ಈ ಬಗ್ಗೆ ಮಾತನಾಡಿರುವ ಅವರು, ‘ಅಧಿಕೃತವಾಗಿ 6 ಸಾವಿರ ಸದಸ್ಯರನ್ನು ಒಳಗೊಂಡು, ನೂರಾರು ಕುಟುಂಬಗಳಿಗೆ ಜೀವನ ನೀಡುತ್ತಿರುವ ಕಿರುತೆರೆ ಉದ್ಯದ ಪ್ರತಿ ವರ್ಷದ ವಹಿವಾಟು 1200 ಕೋಟಿ. ಕಿರುತೆರೆ ಉದ್ಯಮದಿಂದಲೇ ಪ್ರತಿ ವರ್ಷ ಸರ್ಕಾರಕ್ಕೆ ಸಂದಾಯವಾಗುತ್ತಿರುವ ತೆರಿಗೆ ಸರಾಸರಿ 250 ಕೋಟಿ. ಆದರೆ, ಕೊರೋನಾದಿಂದಾಗಿ ಕಿರುತೆರೆ ಉದ್ಯಮ ಸ್ಥಗಿತವಾಗಿದೆ.

ಹೆಲ್ತ್‌ ಕೇರ್ ಸಿಬ್ಬಂದಿಗೆ 25 ಸಾವಿರ ಪಿಪಿಇ ಕಿಟ್ ಕೊಟ್ಟ ಬಾಲಿವುಡ್ ಬಾದ್‌ಶಾ..!

 ಇಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ನೆರವಿಗೆ ಬರುವ ಕುರಿತು ಯಾರೂ ಯೋಚನೆ ಮಾಡಿಲ್ಲ. ಇಲ್ಲಿನ 6 ಸಾವಿರ ಮಂದಿ ಸದಸ್ಯರಲ್ಲಿ ದಿನ ಕೂಲಿಯನ್ನೇ ನಂಬಿಕೊಂಡವರ ಸಂಖ್ಯೆ 4 ಸಾವಿರ ಮಂದಿ. ಇವರ ದುಡಿಮೆಯನ್ನೇ ಆಧರಿಸಿ ನೂರಾರು ಕುಟುಂಬಗಳು ಆಧರಿಸಿ ಜೀವನ ಮಾಡುತ್ತಿವೆ.  ಸರ್ಕಾರ ನಮ್ಮ ಕಷ್ಟಗಳಿಗೂ ಸ್ಪಂದಿಸಬೇಕು’ ಎಂದು ಶಿವಕುಮಾರ್ ಹೇಳಿದ್ದಾರೆ.

3 ಕೋಟಿ ಹಣವನ್ನು ಸಮಾನವಾಗಿ ಹಂಚಿದ ನಟ ರಾಘವ್‌ ಲಾರೆನ್ಸ್‌; ಯಾರ್ಯಾರಿಗೆ?

 ಈಗಾಗಲೇ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದಲೇ ಕಷ್ಟದಲ್ಲಿರುವ ಸದಸ್ಯರಿಗೆ ರೇಷನ್ ಕಿಟ್ ವಿತರಣೆ ಮಾಡುತ್ತಿದ್ದು, 3 ಸಾವಿರ ಕಿಟ್‌ಗಳನ್ನು ವಿತರಿಸಿದ್ದಾರೆ. ಆಹಾರ ಕಿಟ್‌ಗಳು ತಲುಪದೇ ಇರುವ ಟೆಲಿವಿಷನ್ ಅಸೋಸಿಯೇಷನ್ ಸದಸ್ಯರು ಈ ನಂಬರ್‌ಗೆ ಕರೆ ಮಾಡಿ. ದೂ: 9845064736