ಚಿತ್ರ ವಿಚಿತ್ರ ಘಟನೆಗಳು ಎಲ್ಲಿ ಯಾವಾಗ ನಡೆದರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತದೆ. ಇದೀಗ ಸೀರಿಯಲ್‌ನಲ್ಲಿ ನಡೆದ ಚಿಕ್ಕ ಎಡವಟ್ಟು ಏನು ನೋಡಿ

ಬಾಂಗ್ಲಾ ಸೀರಿಯಲ್ ಕೃಷ್ಣಕೋಲಿ ಸದ್ಯ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಧಾರವಾಹಿಯ ಡೈರೆಕ್ಟರನ್ನು ಬೇಕಾಬಿಟ್ಟಿ ಕಾಮಿಡಿ ಮಾಡ್ತಿದ್ದಾರೆ ಜನ. ಝೀ ಬಾಂಗ್ಲಾದಲ್ಲಿ ಬರುವ ಧಾರವಾಹಿಯಲ್ಲಿ ವೈದ್ಯರು ರೋಗಿಯನ್ನು ಡಿಫಿಬ್ರಿಲೇಟರ್ ಮೂಲಕ ಬದುಕಲು ಪ್ರಯತ್ನಿದುವ ದೃಶ್ಯ ತೋರಿಸಿದ್ದಾರೆ.

ಮದ್ಯ ಮತ್ತು ಪತ್ನಿ ಪಿಗ್ಗಿ ಫೋಟೋಗೆ ನಿಕ್ ಕೊಟ್ಟ ಕ್ಯಾಪ್ಶನ್ ಸೂಪರ್..!

ಆದರೆ ಈ ಸೀರಿಯಸ್ ಸೀನ್‌ನಲ್ಲಿ ಫನ್ನಿಯಾಗಿದ್ದು ಮಾತ್ರ ಡಾಕ್ಟರ್. ಡಾಕ್ಟರ್ ಪಾತ್ರ ಮಾಡಿದ ನಟ ಮಾತ್ರ ಬಾತ್‌ರೂಂ ಸ್ಕ್ರಬರನ್ನು ಡಿಫಿಬ್ರಿಲೇಟರ್‌ನಂತೆ ಬಳಸಿಕೊಂಡಿದ್ದಾನೆ. ಇದನ್ನು ಗಮನಿಸಿದ ನೆಟ್ಟಗರು ಮಾತ್ರ ನಕ್ಕು ಸುಸ್ತಾಗಿದ್ದಾರೆ.

ಮಹೇಶ್ ಭಟ್- ನಟಿ ರಿಯಾ ಫೋಟೋಸ್ ವೈರಲ್
ನಾವು ಬಾತ್‌ರೂಂ ಅಥವಾ ಅಡುಗೆ ಮನೆಯನ್ನು ಸ್ವಚ್ಛ ಮಾಡುವ ಹಸಿರು ಬಣ್ಣದ ಸ್ಕ್ರಬರನ್ನು ಬಳಸಿ ವೈದ್ಯ ರೋಗಿಯ ಜೀವ ಉಳಿಸಲು ಭಾರೀ ಪ್ರಯತ್ನ ನಡೆಸಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

ಆರ್‌ ಭಾದುರಿ ಎಂಬವರು ಸೀರಿಯಲ್‌ ಎಪಿಸೋಡ್‌ನ ದೃಶ್ಯವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಎಪಿಸೋಡ್‌ನ ಚಿತ್ರಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.