ಭವ್ಯಾ ಗೌಡ ಫ್ಯಾನ್ಸ್ ಖುಷಿಯಾಗಿದ್ದಾರೆ. ಅವರ ಮನೆಗೆ ಹೊಸ ಅತಿಥಿಯ ಆಗಮವಾಗಿದೆ. ಭವ್ಯಾ ಗೌಡ ಹೊಸ ಕಾರು ಖರೀದಿ ಮಾಡಿದ್ದಾರೆ. ಈ ಖುಷಿಯನ್ನು ಭವ್ಯಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಕರ್ಣ (Karna)ನ ಪ್ರೀತಿಯ ಕಣ್ಮಣಿ ನಿಧಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕರ್ಣನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡಿದ್ರೂ ಮದುವೆಯಾಗುವ ಭಾಗ್ಯ ನಿಧಿಗೆ ಸಿಕ್ಕಿಲ್ಲ. ಅದೇ ನೋವಿನಲ್ಲಿ ನಿಧಿಯಿದ್ದಾಳೆ ಅಂದ್ಕೊಂಡು, ವೀಕ್ಷಕರೆಲ್ಲ ಕಣ್ಣೀರು ಹಾಕ್ತಿದ್ದರೆ ಇತ್ತ ನಿಧಿ ಮಾತ್ರ ಹೊಸ ಕಾರು ಖರೀದಿ ಖುಷಿಯಲ್ಲಿದ್ದಾರೆ. ರೀಲ್ ಬೇರೆ ರಿಯಲ್ ಬೇರೆ. ಕರ್ಣ ಸೀರಿಯಲ್ ನಲ್ಲಿ ಕಣ್ಣೀರು ಹಾಕ್ತಿರುವ ನಿಧಿ ಅಲಿಯಾಸ್ ಭವ್ಯಾ ಗೌಡ (Bhavya Gowda) ರಿಯಲ್ ಲೈಫ್ ನಲ್ಲಿ ಸಂತೋಷವಾಗಿದ್ದಾರೆ. ಅದಕ್ಕೆ ಕಾರಣ ಅವರ ಮನೆಗೆ ಬಂದಿರುವ ಹೊಸ ಅತಿಥಿ. ಭವ್ಯಾ ಗೌಡ ಕಾರ್ ಖರೀದಿ ಮಾಡಿದ್ದು, ಅದ್ರ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಭವ್ಯಾ ಮನೆಗೆ ಬಂದ ಹೊಸ ಕಾರು :
ಭವ್ಯಾ ಗೌಡ ಸ್ಕೋಡಾ ಕೈಲಾಕ (Skoda Kylaq) ಕಾರನ್ನು ಭವ್ಯಾ ಗೌಡ ಖರೀದಿ ಮಾಡಿದ್ದಾರೆ. ಅಪ್ಪ – ಅಮ್ಮ, ಸಹೋದರಿಯರ ಜೊತೆ ಕಾರ್ ಖರೀದಿ ಮಾಡಿ, ಕೇಕ್ ಕತ್ತರಿಸಿ ಭವ್ಯಾ ಗೌಡ ಸಂಭ್ರಮಿಸಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ವೆಲ್ ಕಂ ಹೋಮ್ ಅಂತ ಕಾರಿನ ವಿಡಿಯೋ ಹಾಕಿರುವ ಭವ್ಯಾ ಗೌಡ, ನಂತ್ರ ಕುಟುಂಬ ಸಮೇತ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ. ಅದ್ರ ಫೋಟೋ ಹಂಚಿಕೊಂಡಿರುವ ಭವ್ಯಾ ಗೌಡ, ಅಮ್ಮನ ಕೊಡುಗೆ ಅಂತ ಬರೆದುಕೊಂಡಿದ್ದಾರೆ. ಕೇಕ್ ಕತ್ತರಿಸಿದ ಭವ್ಯಾ ಗೌಡ, ನಿನ್ನ ಟೈಂ ಕೂಡ ಬರ್ತದೆ ಮಗಾ, ಹ್ಯಾಪಿ ಆಗಿದೆ ನನಗೆ ಹ್ಯಾಪಿ ಆಗಿದೆ ಸಾಂಗ್ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಭವ್ಯಾ ಗೌಡ ಕಾರ್ ಖರೀದಿ ಮಾಡಿದ ಸುದ್ದಿ ಕೇಳಿ ಫ್ಯಾನ್ಸ್ ಸಂತೋಷಗೊಂಡಿದ್ದಾರೆ. ಹೀಗೆ ಖುಷಿಯಾಗಿರಿ ಅಂತ ಕಮೆಂಟ್ ಮಾಡಿದ್ದಾರೆ. ಭವ್ಯಾ ಗೌಡ ಖರೀದಿ ಮಾಡಿರುವ ಕಾರಿನ ಬೆಲೆ 16.2 ಲಕ್ಷದಿಂದ ಶುರುವಾಗುತ್ತದೆ. 1.5 ಲೀಟರ್ ಪೆಟ್ರೋಲ್ ಆಡಿಷನ್ ಬೆಲೆ 22.56 ಲಕ್ಷವಿದೆ.
ಧಾರಾವಾಹಿಗಳಲ್ಲಿ 'ಗುಟ್ಟಿ'ನ ಪರ್ವ..ಇವ್ರು ಬಾಯಿಬಿಟ್ಟರೆ ಸೀರಿಯಲ್‌ಗಳೇ The End
ಸೋಶಿಯಲ್ ಮೀಡಿಯಾ ಮೂಲಕವೇ ಪ್ರಸಿದ್ಧಿಗೆ ಬಂದವರು ಭವ್ಯಾ ಗೌಡ. ತಮ್ಮ ಟಿಕ್ ಟಾಕ್, ಇನ್ಸ್ಟಾ ವಿಡಿಯೋ ಮೂಲಕ ಗಮನ ಸೆಳೆದಿದ್ದ ಭವ್ಯಾ ಗೌಡ ಅವರಿಗೆ ಗೀತಾ ಸೀರಿಯಲ್ ನಲ್ಲಿ ಲೀಡ್ ರೋಲ್ ಸಿಕ್ಕಿತ್ತು. ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದ ಭವ್ಯಾ ಗೌಡ, ಅಧ್ಬುತವಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಅದಾದ್ಮೇಲೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಭವ್ಯಾ ಗೌಡ, ಅಲ್ಲಿಯೂ ವೀಕ್ಷಕರ ಮನಸ್ಸು ಗೆದ್ದಿದ್ದರು. ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಸ್ನೇಹ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಸುದ್ದಿಯಾಗಿತ್ತು. ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಮದುವೆ ಆಗ್ತಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಕೆಲ ದಿನ ಕಣ್ಮರೆಯಾಗಿದ್ದ ಭವ್ಯಾ ಗೌಡ ನಂತ್ರ ಜೀ ಕನ್ನಡಕ್ಕೆ ಹಾರಿದ್ದರು.ಇದು ಕಾಂಟ್ರವರ್ಸಿ ಕ್ರಿಯೆಟ್ ಮಾಡಿತ್ತು. ಕರ್ಣ ಸೀರಿಯಲ್ ಪ್ರಸಾರಕ್ಕೆ ಅಡ್ಡಿಯಾಗಿತ್ತು. ಆದ್ರೆ ಹೋರಾಟದಲ್ಲಿ ಗೆದ್ದ ಭವ್ಯಾ ಗೌಡ ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಕರ್ಣ ಸೀರಿಯಲ್ ನಲ್ಲಿ ನಿಧಿಯಾಗಿ ಮಿಂಚುತ್ತಿದ್ದಾರೆ.
ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ: Zee Kannada ವಾಹಿನಿಯಿಂದ ಕ್ಷಮಾಪಣಾ ಪತ್ರ
ಕರ್ಣ ಸೀರಿಯಲ್ ಪ್ರಸಿದ್ಧಿ ಭವ್ಯಾ ಗೌಡ ಪ್ರಸಿದ್ಧಿಯನ್ನೂ ಹೆಚ್ಚಿಸಿದೆ. ವೀಕ್ಷಕರು, ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಜೋಡಿಯನ್ನು ತೆರೆ ಮೇಲೆ ಒಪ್ಪಿಕೊಂಡಿದ್ರೂ ತ್ರಿವಿಕ್ರಮ್ - ಭವ್ಯಾ ಗೌಡ ಜೋಡಿಯನ್ನು ತೆರೆ ಮೇಲೆ ನೋಡುವ ಆಸೆ ವೀಕ್ಷಕರಲ್ಲಿ ಹಾಗೇ ಇದೆ. ಕಿರುತೆರೆಯ ಟಾಪ್ ನಟಿಯರಲ್ಲಿ ಸ್ಥಾನ ಪಡೆದಿರುವ ಭವ್ಯಾ ಗೌಡ, ಡಿಯರ್ ಕಣ್ಮಣಿ ಸಿನಿಮಾದಲ್ಲೂ ನಟಿಸಿದ್ದಾರೆ.
