ಕಾರ್ತಿಕ್​ ಲೈಫ್​ ಪಾರ್ಟನರ್​ ಇವ್ರೇನಾ? 'ಎಸ್'​ ಎಂದ ಅಮ್ಮ! ಕುಣಿದು ಕುಪ್ಪಳಿಸ್ತಿರೋ ಫ್ಯಾನ್ಸ್​

ನಮ್ಮಮ್ಮ ಸೂಪರ್​ಸ್ಟಾರ್​ ಷೋಗೆ ಬಂದಿರುವ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಅವರ ಲೈಫ್​ ಪಾರ್ಟನರ್​ ಕುರಿತು ಅಮ್ಮ ಮೀನಾಕ್ಷಿ ಅವರು ಹೇಳಿದ್ದೇನು?
 

Karthiks mother Meenakshi says about life partner of son was in BBK 10 suc

ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ.  ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.   ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ.  ಅದೇ ರೀತಿ ಇದೀಗ ಬಿಗ್​ಬಾಸ್​ ಸೀಸನ್​ 10 ವಿನ್ನರ್​ ಕಾರ್ತಿಕ್​ ಮಹೇಶ್​ ಅವರು ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಆರಂಭದಲ್ಲಿ ಬಿಗ್​ಬಾಸ್​ ಅನ್ನು ಒಪ್ಪಿಕೊಳ್ಳದೇ ಕೊನೆಕ್ಷಣದಲ್ಲಿ ಒಪ್ಪಿಕೊಂಡು ಹೋಗಿದ್ದ ಕಾರ್ತಿಕ್​ ಅವರಿಗೆ ಈ ಗೆಲುವು ವಿಶೇಷ ಅನುಭವವನ್ನೂ ನೀಡಿದೆ. 

ಬಿಗ್​ಬಾಸ್​ ಮನೆಯಲ್ಲಿ ಕಾರ್ತಿಕ್​ ಅವರು ಸದ್ದು ಮಾಡಿದ್ದು ಸಂಗೀತಾ ಜೊತೆಗಿನ ಸ್ನೇಹದ ಕುರಿತು.  ಬಿಗ್ ಬಾಸ್ ಪ್ರಿಯರಿಗೆ ತಿಳಿದಿರುವಂತೆ,  ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ್ದರು ಕಾರ್ತಿಕ್ (Karthik). ಇವರ ಜೊತೆ ಸಂಗೀತಾ ಶೃಂಗೇರಿ ಮತ್ತು ತನಿಷಾ ಇದ್ದರು. ಈ ಮೂವರು  ಬಹುಬೇಗ ಸ್ನೇಹಿತರಾದರು. ಅದರಲ್ಲಿಯೂ ಶುರುವಿನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧ ಒಂದು ಲೆವೆಲ್​ ಮುಂದೆಯೇ ಹೋಗಿತ್ತು. ಪ್ರೇಕ್ಷಕರು ಇವರನ್ನು ನೋಡುವ ಸ್ಟೈಲೇ ಬೇರೆಯಾಗಿತ್ತು. ಇದಕ್ಕೆ ಕಾರಣ, ಬಿಗ್​ಬಾಸ್​ ಮನೆಯಲ್ಲಿ ಇವರಿಬ್ಬರೂ ಕೇವಲ ಸ್ನೇಹಿತರಾಗಿ ಇರದೇ  ಕೆಲವು ಸಲ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಂಡರು. ಇದೇ ವೇಳೆ ಒಂದು ಹಂತದಲ್ಲಿ  ‘ಲವ್‌ ಗಿವ್‌ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು ಕೂಡ. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಕೆಲ ವಾರ ಇವರಿಬ್ಬರ ನಡುವಿನ ಗಾಢ ಪ್ರೀತಿ ನಡೆಯಿತು .ನಂತರ ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು.

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

ಇದೀಗ ನಮ್ಮಮ್ಮ ಸೂಪರ್​ಸ್ಟಾರ್​ ವೇದಿಕೆಯಲ್ಲಿ ಕಾರ್ತಿಕ್​ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಅಮ್ಮ ಮೀನಾಕ್ಷಿಯವರೂ ಬಂದಿದ್ದಾರೆ. ಆಗ ನಿರೂಪಕಿ ಸುಷ್ಮಾ ಅವರು ಕಾರ್ತಿಕ್​ ಕಾಲೆಳೆದಿದ್ದಾರೆ. ಅಮ್ಮನಿಗೆ ಕಾರ್ತಿಕ್​ ಅವರ ಕುರಿತು ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಅಮ್ಮನ ಮನಸ್ಸಿನ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಬಹಿರಂಗವಾಗಿ ಬಲಿಯಾಗ್ತಿದ್ದಾರಾ ಕಾರ್ತಿಕ್? ಎನ್ನುವ ಶೀರ್ಷಿಕೆಯೊಂದಿಗೆ ಇದರ ಪ್ರೊಮೋ ಹಂಚಿಕೊಳ್ಳಲಾಗಿದೆ.

 

ಅಷ್ಟಕ್ಕೂ ಇದರಲ್ಲಿ ಸುಷ್ಮಾ ಅವರು, ಅಮ್ಮ ಮೀನಾಕ್ಷಿ ಅವರ ಬಳಿ, ನಿಮ್ಮ ಮಗ ಹುಡುಗಿಯರ ಜೊತೆ ಇಷ್ಟು ಚೆನ್ನಾಗಿ ಮಾತನಾಡ್ತಾರೆ ಎಂದು ನಿಮಗೆ ಬಿಗ್​ಬಾಸ್​ ಮೂಲಕವೇ ಗೊತ್ತಾಗಿದ್ದಾ ಎಂದಾಗ, ಅಮ್ಮ ಮೀನಾಕ್ಷಿ ಅವರು, ಇಲ್ಲ ಹೊರಗಡೆನೂ ಮಾತನಾಡ್ತಾನೆ. ಎಲ್ಲರ ಜೊತೆನೂ ಚೆನ್ನಾಗಿರ್ತಾನೆ ಎಂದರು. ಅಷ್ಟಕ್ಕೆ ಸುಮ್ಮನಾಗದ ಸುಷ್ಮಾ, ಅಮ್ಮಾ ನಾನು ಕೇಳಿದ ಪ್ರಶ್ನೆ ಅದಲ್ಲ ಎನ್ನುತ್ತಿದ್ದಂತೆಯೇ ಮಧ್ಯೆ ಬಾಯಿ ಹಾಕಿದ ಕಾರ್ತಿಕ್​ ಅವರು, ಅಮ್ಮಂಗೆ ಎಲ್ಲಾ ಕರೆಕ್ಟಾಗಿ ಅರ್ಥ ಆಗಿದೆ, ಸಾಕು ಬಿಡಿ ಎನ್ನುತ್ತಿದ್ದಂತೆಯೇ ಎಲ್ಲರೂ ಗೊಳ್ ಎಂದು ನಕ್ಕಿದ್ದಾರೆ. ಯಾರ ಜೊತೆ ತುಂಬಾ ಕ್ಲೋಸ್​ ಅಮ್ಮಾ ಅವರು ಎಂದು ಸುಷ್ಮಾ ಕೇಳಿದಾಗ, ಮತ್ತೆ ಮಧ್ಯೆ ಬಾಯಿ ಹಾಕಿದ ಕಾರ್ತಿಕ್​, ಯಾರು ಅಂತ ನಿಮಗ್ಯಾಕೆ ಎಂದು ಪ್ರಶ್ನಿಸಿದರು. ಸುಷ್ಮಾ ಬಿಡಬೇಕಲ್ಲ? ಮುಂದಿನ ಪ್ರಶ್ನೆಯ ರೂಪವಾಗಿ ಕಾರ್ತಿಕ್​ ಅವರ ಲೈಫ್​ ಪಾರ್ಟನರ್​ ಬಿಗ್​ಬಾಸ್​-10ನಲ್ಲೇ ಇದ್ದಾರೆ ಎನ್ನುತ್ತಿದ್ದಂತೆಯೇ ಕಾರ್ತಿಕ್​ ಅವರ ಅಮ್ಮ ಎಸ್​ ಎನ್ನುವ ಬೋರ್ಡ್​ ತೋರಿಸಿದ್ದಾರೆ. ಇದನ್ನು ಕಾರ್ತಿಕ್​ ಅವರು ಬೆರಗುಗಣ್ಣುಗಳಿಂದ ನೋಡಿದ್ದಾರೆ. ಹಾಗಿದ್ದರೆ ಬಿಗ್​ಬಾಸ್​ 10ನಲ್ಲಿರುವ ಸ್ಪರ್ಧಿ ಯಾರೆಂದು ಬಿಗ್​ಬಾಸ್​ ಪ್ರೇಮಿಗಳು  ಅಂದಾಜು ಮಾಡಿದ್ದು, ಶುಭಸ್ಯ ಶೀಘ್ರಂ ಎನ್ನುತ್ತಿದ್ದಾರೆ. ಬೇಗ ಊಟ ಹಾಕಿಸಿ, ಹೇಗಿದ್ದರೂ ಅಮ್ಮನ ಪರ್ಮಿಷನ್​ ಸಿಕ್ಕಿದೆಯಲ್ಲ ಎನ್ನುತ್ತಿದ್ದಾರೆ.  
 
 ಮೊದಮೊದಲಿಗೆ ಸಂಗೀತಾ ಮತ್ತು ಕಾರ್ತಿಕ್​ ನಡುವಿನ ಬಾಂಡಿಂಗ್​ ಇದ್ರೂ ಆಮೇಲೆ  ತುಂಬಾ ದೂರವಾಗಿದ್ದು ಏಕೆ ಎನ್ನುವ ಬಗ್ಗೂಇದಾಗಲೇ ಕಾರ್ತಿಕ್​ ಮಾತನಾಡಿದ್ದರು.  ಅದು ಅಲ್ಲಿನ ಸಿಚುಯೇಷನ್​ಗೆ ಹಾಗಾಯ್ತು ಅಷ್ಟೇ. ಫ್ರೆಂಡ್​ಷಿಪ್​ ಚೆನ್ನಾಗಿಯೇ ಇತ್ತು. ಆದರೆ ಇಬ್ಬರ ಯೋಚನೆ ನಂತರ ಬೇರೆ ಬೇರೆಯಾಗಲು ಶುರುವಾಯ್ತು. ಇಬ್ಬರ ನಡುವೆ ಹೊಂದಾಣಿಕೆ  ಆಗಲಿಲ್ಲ. ಅದು ದಿನ ಕಳೆದಂತೆ ಹೆಚ್ಚಾಗುತ್ತಾ ಇಬ್ಬರ ನಡುವೆ ಅಂತರ ಹೆಚ್ಚಾಯ್ತು ಎಂದಿದ್ದರು. ನಂತರ ಬಿಗ್​ಬಾಸ್​  ಮನೆಯೊಳಕ್ಕೆ ಹೀಗಾಯ್ತು, ಈಗ ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ಇಬ್ಬರೂ ಫ್ರೆಂಡ್​ಷಿಪ್​ ಮುಂದುವರೆಸುವಿರಾ ಎನ್ನುವ ಪ್ರಶ್ನೆಗೆ ಕಾರ್ತಿಕ್​, ಸರಿಯಾಗಿ ಉತ್ತರಿಸದೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದರು. ಫ್ರೆಂಡ್​ಷಿಪ್​ನಿಂದ  ದೂರ ಇರುತ್ತೇನೆ ಎಂದು ಅಲ್ಲ, ಫ್ರೆಂಡ್​ಷಿಪ್​ ಚೆನ್ನಾಗಿ ಇರಬೇಕು ಎನ್ನುವುದು ನನ್ನ ಆಸೆ ಎಂದಷ್ಟೇ ಹೇಳಿದ್ದರು. ಇದೀಗ ಅಮ್ಮನೂ ಎಸ್​ ಎನ್ನುವ ಮೂಲಕ ಈ ಫ್ರೆಂಡ್​ಷಿಪ್​ಗೆ ಹಸಿರು ನಿಶಾನೆ ತೋರಿದ್ದಾರೆ ಎನ್ನುತ್ತಿದ್ದಾರೆ ಫ್ಯಾನ್ಸ್​. 

ಲೈವ್​ನಲ್ಲಿ ನಮ್ರತಾ ಸೌಂದರ್ಯ ಹೊಗಳಿದ ಕಾರ್ತಿಕ್​: ಸ್ನೇಹಿತ್​ನ ಕಾಲು ಹೀಗೆ ಎಳೆಯೋದಾ ಫ್ಯಾನ್ಸ್​?

Latest Videos
Follow Us:
Download App:
  • android
  • ios