ಕಾರ್ಯಕ್ರಮದ ಪ್ರೋಮೋವನ್ನು ವಾಹಿನಿಯ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ನಿರೂಪಕ ಚಂದನ್ 'ನೀವು ಮೊದಲು ಹಿತಾರನ್ನು ನೋಡಿದ್ದು ಎಲ್ಲಿ' ಎಂದು ಪ್ರಶ್ನಿಸಿದ್ದಾಗ ಕಿರಣ್ 'ಇದು ಸಖತ್ ಇಂಟ್ರೆಸ್ಟಿಂಗ್ ಸ್ಟೋರಿ'ಎಂದು ಹೇಳಿ ಆರಂಭಿಸುತ್ತಾರೆ...

'14-15 ಸಮಯಲ್ಲಿ ನಾನು ಬೆಂಗಳೂರಿನಲ್ಲಿ ನನ್ನ ಸ್ನೇಹಿತನ ಮನೆಗೆ ಬರುತ್ತಿದ್ದೆ. ಅವನಿದ್ದ ಮನೆಯ ಬಾತ್‌ರೂಮ್‌ನಲ್ಲಿ ವಿಂಡೋ ಒಡೆದು ಹೋಗಿತ್ತು. ಹೊರಗಿನಿಂದ ಕಾಣಿಸಬಾರದು ಎನ್ನುವ ಕಾರಣಕ್ಕೆ ಪೇಪರ್ ಹಾಕಿದ್ದ. ನಾನು ಒಂದು ದಿನ ಬಾತ್‌ರೂಮ್‌ಗೆ ಹೋದಾಗ ಅಲ್ಲಿ ಪೇಪರ್‌ನಲ್ಲಿ ಯಾವುದೋ ಹುಡುಗಿ ನಿಂತಿದ್ದಾರೆ ಕ್ಯಾಮೆರಾಗೆ ಅಕ್ರ್ಯಾಕ್ಟಿವ್ ಆಗಿ ಫೋಸ್ ಕೊಡ್ತಾ. ನಾನು ಹೋಗಿ ಕೇಳಿ ಯಾರೋ ಅದು ಹುಡುಗಿ ಅಂತ ಅಗ ಅವನು ಹೇಳಿದ ಹಿತಾ ಚಂದ್ರಶೇಖರ್ ಕಣೋ ಸಿಹಿಕಹಿ ಚಂದ್ರು ಮಗಳು. ತಿಂಗಳಾನುಗಟ್ಟಲೆ ಅಲ್ಲಿ ಆ ಪೇಪರ್‌ ಇತ್ತು, ನಾವು ಹೋದಾಗೆಲ್ಲಾ ಪೇಪರ್ ನೋಡ್ಕೊಂಡು ಹಾಯ್ ಹಿತಾ ಅಂತ ಮಾತನಾಡುತ್ತಿದ್ವಿ'ಎಂದು ಹೇಳುತ್ತಾ ಕಿರಣ್ ಮೊದಲ ಬಾರಿ ಹಿತಾರನ್ನು ನೋಡಿ ಕ್ಷಣಗಳ ಬಗ್ಗೆ ಮೆಲುಕು ಹಾಕಿದ್ದಾರೆ.

ಹನಿಮೂನ್‌ನಲ್ಲಿ ಗಂಡನಿಗೆ ಒದ್ದ ಸಿಹಿ-ಕಹಿ ಚಂದ್ರು ಪುತ್ರಿ? 

ಡಿಸೆಂಬರ್ 1,2019ರಲ್ಲಿ ಹಿತಾ ಮತ್ತು ಕಿರಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮುದ್ದು ಸಾಕು ನಾಯಿ ಗೋಲಿ ಜೊತೆ ಸಮಯ ಕಳೆಯುತ್ತಿದ್ದರು. ಅನಾರೋಗ್ಯದ ಕಾರಣ ಗೋಲಿ ಕೊನೆಯುಸಿರೆಳೆಯಿತು. ಈ ಘಟನೆ ಬಗ್ಗೆ ಹಿತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಾಗ ಅಭಿಮಾನಿಗಳು ಕೂಡ ಕಂಬನಿ ಮಿಡಿದರು.