Asianet Suvarna News Asianet Suvarna News

ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ವಿಚಾರ: ಕಲರ್ಸ್ ಕನ್ನಡ ವಾಹಿನಿಗೆ ಎಚ್ಚರಿಕೆ ಕೊಟ್ಟ ವಕೀಲರ ಸಂಘ!

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೆ.ಎನ್.ಜಗದೀಶ್ ಅವರನ್ನು ವಕೀಲರೆಂದು ಬಿಂಬಿಸದಂತೆ ಬೆಂಗಳೂರು ವಕೀಲರ ಸಂಘವು ಕಲರ್ಸ್ ಕನ್ನಡ ವಾಹಿನಿಗೆ ಎಚ್ಚರಿಕೆ ನೀಡಿದೆ. ಜಗದೀಶ್ ಅವರ ವಕೀಲ ವೃತ್ತಿ ಸನ್ನದು ರದ್ದಾಗಿರುವುದರಿಂದ ಮತ್ತು ಅವರು ವಕೀಲರಲ್ಲದ ಕಾರಣ ಇನ್ನು ಮುಂದೆ ಅವರನ್ನು ವಕೀಲರೆಂದು ಬಿಂಬಿಸಬಾರದು ಎಂದು ಸೂಚಿಸಲಾಗಿದೆ.

Lawyers association warns Bigg Boss and Do not say lawyer to Jagadish sat
Author
First Published Oct 6, 2024, 12:22 PM IST | Last Updated Oct 6, 2024, 12:22 PM IST

ಬೆಂಗಳೂರು (ಅ.06): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್-11 ಕಾರ್ಯಕ್ರಮದಲ್ಲಿ ಇನ್ನುಮುಂದೆ ಕೆ.ಎನ್.ಜಗದೀಶ್ ಅವರನ್ನು ವಕೀಲರು, ವಕೀಲ್ ಸಾಬ್ ಎಂದು ಹೇಳಬಾರು. ಜೊತೆಗೆ, ಇತರ ಕಂಟೆಸ್ಟೆಂಟ್‌ಗಳಿಗೂ ಜಗದೀಶ್ ವಕೀಲರಲ್ಲವೆಂದು ತಿಳಿಸಬೇಕು. ಇದನ್ನು ಸರಿಪಡಿಸದಿದ್ದರೆ ಕಲರ್ಸ್ ಕನ್ನಡ ವಾಹಿನಿ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ವಕೀಲರ ಸಂಘವು ನೇರವಾಗಿ ಎಚ್ಚರಿಕೆ ನೀಡಿದೆ.

ಏಷ್ಯಾದಲ್ಲಿಯೇ ಬೆಂಗಳೂರು ವಕೀಲರ ಸಂಘವು ಅತಿ ದೊಡ್ಡ ಸಂಘವಾಗಿ ಘನತೆ ಮತ್ತು ಗೌರವ ಕಾಪಾಡಿಕೊಂಡು ಬಂದಿದೆ. ನಮ್ಮ ಸಂಘದಲ್ಲಿ 25 ಸಾವಿರಕ್ಕೂ ಹೆಚ್ಚು ವಕೀಲ ಸದಸ್ಯರಿದ್ದಾರೆ. ವಕೀಲರ ಸಮುದಾಯ ದಿನನಿತ್ಯದ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸಿ ಗೌರವಪೂರ್ವಕವಾಗಿ ವೃತ್ತಿ ನಡೆಸಿಕೊಂಡು ಬರುತ್ತಿದ್ದೇವೆ. ಈ ಮೂಲಕ ಬೆಂಗಳೂರು ವಕೀಲರ ಸಂಘವು ಮಾದರಿಯಾಗಿದೆ. ಇಂತಹ ಗೌರವಯುತ ಸಂಘಕ್ಕೆ ಯಾವುದೇ ವ್ಯಕ್ತಿಯು ಮಸಿ ಬಳಿಯಲು ಪ್ರಯತ್ನಪಟ್ಟಲ್ಲಿ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ.

ಇದನ್ನೂ ಓದಿ: ಅಲ್ಲಿ ಬಿಗ್ ಬಾಸ್‌ಗೇ ಬೆದರಿಸಿದ ಲಾಯರ್ ಜಗದೀಶ: ಇಲ್ಲಿ ವಕೀಲಿಕೆ ಲೈಸೆನ್ಸ್ ರದ್ದುಗೊಳಿಸಿದ ಬಾರ್ ಕೌನ್ಸಿಲ್!

ಆದರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿರುವ ಕೆ.ಎನ್.ಜಗದೀಶ್‌ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಪ್ರಸಾರ ಕಾರ್ಯಕ್ರಮದಲ್ಲಿ  ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿದೆ. ಇದು ನಮ್ಮ ವಕೀಲರ ಸಂಘಕ್ಕೆ ನೋವುಂಟು ಮಾಡಿರುತ್ತದೆ. ಜೊತೆಗೆ, ಅನೇಕ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಕೆ.ಎನ್‌.ಜಗದೀಶ್‌ ಅವರಿಗೆ ಈಗಾಗಲೇ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ವತಿಯಿಂದ ರಾಜ್ಯದಲ್ಲಿ ಕಾನೂನು ವೃತ್ತಿ (Advocate Service) ನಡೆಸದಂತೆ ಆದೇಶ ಹೊರಡಿಸಿದೆ. ಜೊತೆಗೆ, ಕೆ.ಎನ್‌.ಜಗದೀಶ್‌ ಕುಮಾರ್ ಅವರು ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ದಾಖಲಾತಿಗಳನ್ನು ದೆಹಲಿ ಬಾರ್ ಕೌನ್ಸಿಲ್ ಸಮಿತಿ ವತಿಯಿಂದ ಪರಿಶೀಲನೆ ಮಾಡಲಾಗಿದೆ. ಆಗ ಜಗದೀಶ್ ಅವೆರ ದಾಖಲೆಗಳು ನಕಲಿ ಎಂದು ದೃಢಪಟ್ಟಿವೆ. ಆ ನಂತರ ಅವರ ವಕೀಲ ವೃತ್ತಿ ಸನ್ನದು ನೋಂದಣಿ ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವುದಕ್ಕೆ ಆದೇಶವನ್ನೂ ಹೊರಡಿಸಲಾಗಿದೆ.

ಇದನ್ನೂ ಓದಿ: ಬಿಗ್‌ಬಾಸ್‌ ಶೋ ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಜಗದೀಶ್ ಸ್ಟೈಲ್‌ ನಲ್ಲೇ ಕಿಚ್ಚನ ಖಡಕ್‌ ಎಚ್ಚರಿಕೆ!

ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಕೀಲರಲ್ಲದ ವ್ಯಕ್ತಿಯೊಬ್ಬನ ಹಿನ್ನೆಲೆಯನ್ನು ಪರಿಶೀಲಿಸದೆ ವಕೀಲರೆಂದು ಬಿಂಬಿಸುತ್ತಿದೆ. ಇದು ಏಷ್ಯಾದ ಅತ್ಯಂತ ದೊಡ್ಡ ವಕೀಲರ ಸಂಘವಾಗಿರುವ ಸದಸ್ಯರ ವೃಂದಕ್ಕೆ ಬಹಳ ನೋವುಂಟು ಮಾಡಿದೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಮದ ಇನ್ನು ಮುಂದೆ ನೀವು ಕೆ.ಎನ್.ಜಗದೀಶ್ ಅವರನ್ನು ಬಿಗ್‌ಬಾಸ್-11 ರ ಕಾರ್ಯಕ್ರಮದಲ್ಲಿ ವಕೀಲರೆಂದು ಬಿಂಬಿಸಬಾರದು ಎಂದು ಮನವಿ ಮಾಡುತ್ತೇವೆ. ಜೊತೆಗೆ, ಈ ವಿಷಯ ಕುರಿತಂತೆ ಬಿಗ್ ಬಾಸ್ ಸೀಸನ್ 11ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತರೆ ಕಂಟೆಸ್ಟೆಂಟ್‌ಗಳಿಗೂ ಜಗದೀಶ್ ವಕೀಲರಲ್ಲವೆಂದು ತಿಳಿಸಬೇಕು. ಇದನ್ನು ಸರಿಪಡಿಸದಿದ್ದರೆ ವಕೀಲರ ಪರವಾಗಿ, ಬೆಂಗಳೂರು ವಕೀಲರ ಸಂಘವು ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ನೇರವಾಗಿ ಎಚ್ಚರಿಕೆ ನೀಡಲಾಗಿದೆ.

Latest Videos
Follow Us:
Download App:
  • android
  • ios