ಬಿಗ್ ಬಾಸ್ ಫೈನಲಿಸ್ಟ್ ಹನುಮಂತನ ಮಾತಿಗೆ ಸಹ-ಸ್ಪರ್ಧಿಗಳು ಮಾತ್ರವಲ್ಲ, ಕಿಚ್ಚ ಸುದೀಪನೇ ಬೆಚ್ಚಿಬಿದ್ರು!

ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಹನುಮಂತು, 104 ದಿನಗಳನ್ನು ಕಳೆದ ಎಲ್ಲ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು ನೇರವಾಗಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಇತರೆ ಸ್ಪರ್ಧಿಗಳು ಹನುಮಂತನನ್ನು ಗೆಲುವಿಗೆ ಅಡ್ಡಿಯೆಂದು ಆರೋಪಿಸಿದ್ದಾರೆ. ಹನುಮಂತನ ತಿರುಗೇಟಿಗೆ ಸ್ಪರ್ಧಿಗಳಷ್ಟೇ ಅಲ್ಲದೆ ಸುದೀಪ್ ಕೂಡ ಶಾಕ್ ಆಗಿದ್ದಾರೆ.

Kiccha Sudeep shocked and laugh by Bigg Boss finalist singer Hanumantha statement sat

ಬೆಂಗಳೂರು (ಜ.12): ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್‌ ಎಂಟ್ರಿ ಮೂಲಕ ಬಂದ ಗಾಯಕ ಹಾಗೂ ಹಳ್ಳಿ ಹೈದ ಹನುಮಂತು ಅವರು ಬಿಗ್ ಬಾಸ್ ಮನೆಯೊಳಗೆ 104 ದಿನಗಳನ್ನು ಕಳೆದ ಎಲ್ಲ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು ನೇರವಾಗಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಇದೀಗ ಎಲ್ಲರೂ ಹನುಮಂತು ನಮ್ಮ ಗೆಲುವವಿಗೆ ಅಡ್ಡಿಯಾಗುತ್ತಾನೆ ಎಂದು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಹಳ್ಳಿಹೈದ ಹನುಮಂತು ಹೇಳಿಕೆಗೆ ಬಿಗ್ ಬಾಸ್ ಸ್ಪರ್ಧಿಗಳಷ್ಟೇ ಅಲ್ಲ ಸ್ವತಃ ಕಿಚ್ಚ ಸುದೀಪ್ ಅವರೇ ಶಾಕ್ ಆಗಿ ನಗಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಇದೀಗ 105 ದಿನಗಳು ಪೂರೈಸಿವೆ. ಇನ್ನೊಂದು ವಾರ ಕಳೆದರೆ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರ ಆರಂಭವಾಗಲಿದೆ. ಆದರೆ, ಇದೀಗ 9 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು, ಈ ಪೈಕಿ 7 ಮಂದಿ ಆರಂಭದಿಂದಲೇ ಸ್ಪರ್ಧೆಯಲ್ಲಿದ್ದಾರೆ. ಆದರೆ, ಸುಮಾರು ಹನುಮಂತು 80 ದಿನಗಳನ್ನು ಕಳೆದರೆ, 50 ದಿನದ ನಂತರ ಬಂದ ರಜತ್ ಮಾತ್ರ 55 ದಿನಗಳಲ್ಲಿ ಪೂರೈಸಿದ್ದಾರೆ. ಆದರೆ, ಈವರೆಗೆ ಹಳ್ಳಿ ಹೈದ ಹನುಮಂತನ ಆಟ ಶುರುವಾಗಿರುವುದೇ ಯಾರಿಗೂ ಗೊತ್ತಾಗಿಲ್ಲ. ಯಾರಿಗೂ ತಿಳಿಯದಂತೆ ಏನೇ ಕಷ್ಟ, ನಷ್ಟಗಳು ಎದುರಾದರೂ ಅದನ್ನು ಸಹಿಸಿಕೊಂಡು ಎಲ್ಲರಿಗಿಂತ ಮೊದಲು ಫಿನಾಲೆ ಟಿಕೆಟ್ ಪಡೆದು ಫೈನಲ್ ವಾರದ ಕ್ಯಾಪ್ಟನ್ ಕೂಡ ಆಗಿದ್ದಾರೆ.

ಇದೀಗ 15 ನೇ ವಾರದ ಕಿಚ್ಚನ ಪಂಚಾಯಿತಿ ನಡೆಯುತ್ತಿದ್ದು, ಈ ವೇಳೆ ನಿಮ್ಮ ಗೆಲುವಿಗೆ ಯಾರು ಅಡ್ಡಿಯಾಗಿದ್ದಾರೆ ಅವರ ಹೆಸರೇಳಿ ಎಂದು ಸುದೀಪ್ ಅವರು ಮನೆ ಮಂದಿಗೆ ಟಾಸ್ಕ್ ಕೊಟ್ಟಿದ್ದಾರೆ. ಆಗ ಇತರೆ ಸ್ಪರ್ಧಿಗಳು ಹಳ್ಳಿ ಹೈದ ಹನುಮಂತನೇ ನಮಗೆ ಅಡ್ಡಿಯಾಗಿದ್ದಾನೆ ಎಂದು ಮುಗಿಬಿದ್ದಿದ್ದಾರೆ. ಹನುಮಂತನ ಮೇಲೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತಿನ ಪಂಚ್ ಕೊಡುತ್ತಾಬ ಹಳ್ಳಿಹೈದನ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಆಗ ಇದೆಲ್ಲವನ್ನು ಸೂಕ್ಷ್ಮವಾಗಿ ಅರಿತುಕೊಂಡ ಹನುಮಂತು ಎಲ್ಲರೂ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ಕೊಟ್ಟಿದ್ದಾನೆ.

ಇದನ್ನೂ ಓದಿ: ಫಿನಾಲೆ ವಾರಕ್ಕೆ ಟಿಕೆಟ್ ಪಡೆದ 1st ವೈಲ್ಡ್‌ ಕಾರ್ಡ್ ಸ್ಪರ್ಧಿ ಹನುಮಂತು; ಹಳ್ಳಿ ಹೈದಾನೇ ವಿನ್ನರ್ ಅಂತಿದ್ದಾರೆ ವೀಕ್ಷಕರು

ಗೌತಮಿ ಜಾಧವ್: ನಾವು ಗೆಲುವಿನ ಕಡೆಗೆ ಹೋಗಬೇಕೆಂದರೆ ನಮಗೆ ಮುಖ್ಯವಾಗಿ ಹನುಮಂತು ಅಡ್ಡವಾಗಿ ಕಾಣಿಸುತ್ತಿದ್ದಾರೆ. ಅವರನ್ನು ಹೊರಗಿಡಬೇಕು ಎಂದು ಹೇಳಿದ್ದಾರೆ.

ಚೈತ್ರಾ ಕುಂದಾಪುರ: ಬಿಗ್ ಬಾಸ್ ಮನೆಗೆ ಸ್ವರ್ಗ, ನರಕ ಥೀಮ್‌ನಲ್ಲಿ ಕಾಣಿಸಿಕೊಳ್ಳದೇ ಹನುಮಂತು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ದಾರೆ. ಆದರೂ, ತಾನು ಎಲ್ಲರ ಮುಂದೆ ಆಗಾಗ ಸ್ವಿಚ್ಡ್ ಆಫ್ ಆಗ್ತೀನಿ ಎಂದು ಹೇಳಿಕೊಂಡು ಸಹ ಸ್ಪರ್ಧಿಗಳ ದಿಕ್ಕು ತಪ್ಪಿಸುತ್ತಾ ಇಡೀ ಮನೆಯನ್ನು ಸ್ವಿಚ್ಡ್ ಆಫ್ ಮಾಡುತ್ತಿದ್ದಾರೆ.

ತ್ರಿವಿಕ್ರಮ್ ; ಬಿಗ್ ಬಾಸ್ ಮನೆಯಲ್ಲಿ ಹನುಮಂತ ಎಲ್ಲರಿಗೂ ಸ್ಟ್ರಾಂಗ್ ಸ್ಪರ್ಧಿಗಳಿಗೆ ಹಲ್ವಾ ತಿನ್ನಿಸುತ್ತಿದ್ದಾನೆ. 

ಇದನ್ನೂ ಓದಿ: ಫಿನಾಲೆಗೆ ಹನುಮಂತ ಎಂಟ್ರಿ, ಕಪ್ ಇವನದ್ದೇ ಖಚಿತ! ಹನುಮನ ಪರ ಬಿಗ್ ಬಾಸ್‌ನಲ್ಲಿ ದಾಖಲೆ ವೋಟಿಂಗ್!

ಆದರೆ, ಇವರೆಲ್ಲರಿಗೂ ತಿರುಗೇಟು ನೀಡುವ ನಿಟ್ಟಿನಲ್ಲಿ ಹನುಮಂತ ಒಂದು ಹೇಳಿಕೆ ನೀಡುತ್ತಾರೆ. 'ನಾನು ಆಟ ಶುರು ಮಾಡಿ ಬಹಳ ದಿನಗಳಾಗಿದೆ. ಇವರೆಲ್ಲರಿಗೂ ಇವತ್ತು ಗೊತ್ತಾಗಿದೆ' ಎಂದು ಹೇಳಿದ್ದಾರೆ. ಇದಕ್ಕೆ ಇಡೀ ಬಿಗ್ ಬಾಸ್ ಸ್ಪರ್ಧಿಗಳೆಲ್ಲರೂ ಶಾಕ್ ಆಗಿದ್ದಾರೆ. ಇದನ್ನು ಕೇಳಿದ ಕಿಚ್ಚ ಸುದೀಪ್ ಕೂಡ ಒಂದು ಕ್ಷಣ ದಿಗ್ಭ್ರಾಂತರಾಗಿ, ನಂತರ ಎಲ್ಲ ಸ್ಪರ್ಧಿಗಳನ್ನು ನೋಡಿ ಜೋರಾಗಿ ನಗಾಡಿದ್ದಾರೆ. ಈ ಪ್ರೋಮೋ ಭಾರೀ ವೈರಲ್ ಆಗುತ್ತಿದೆ.

Latest Videos
Follow Us:
Download App:
  • android
  • ios