Ramesh Karna serial: ಅದನ್ನ ನೋಡಿದ ರಮೇಶ ಏನನ್ನೋ ನೆನಪು ಮಾಡಿಕೊಂಡು, ಆ ಹುಡುಗನ ಕೊರಳಪಟ್ಟಿ ಹಿಡಿದು ಹೊಡೆಯಲು ಮುಂದಾಗುತ್ತಾನೆ. ಇಲ್ಲೇ ಇರೋದು ಟ್ವಿಸ್ಟ್. ಆ ಹೂ ಕೊಟ್ಟೋರು ಯಾರು?, ರಮೇಶ ಇದನ್ನ ನೋಡುತ್ತಿದ್ದ ಹಾಗೆ ಯಾಕೆ ಅ ರೀತಿ ನಡೆದುಕೊಂಡ ಎಂಬುದು.
ನಿಧಿ-ನಿತ್ಯಾ ದಿನಾ ಗೋಳಿಡುವುದನ್ನ ನೋಡಿದ್ದ ಕರ್ಣ ಧಾರಾವಾಹಿ ವೀಕ್ಷಕರಿಗೆ ತಕ್ಕ ಮಟ್ಟಿಗೆ ರಿಲೀಫ್ ಆಗುವಂತಹ ಸುದ್ದಿ ಸಿಕ್ಕಿದೆ. ಕರ್ಣನ ಅಪ್ಪ ರಮೇಶ್ ಕಿತಾಪತಿ ನೋಡಿ ಎಲ್ಲರಿಗೂ ರೋಸಿ ಹೋಗಿತ್ತು. ಇವನಿಗೆ ಗೋಳು ಹೊಯ್ದು ಕೊಳ್ಳುವವರು ಯಾರು ಇಲ್ಲವಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದರು. ಆದರೀಗ ರಮೇಶನೇ ರೊಚ್ಚಿಗೇಳವಂತಹ ಪರಿಸ್ಥಿತಿ ಬಂದಿದೆ. ಅಷ್ಟಕ್ಕೂ ರಮೇಶ್ ನೆಮ್ಮದಿ ಕೆಡಿಸಿದವರು ಯಾರು? ಎಂದು ನೋಡುವುದಾದರೆ...
ನಿಮಗೆಲ್ಲರಿಗೂ ತಿಳಿದಿರುವಂತ ಮೊನ್ನೆಯಷ್ಟೇ ರಮೇಶ್ ನಿತ್ಯಾ ಬಳಿ ಸತ್ಯ ತಿಳಿದುಕೊಳ್ಳಲು ಹೋಗಿದ್ದ. ಅಂದರೆ ಅವನಿಗೆ ನಿತ್ಯಾ ಮೇಲೆ ಗುಮಾನಿ ಬಂದಿದೆ. ಹಾಗಾಗಿ ಆಕೆ ಸಮಾಧಾನದಿಂದ ಇದ್ದಾಳೋ, ಇಲ್ಲವೋ ಎಂದು ತಿಳಿದುಕೊಂಡು, ಆ ನಂತರ ತೇಜಸ್ ಕಾಣೆಯಾಗಲು ಕರ್ಣನ ಕೈವಾಡವಿರಬಹುದು ಎಂಬುದನ್ನ ಪರೋಕ್ಷವಾಗಿ ಹೇಳಿದ್ದ. ಈ ಬಗ್ಗೆ ಯೋಚನೆ ಮಾಡಿದ ನಿತ್ಯಾ, ಆ ನಂತರ ಮಗುವಿನ ಜೀವ ಉಳಿಸಲು ಇಷ್ಟೊಂದು ಪರದಾಡುವ ಕರ್ಣ, ಈ ರೀತಿ ಎಲ್ಲಾ ಮಾಡ್ತಾನಾ? ಅಂದುಕೊಂಡು ಸದ್ಯಕ್ಕೆ ಕರ್ಣನ ಬಗ್ಗೆ ಅನುಮಾನ ಪಡುವುದನ್ನ ನಿಲ್ಲಿಸಿದ್ದಾಳೆ.
ಹೂ ನೋಡಿ ಸಿಟ್ಟಾದ ರಮೇಶ್
ಆದರೆ ಇಷ್ಟಕ್ಕೆ ಸುಮ್ಮನಾಗದ ಜೀವ ರಮೇಶನದ್ದು, ಹಾಗಾಗಿ ಬೇರೇನೋ ಸ್ಕೆಚ್ ಹಾಕಿ ನೆಮ್ಮದಿಯಾಗಿ ಮನೆಯೊಳಗೆ ಕುಳಿತಿರುವಾಗಲೇ ಅವನಿಗೊಂದು ಪಾರ್ಸೆಲ್ ಬರುತ್ತದೆ. ಅದನ್ನ ತೆಗೆದುಕೊಳ್ಳಲೆಂದು ರಮೇಶನ ತಮ್ಮ ಹಾಗೂ ತಮ್ಮನ ಹೆಂಡತಿ ಬರುತ್ತಾರೆ. ಆದರೆ ಪಾರ್ಸೆಲ್ ಕೊಡುವಾತ, ಇದು ರಮೇಶ್ ಅವರಿಗೆ ಬಂದದ್ದು, ಅವರಿದ್ದಾರಾ? ಎಂದು ನಿರಂತರವಾಗಿ ಪ್ರಶ್ನಿಸುತ್ತಲೇ ಇರುತ್ತಾನೆ. ಇದನ್ನ ಕೇಳಿಸಿಕೊಂಡು ಅಲ್ಲಿಂದಲೇ ರಮೇಶ ಉತ್ತರಿಸುವಾಗ ಪಾರ್ಸೆಲ್ ತಂದಿದ್ದ ಹುಡುಗ ಮನೆಯೊಳಗೆ ಓಡಿ ಹೋಗಿ, ಅವನಿಗೆ ನಿಮಗೆ ಬಂದಿದ್ದು ತೆಗೆದುಕೊಳ್ಳಿ ಎಂದು ರೆಡ್ ರಿಬ್ಬನ್ ಫ್ಲವರ್ ಕೊಡುತ್ತಾನೆ. ಅದನ್ನ ನೋಡಿದ ರಮೇಶ ಏನನ್ನೋ ನೆನಪು ಮಾಡಿಕೊಂಡು, ಆ ಹುಡುಗನ ಕೊರಳಪಟ್ಟಿ ಹಿಡಿದು ಹೊಡೆಯಲು ಮುಂದಾಗುತ್ತಾನೆ. ಕೊನೆಗೆ ಅಲ್ಲಿಯೇ ಇದ್ದ ರಮೇಶನ ತಮ್ಮ ಹಾಗೂ ತಮ್ಮನ ಹೆಂಡತಿ ಅವನನ್ನು ತಡೆಯುತ್ತಾರೆ. ಆ ಹುಡುಗ ಅಲ್ಲಿಂದ ಎದ್ದೇನೋ, ಬಿದ್ದೇನೋ ಎಂಬಂತೆ ಹೊರಬರುತ್ತಾನೆ.
ಹಾಗೆ ಹೊರಬಂದವನು ಯಾರಿಗೋ ಫೋನ್ ಮಾಡಿ "ನೀವು ಅಂದುಕೊಂಡ ಹಾಗೆ ಆಯ್ತು. ಹೂವು ನೋಡುತ್ತಿದ್ದ ಹಾಗೆ ಆಯಪ್ಪ ಮೈ ಮೇಲೆ ಹಾವು ಬಿಟ್ಟವರ ಹಾಗೆ ಮಾಡಿದ. ಅವನ ನೆಮ್ಮದಿಗೆ ನೀವು ಬೆಂಕಿ ಇಟ್ಟಾಯ್ತು ಬಿಡಿ" ಅನ್ನುತ್ತಾನೆ. ಇಲ್ಲೇ ಇರೋದು ಟ್ವಿಸ್ಟ್. ಆ ಹೂ ಕೊಟ್ಟೋರು ಯಾರು?, ರಮೇಶ ಇದನ್ನ ನೋಡುತ್ತಿದ್ದ ಹಾಗೆ ಯಾಕೆ ಅ ರೀತಿ ನಡೆದುಕೊಂಡ ಎಂಬುದು.
ಗುಮಾನಿ ತರಿಸಿದೆ ರಮೇಶ್ ನಡೆ
ರಮೇಶನ ಈ ನಡವಳಿಕೆ ತಮ್ಮ, ತಮ್ಮನ ಹೆಂಡತಿಗೂ ಗುಮಾನಿ ತರಿಸಿದೆ. ಆ ಹೂವನ್ನ ನೋಡಿ "ಅಣ್ಣ ಯಾಕೆ ಹೀಗೆ ಮಾಡಿದ" ಎಂಬುದನ್ನ ಯೋಚಿಸಲು ಶುರು ಮಾಡಿದಾಗ ಹೆಂಡತಿ ಇದು ಹಳೆಯ ಕಾಲದವರೂ ಮಾಡಿದ ಹಾಗೇ ಇದೆ ಎಂದಾಗ...ಹೌದು, ಇದನ್ನ ಈ ಹಿಂದೆಯೂ ಯಾರೋ ಕೊಟ್ಟ ನೆನಪು" ಅನ್ನುತ್ತಾನೆ. ಒಟ್ಟಾರೆ ಇದನ್ನ ಪತ್ತೆ ಹಚ್ಚಲು ರಮೇಶನ ತಮ್ಮ ಹಾಗೂ ತಮ್ಮನ ಹೆಂಡತಿ ಅರಂಭಿಸಿದ್ದಾರೆ. ಹಾಗಾಗಿ ವೀಕ್ಷಕರಿಗೆ ರಮೇಶನ ನೆಮ್ಮದಿ ಕಸಿದುಕೊಳ್ಳುವರು ಬಂದಾಯ್ತು ಎಂದು ಖುಷಿಯಾಗಿದೆ.
ಇದೆಲ್ಲದರ ಮಧ್ಯೆ ನಿತ್ಯಾ ಅಜ್ಜಿಗೆ ಪದೇ ಪದೇ ಕರ್ಣನ ಮನೆಯವರೆಲ್ಲಾ ಬೇಜಾರು ಮಾಡಿಸುತ್ತಿರುವುದರಿಂದ ಮಾರಿಗುಡಿಗೆ ಹೋಗುವ ತೀರ್ಮಾನ ತೆಗೆದುಕೊಂಡಿದ್ದಾಳೆ. ಆದರೆ ಈ ವಿಚಾರವನ್ನ ನಿತ್ಯಾ ಒಪ್ತಾಳಾ?, ಕರ್ಣ ಏನ್ ಹೇಳ್ತಾನೆ?, ರಮೇಶ ಹಾಗೂ ಆತನ ತಂಗಿಗೆ ಈ ವಿಷಯ ಗೊತ್ತಾದ್ರೆ ಏನನ್ನಬಹುದು ? ಎಂಬುದನ್ನ ಕಾದು ನೋಡಬೇಕಿದೆ. ಏಕೆಂದರೆ ಕರ್ಣನಿಗೂ, ಮಾರಿಗುಡಿಗೂ ಸಂಬಂಧವಿದೆ. ಹಾಗಾಗಿ ಹಿಂದೊಮ್ಮೆ ಕರ್ಣ ನಿತ್ಯಾ ನಿಧಿ ಜೊತೆಗೆ ಅಲ್ಲಿಗೆ ಹೋದಾಗ ರಮೇಶ ಕಸಿವಿಸಿಗೊಂಡಿದ್ದ. ಈಗ ಮತ್ತೊಮ್ಮೆ ಮಾರಿಗುಡಿ ವಿಚಾರ-ಆ ಫ್ಲವರ್ ಕೊಟ್ಟಿರುವ ವಿಚಾರ ಇದನ್ನೆಲ್ಲಾ ನೋಡಿದ್ರೆ ಮುಂದೆ ರಮೇಶನ ಆಟ ಹೇಗಿರುತ್ತೆ ಎಂಬುದನ್ನ ವೀಕ್ಷಕರು ಕಾದುನೋಡಬೇಕಿದೆ.
