Asianet Suvarna News Asianet Suvarna News

ಸೊಸೆಯನ್ನೂ ಬಿಟ್ಟು ಕೊಡ್ದೇ ಇತ್ತ ಸ್ವಯಂ ಹೊಗಳಿಕೊಳ್ತಿರೋ ಭಾಗ್ಯಲಕ್ಷ್ಮಿ ಮುದ್ದು ಅತ್ತೆ ಕುಸುಮಾಗೆ ಫ್ಯಾನ್ಸ್ ಫಿದಾ!

ಸೊಸೆ ಭಾಗ್ಯಳನ್ನು ಹಾಡಿ ಹೊಗಳ್ತಿರೋ ಕುಸುಮಾ ಅತ್ತ ತನ್ನನ್ನೂ ತಾನು ಹೊಗಳಿಸಿಕೊಂಡಿರೋದನ್ನು ಕಂಡು ಫ್ಯಾನ್ಸ್​ ಥಹರೇವಾರಿ ಕಮೆಂಟ್ಸ್​ ಮಾಡುತ್ತಿದ್ದಾರೆ. 
 

Kusuma  praised her daughter in law Bhagya and aslo self boosting in Bhagyalaxmi suc
Author
First Published Dec 12, 2023, 3:01 PM IST

 ಅತ್ತೆ- ಸೊಸೆ ಸಂಬಂಧ ಎಂದರೆ ಹಾವು-ಮುಂಗುಸಿ ಸಂಬಂಧ ಎಂದೇ ಪ್ರಚಲಿತಾಗಿಬಿಟ್ಟಿದೆ. ಇದಕ್ಕೆ ಪುಷ್ಟಿ ನೀಡಲು ಈಗಿನ ಬಹುತೇಕ ಧಾರಾವಾಹಿಗಳು ಹಿಂದೆ ಬಿದ್ದಿಲ್ಲ. ಎಲ್ಲಾ ಭಾಷೆಗಳ ಧಾರಾವಾಹಿಗಳಲ್ಲಿಯೂ ಅತ್ತೆ- ಸೊಸೆಯಂದಿರ ಸಂಬಂಧ ಕೆಟ್ಟದ್ದಾಗಿಯೇ ತೋರಿಸಲಾಗುತ್ತಿದೆ.  ಬಹುತೇಕ ಮನೆಗಳಲ್ಲಿಯೂ ಇದೇ ರೀತಿ ಇದೆ ಎನ್ನುವುದೂ ಸುಳ್ಳಲ್ಲ. ಈ ನಡುವೆಯೇ, ಅತ್ತೆ-ಸೊಸೆಯ ಸೂಪರ್​ ಕಾಂಬಿನೇಷನ್​ ಇರುವ ಧಾರಾವಾಹಿಗಳಲ್ಲಿ ಒಂದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​. 

ಭಾಗ್ಯಳಿಗೆ ಅವಮಾನ ಮಾಡುವ ಉದ್ದೇಶದಿಂದ ಅವಳ ಮಗಳೇ ಶಾಲೆಯಲ್ಲಿ ಡ್ಯಾನ್ಸ್​ಗೆ ಅಮ್ಮನ ಹೆಸರು ಬರೆಸಿದ್ದಳು. ತನ್ನ ಶಾಲೆಯಲ್ಲಿ ಓದುತ್ತಿರುವ ಅಮ್ಮನನ್ನು ಇನ್​ಸಲ್ಟ್​ ಮಾಡುವುದು ಆಕೆಯ ಉದ್ದೇಶ. ಭಾಗ್ಯಾಳಿಗೆ ಡ್ಯಾನ್ಸ್ ಬರಲ್ಲ, ಅವಳೊಬ್ಬ ಪೆದ್ದು ಅನ್ನೋದು ಭಾಗ್ಯ ಗಂಡ ತಾಂಡವ್, ಮಗಳು ತನ್ವಿ ಅಭಿಪ್ರಾಯ. ಅವಳಿಗೆ ಅವಮಾನಬೇಕು, ಸ್ಕೂಲ್‌ ಬಿಟ್ಟು ಹೋಗಬೇಕು ಅಂತ ತನ್ವಿ, ತಾಂಡವ್‌, ಶ್ರೇಷ್ಠಾ, ಕನ್ನಿಕಾ ಎಲ್ಲರೂ ಕಾಯುತ್ತಿದ್ದಾರೆ. ಇತ್ತ ಡ್ಯಾನ್ಸ್‌ ಸ್ಪರ್ಧೆ ಆರಂಭವಾಗಿದೆ. ವೇದಿಕೆ ಮೇಲೆ ಒಬ್ಬೊಬ್ಬರೇ ಸ್ಪರ್ಧಿಗಳು ಬಂದು ಡ್ಯಾನ್ಸ್‌ ಮಾಡುತ್ತಿದ್ದಾರೆ. ವೇದಿಕೆ ಮುಂಭಾಗ ಕುಳಿತಿರುವ ಕುಸುಮಾ ಹಾಗೂ ಪೂಜಾಗೆ ಭಾಗ್ಯ ಕಾಣುತ್ತಿಲ್ಲ ಎಂಬ ಗಾಬರಿ ಆಗಿದ್ದರೆ,  ಉಳಿದವರೆಗೆ ಖುಷಿಯೋ ಖುಷಿ ಆಗಿತ್ತು. 

ಪುಟ್ಟಕ್ಕ ನಿಜಕ್ಕೂ ಸತ್ತೋದ್ಲಾ? ಮನೆಯ ಮುಂದಿರೋ ಶವ ಯಾರದ್ದು? 'ಬೈಕಾಟ್'​ ಬೆನ್ನಲ್ಲೇ ಸಿಗತ್ತಾ ಟ್ವಿಸ್ಟ್​?

ಆದರೆ ಭಾಗ್ಯ ಪ್ರತ್ಯಕ್ಷಳಾಗಿ ಅದ್ಭುತವಾಗಿ ಭರತನಾಟ್ಯ ಮಾಡಿದ್ದಾಳೆ. ಅಷ್ಟಕ್ಕೂ ಭಾಗ್ಯ ಪಾತ್ರಧಾರಿಯಾಗಿರುವ ಸುಷ್ಮಾ ಅವರು ಭರತನಾಟ್ಯ ಕಲಾವಿದೆ. ಆಕೆಯ ಭರತನಾಟ್ಯ ಪ್ರದರ್ಶನಕ್ಕೆ ಎಲ್ಲರೂ ಮನಸೋತಿದ್ದಾರೆ. ಇದೇ ಕಾರಣಕ್ಕೆ ಆಕೆಗೇ ಫಸ್ಟ್​ ಪ್ರೈಸ್​ ಬಂದಿದೆ. ತಾಂಡವ್​, ಶ್ರೇಷ್ಠಾ ಮಗಳು ತನ್ವಿ ಮತ್ತು ಸ್ಕೂಲ್​ ಟೀಚರ್​ ಬಿಟ್ಟು ಉಳಿದವರು ಕುಣಿದು ಕುಪ್ಪಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಸುಮಾ ಸೊಸೆಯನ್ನು ಹಾಡಿ ಹೊಗಳಿದ್ದಾರೆ. ಕೊನೆಗೂ ತನ್ನ ಮರ್ಯಾದೆ ಉಳಿಸಿದಿ ಎಂದು ಹೇಳಿದ್ದಾಳೆ. ಥೇಟ್​ ನೀನು ನನ್ನಂತೆಯೇ ಬುದ್ಧಿವಂತೆ ಎಂದು ಹಾಡಿ ಕೊಂಡಾಡಿದ್ದಾಳೆ. ನಿನ್ನ ತಲೆ ಅಂದ್ರೆ ತಲೆ ನೋಡು ಎಂದು ಸೊಸೆ ಭಾಗ್ಯಳನ್ನು ಹೊಗಳಿದ ಅತ್ತೆ ಕುಸುಮಾ ಅದಕ್ಕೇ ಹೇಳೋದು ನೀನು ನನ್ನ ಥರ ಎಂದು ಹೇಳಿದ್ದಾಳೆ. 

ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ಫ್ಯಾನ್ಸ್​ ಮುದ್ದು ಅತ್ತೆ ಎಂದಿದ್ದಾರೆ. ಆಹಾ! ಸೊಸೆಯನ್ನು ಹೊಗಳಿ, ತನ್ನನ್ನೇ ತಾನು ಹೊಗಳಿಕೊಳ್ಳೋ ಅತ್ತೆ ಪಾರ್ಟ್​ ಸೂಪರ್​ ಎಂದಿದ್ದಾರೆ. ಇಂಥ ಅತ್ತೆ-ಸೊಸೆ ಇದ್ದರೆ ಎಲ್ಲಾ ಮನೆ ಸೂಪರ್​ ಎನ್ನುತ್ತಿದ್ದಾರೆ. 

ಅಮ್ಮಾ-ಅಪ್ಪಾ ತಪ್ಪು​ ಮಾಡ್ಬಿಟ್ಟೆ, ತುಂಬಾ ನೋವಾಗ್ತಿದೆ ಎಂದು ಕಣ್ಣೀರು ಹಾಕಿದ ನಮ್ರತಾ: ಕಾಲೆಳೀತಿರೋ ನೆಟ್ಟಿಗರು!
 

Follow Us:
Download App:
  • android
  • ios