BBK11: ನವರಾತ್ರಿಗೆ ಡ್ರೆಸ್ ಬಣ್ಣ ಬದಲಿಸಿದ ಕಿಚ್ಚ ಸುದೀಪ; ಆದ್ರೆ ಮೂಡ್ ಮಾತ್ರ ಬದಲಾಗಲಿಲ್ಲ!
ಬಿಗ್ ಬಾಸ್ ಸೀಸನ್ 11ರ ಎರಡನೇ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಮೊದಲ ವಾರದ 2ನೇ ದಿನವೂ ಬರಿಗಾಲಿನಲ್ಲಿ ಕಾಣಿಸಿಕೊಂಡರು. ಶನಿವಾರ ಬೂದು ಬಣ್ಣದ ಉಡುಪು ಧರಿಸಿದ್ದ ಅವರು, ಭಾನುವಾರ ಕೇಸರಿ ಬಣ್ಣದ ಉಡುಪು ಧರಿಸಿದ್ದರು. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಅವರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು (ಅ.06): ಬಿಗ್ ಬಾಸ್ ಸೀಸನ್ 11ರ ಮೊದಲ ವಾರದ ಪಂಚಾಯಿತಿ ನಡೆಸಲು ಬಂದ ಕಿಚ್ಚ ಸುದೀಪ್ ಅವರು, ಶನಿವಾರ ಧರಿಸಿದ ಉಡುಪಿನ ಮಾದರಿಯ ಬಟ್ಟೆಯನ್ನೂ ಧರಿಸಿದ್ದು, ಬಣ್ಣ ಮಾತ್ರ ಬದಲಿಸಿದ್ದಾರೆ. ಜೊತೆಗೆ, ನಿನ್ನೆಯಂತೆಯೇ ಬರಿಗಾಲಿನಲ್ಲಿಯೇ ನಿಂತುಕೊಂಡು ಪಂಚಾಯಿತಿ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಕನ್ನಡ ಸೀಸನ್ 11ರ ರಿಯಾಲಿಟಿ ಶೋ ಒಂದು ವಾರ ಮುಕ್ತಾಯವಾಗಿದ್ದು, ಕಿಚ್ಚ ಸುದೀಪನ ಪಂಚಾಯಿತಿ ಆರಂಭವಾಗಿದೆ. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಶನಿವಾರ ಬೂದು ಬಣ್ಣ (Gray Color) ಬಟ್ಟೆ ಧರಿಸಿ ಬರಿಗಾಲಿನಲ್ಲಿ ಪಂಚಾಯಿತಿ ಮಾಡಲು ಬಂದಿದ್ದರು. ಆದರೆ, ಇಂದು ಭಾನುವಾರ ಪಂಚಾಯಿತಿ ನಡೆಸಿ ಒಬ್ಬರನ್ನು ಮನೆಯಿಂದ ಹೊರಗೆ ಕಳಿಸಲು ಬಂದಿರುವ ಕಿಚ್ಚ ಸುದೀಪ್ ಅಂಗಿಯ ಬಣ್ಣವನ್ನು ಬದಲಿಸಿ ಕೇಸರಿ ಬಣ್ಣದ ಉಡುಪು ಧರಿಸಿದ್ದಾರೆ. ಜೊತೆಗೆ ಇಂದು ಕೂಡ ಬರಿಗಾಲಿನಲ್ಲಿ ನಿಂತುಕೊಂಡು ಪಂಚಾಯಿತಿ ಮಾಡುತ್ತಿದ್ದಾರೆ. ಆದರೆ, ನಿನ್ನೆ ಬಿಗ್ ಬಾಸ್ ಮನೆಯೊಳಗಿನ 17 ಕಂಟೆಸ್ಟೆಂಟ್‌ಗಳಿಗೆ ಬಿಸಿ ಮುಟ್ಟಿಸಿದ್ದಂತೆಯೇ ಖಡಕ್ ಮೂಡ್‌ನಲ್ಲಿಯೇ ವೇದಿಕೆಗೆ ಆಗಮಿಸಿದ್ದಾರೆ.
ಗೌರವಕ್ಕೆ ಪಾತ್ರರಾಗಿದ್ದ ಕಿಚ್ಚ ಸುದೀಪ:
ಬಿಗ್‌ಬಾಸ್ ಕನ್ನಡ ಸೀಸನ್ ಆರಂಭವಾಗಿ 1 ವಾರವಾಗಿದ್ದು, ಈ ಸೀಸನ್ ನ ಮೊದಲ ಪಂಚಾಯಿತಿಗೆ ಕಿಚ್ಚ ಸುದೀಪ್ ಬರಿಗಾಲಲ್ಲಿ ಬಂದು ನಿಂತುಕೊಂಡೇ ನಿರೂಪಣೆ ಮಾಡಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನವರಾತ್ರಿ ಹಿನ್ನೆಲೆ ಬರಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದು, ಅವರು ವೇದಿಕೆಗೆ ನೀಡಿರುವ ಗೌರವಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕಿಚ್ಚ ಸುದೀಪ್ ಇಂದಿನ ಕಾಸ್ಟ್ಯೂಮ್ ಕೂಡ ಸಿಂಪಲ್ ಆಗಿ ಎಲಿಗೆಂಟ್ ಲುಕ್ ಕೊಡುತ್ತಿತ್ತು. ಶನಿವಾರ ಕಂದು ಬಣ್ಣದ ಟಾಪ್ , ಬಿಳಿ ಬಣ್ಣದ ಪ್ಯಾಂಟ್ ಮತ್ತು ಕಡು ಕಂದು ಬಣ್ಣದ ಶಾಲು ಧರಿಸಿದ್ದರು. ಅದಕ್ಕೆ ತಕ್ಕನಾದ ಆರ್ನಮೆಂಟ್ಸ್ ಧರಿಸಿದ್ದರು. ಇನ್ನು ವಿಜಯದಶಮಿ ಆಚರಣೆಯಲ್ಲಿ ಕೇಸರಿ ಬಣ್ಣ ಇದ್ದಿದರಿಂದ ಕೇಸರಿ ಬಣ್ಣದ ಮಿಂಚುವ ಟಾಪ್ ಹಾಗೂ ತಿಳಿ ಕೇಸರಿ ಬಣ್ಣದ ಶಾಲು ಧರಿಸಿದ್ದರು. ಜೊತೆಗೆ, ಬಿಳಿ ಬಣ್ಣದ ಪ್ಯಾಂಟ್ ಧರಿಸಿ ಬಂದಿದ್ದರು. ಇನ್ನು ಅವರ ಮೂಡ್‌ನಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿರಲಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ವಿಚಾರ: ಕಲರ್ಸ್ ಕನ್ನಡ ವಾಹಿನಿಗೆ ಎಚ್ಚರಿಕೆ ಕೊಟ್ಟ ವಕೀಲರ ಸಂಘ!
ಈಗಾಗಲೇ ನಿನ್ನೆ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಅವರ ವಿರುದ್ಧ ಖಡಕ್ ಆಗಿಯೇ ಮಾತನಾಡಿದ್ದರು. ಕಳೆದೊಂದು ವಾರ ಬಿಗ್ ಬಾಸ್ ಮನೆಯಲ್ಲಿದ್ದ ವಕೀಲಸಾವ್ ಜಗದೀಶ್ ಅವರು ಬಿಗ್‌ಬಾಸ್ ಗೆ ಅವಾಜ್ ಹಾಕಿ ಇಡೀ ಬಿಗ್ ಬಾಸ್ ಮನೆಯನ್ನೇ ಉಡಾಯಿಸ್ತೀನಿ, ಶೋ ನಡೆಸಲು ಬಿಡಲ್ಲ ಎಂದು ಅವಾಜ್ ಹಾಕಿದ್ದರು. ಈ ಬಗ್ಗೆಯೂ ಜಗದೀಶ್ ಅವರನ್ನು ಪ್ರಶ್ನಿಸಿದ ಕಿಚ್ಚ ಸುದೀಪ್, ಬಿಗ್ ಬಾಸ್ ಬೇಕು ಅಂತ ನೀವೇ ಒಳಗೆ ಬಂದಿದ್ದೀರಿ. ಈಗ ಅವರನ್ನೇ ನೀವು ಕೆಳಗಿಟ್ಟು ಬಿಟ್ರೆ, ಶೋ ನಡೆಸಲು ಬಿಡಲ್ಲ ಎಂದು ಚಾಲೆಂಜ್ ಮಾಡಿದ್ರೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ಮೊದಲ ಸ್ಪರ್ಧಿ ಯಾರು?
ಮುಂದುವರೆದು, ನೀವು ಕ್ಯಾಮಾರಾ ಮುಂದೆ ಮಾಡಿದ್ದು ತಪ್ಪೇ ಅಲ್ಲ ಸರ್, ಇದೊಂದು ದೊಡ್ಡ ಜೋಕು ಎಂದು ಕಿಚ್ಚ ಸುದೀಪ್ ಗಹಗಹಿಸಿ ನಕ್ಕರು. ನಂತರ ಈ ಜೋಕ್ ಮಾಡೋಕೆ ಯಾರಾದ್ರೂ 11 ವರ್ಷ ಯಾಕೆ ತಕೊಂಡ್ರು ಅಂತ ಗೊತ್ತಾಗಲಿಲ್ಲ. ಈ ತರಹದ ವಾರವನ್ನು ನಾವು ಶೋ ಮುಗಿತಾ ಬರುವಾಗ ನೋಡುತ್ತಿದ್ದೆವು. ಆದರೆ, ಅದನ್ನು ಈ ಸೀಸನ್ ನಲ್ಲಿ ಮೊದಲ ವಾರವೇ ನೋಡಿದ್ದೇವೆ. ನಿಮ್ಮಲ್ಲಿ ಒಳ್ಳೆಯ ಸಾಮರ್ಥ್ಯ ಇದೆ ಎಂದು ಜಗದೀಶ್ ಬುದ್ದಿ ಹೇಳಿದರು. ಬಿಗ್ ಬಾಸ್ ಎನ್ನುವುದು ಒಂದು ಅದ್ಭುತವಾದ ವೇದಿಕೆ, ಅದನ್ನು ಇಂಪ್ರೂವ್ ಮಾಡುವುದು, ಬೆಳೆಸುವುದು ನಿಮ್ಮ 17 ಜನರ ಕೈನಲ್ಲಿದೆ. ಆದರೆ, ಯಾವುದೇ ಕಾರಣಕ್ಕೂ 'ಹಾಳು ಮಾಡುವುದಕ್ಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ' ಎಂದು ಕಿಚ್ಚ ಸುದೀಪ್ ಹೇಳಿದರು. ಈ ಮಾತಿಗೆ ಕಿಚ್ಚನ ಪಂಚಾಯಿತಿ ನೋಡಲು ಬಂದಿದ್ದ ಜನರು ಹಾಗೂ ಕಂಟೆಸ್ಟೆಂಟ್‌ಗಳು ಚಪ್ಪಾಳೆ ತಟ್ಟಿ ಕರಾಡತನ ಮಾಡಿದರು.