲೇ ತಾಳಿ ಕಟ್ತೀನಿ, ವೈಷ್ಣವ್ ಕಟ್ಟಿದ್ದ ತಾಳಿ ಬಿಸಾಕ್ತೀನಿ ಅಂತ ಕೂಗಾಡಿದ್ದಾನೆ. ನಿತಿನ್‌ನಿಂದ ಹೇಗೆ ಬಚಾವ್ ಆಗೋದು ಅಂತ ಅವಳು ಒದ್ದಾಡುತ್ತಿದ್ದಳು. ಆಗ ವೈಷ್ಣವ್ ಆಗಮನ ಆಗಿದೆ. ನಿತಿನ್‌ಗೆ ಸರಿಯಾಗಿ ನಾಲ್ಕು ಪೆಟ್ಟು ಕೊಟ್ಟು, “ಬೇರೆಯವರ ಹೆಂಡ್ತಿ ಮೇಲೆ ಕಣ್ಣು ಹಾಕ್ತೀಯಾ, ನಿನಗೆ ಮಾನ-ಮರ್ಯಾದೆ ಇಲ್ವಾ? ಪದೇ ಪದೇ ಈ ತಪ್ಪು ಯಾಕೆ ಮಾಡ್ತೀಯಾ?” ಅಂತ ಬೈದಿದ್ದಾನೆ. ಅಷ್ಟೇ ಅಲ್ಲದೆ “ಲಕ್ಷ್ಮೀ ನನ್ನ ಹೆಂಡ್ತಿ, ನಾವಿಬ್ಬರು ಚೆನ್ನಾಗಿದ್ದೇವೆ, ನಮ್ಮ ಮಧ್ಯೆ ಯಾವ ಅಸಮಾಧಾನ ಕೂಡ ಇಲ್ಲ” ಎಂದು ಅವನು ಹೇಳಿದ್ದಾನೆ. ಗಂಡ ಹೀಗೆಲ್ಲ ಮಾತಾಡೋದು ಕೇಳಿ ಲಕ್ಷ್ಮೀಗೆ ಫುಲ್ ಖುಷಿಯಾಗಿದೆ.
ಹಾರರ್ ಮೂವಿ ಲವರ್ಸ್‌ಗೆ ಇದು ಬೆಸ್ಟ್ ಸಿನಿಮಾ; ಇದನ್ನ ನೋಡೋಕೆ ಸ್ವಲ್ಪ ಧೈರ್ಯವೂ ಬೇಕು!
ವೈಷ್ಣವ್ ಹೇಳಿದ್ದೆಲ್ಲ ಸತ್ಯ!
ಮಗನಿಗೆ ಬೇರೆ ಮದುವೆ ಮಾಡಬೇಕು ಅಂತ ಕಾವೇರಿ ಪ್ಲ್ಯಾನದ ಹಾಕುತ್ತಿದ್ದಳು. ಆದರೆ ಮಗ ಈ ಲಕ್ಷ್ಮೀ ಪರ ಮಾತಾಡ್ತಿದ್ದಾನೆ, ಎಲ್ಲರ ಮುಂದೆ ಹೀಗೆ ಹೇಳಿದ ಅಂತ ಅವಳು ಸಿಟ್ಟಾಗಿದ್ದಾಳೆ. ಸುಮ್ಮನೆ ವೈಷ್ಣವ್ ಹೀಗೆ ಹೇಳಿದ್ನೋ, ಮನಸಾರೆ ಹೇಳಿದ್ನೋ ಮುಂದೆ ಗೊತ್ತಾಗುವುದು. ಲಕ್ಷ್ಮೀ ಮೇಲಿನ ಸಮಾಧಾನದಿಂದ ತಾಯಿ ಹೇಳಿದಂತೆ ವೈಷ್ಣವ್ ಮತ್ತೊಂದು ಮದುವೆ ಆಗೋಕೆ ರೆಡಿ ಇದ್ದಾನೆ. ವೈಷ್ಣವ್ ಇನ್ನೊಂದು ಮದುವೆ ಆಗೋದನ್ನು ಹೇಗೆ ತಡೆಯೋದು ಅಂತ ಅವನ ಅತ್ತೆ ಸುಪ್ರೀತಾ, ಪತ್ನಿ ಲಕ್ಷ್ಮೀ ಚಿಂತೆ ಮಾಡ್ತಿದ್ದಾರೆ.
ವೈಷ್ಣವ್‌ಗೆ ಸ್ವಲ್ಪವೂ ಸ್ವಂತ ಬುದ್ಧಿ ಇಲ್ಲ, ಯಾವಾಗಲೂ ತಾಯಿ ಮಾತು ಕೇಳ್ತಾನೆ ಅಂತ ವೀಕ್ಷಕರು ಬೇಸರ ಮಾಡಿಕೊಂಡಿದ್ದರು. ಈಗ ವೈಷ್ಣವ್ ಬದಲಾಗಿದ್ದಾನೆ, ಹೆಂಡ್ತಿ ಪರ ನಿಂತಿದ್ದಾನೆ ಅಂತ ಖುಷಿಯಾಗಿದ್ದಾರೆ. ನನ್ನನ್ನು ಜೈಲಿಗೆ ಕಳಿಸಿದ, ಅವಮಾನ ಮಾಡಿದ ಲಕ್ಷ್ಮೀ ನನ್ನ ಬಳಿ ಬಂದು ಕಾಲು ಹಿಡಿದುಕೊಂಡು ಕ್ಷಮೆ ಕೇಳಬೇಕು, ಆಗಲೇ ಅವಳನ್ನು ಕ್ಷಮಿಸಿ ಮನೆಯೊಳಗಡೆ ಸೇರಿಸಿಕೊಳ್ತೀನಿ ಅಂತ ಕಾವೇರಿ ಹೇಳಿದ್ದಾಳೆ. ತಪ್ಪೇ ಮಾಡದ ಲಕ್ಷ್ಮೀ ಕ್ಷಮೆಯಂತೂ ಕೇಳೋದಿಲ್ಲ.
ಶಿವಣ್ಣನ ಮನೆ ಹರಾಜಿನಿಂದ ಉಳಿಸಿದ ಪಾರು; ಈ ವಾರದ ಕಿಚ್ಚನ ಚಪ್ಪಾಳೆ ಶಾರದಮ್ಮಗೆ ಎಂದ ಫ್ಯಾನ್ಸ್!
ಮುಂದೆ ಏನಾಗುವುದು?
ಸತ್ಯ ಯಾವತ್ತಿದ್ದರೂ ಬೂದಿ ಮುಚ್ಚಿದ ಕೆಂಡವೇ. ಕಾವೇರಿ ಬಣ್ಣ ಇಂದಲ್ಲ, ನಾಳೆ ಬಯಲಾಗುತ್ತದೆ. ವೈಷ್ಣವ್‌ಗೆ ಇಂದು ಅಥವಾ ನಾಳೆ ತಾಯಿ ಸತ್ಯ ಏನೆಂದು ಗೊತ್ತಾಗುತ್ತದೆ.
ಪಾತ್ರಧಾರಿಗಳು
ಲಕ್ಷ್ಮೀ- ನಟಿ ಭೂಮಿಕಾ ರಮೇಶ್
ಕಾವೇರಿ-ನಟಿ ಸುಷ್ಮಾ ನಾಣಯ್ಯ
ಸುಪ್ರೀತಾ-ನಟಿ ರಜನಿ ಪ್ರವೀನ್
ಕೀರ್ತಿ- ನಟಿ ತನ್ವಿ ರಾವ್
ವೈಷ್ಣವ್- ನಟ ಶಮಂತ್ ಬ್ರೊ ಗೌಡ
