Karimani Serial Episode: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ʼಕರಿಮಣಿʼ ಧಾರಾವಾಹಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಅರುಂಧತಿ ಬಲಿ ಕೊಡಲು ರೆಡಿಯಾದಳು. ಇನ್ನು ಮಗ ಕೂಡ ಅಮ್ಮನ ಪರನಾದನಾ? 

ಕರಿಮಣಿ ಧಾರಾವಾಹಿಯಲ್ಲಿ ( Karimani Serial ) ರಾಜೇಂದ್ರ ಪ್ರಸಾದ್‌ ಹಾಗೂ ಅನುರಾಧಾ ಪ್ರೀತಿಸಿ ಮದುವೆಯಾಗಿರುತ್ತಾರೆ. ಆದರೆ ರಾಜೇಂದ್ರನನ್ನು ಪ್ರೀತಿಸಿದ ಅರುಂಧತಿ ಅವನನ್ನೇ ಮದುವೆ ಆಗಿ, ಅನುಳನ್ನು ಮನೆಯಿಂದ ಹೊರಗಡೆ ಹಾಕಿರುತ್ತಾಳೆ. ಈ ವಿಷಯ ರಾಜೇಂದ್ರನಿಗೆ ಗೊತ್ತೇ ಇರೋದಿಲ್ಲ. ಹೆಂಡತಿ ಬದುಕಿಲ್ಲ ಎಂದು ಅವನು ನಂಬಿರುತ್ತಾನೆ. ಈಗ ಅನುರಾಧಾ ಎಲ್ಲರ ಮುಂದೆ ಬಂದಿದ್ದಾಳೆ.

ಅರುಂಧತಿ ಅಸಲಿ ಮುಖ ಯಾರೂ ನೋಡಿಲ್ಲ! 

ರಾಜೇಂದ್ರ ಪ್ರಸಾದ್‌ ಹಾಗೂ ಅನುರಾಧಾ ಮಗ ಕರ್ಣನಿಗೆ ಹೆತ್ತ ತಾಯಿ ಕಂಡರೆ ಆಗೋದೇ ಇಲ್ಲ. ನನ್ನನ್ನು ಪಾಲನೆ ಮಾಡಿದವಳು, ಊಟ ಮಾಡಿ ಮುದ್ದು ಮಾಡಿದವಳು ಅರುಂಧತಿ ಅಂತ ಕರ್ಣ ನಂಬಿದ್ದನು. ಕರ್ಣನಿಗೆ ಹೆತ್ತ ತಾಯಿ ಬಗ್ಗೆಯೇ ಕೋಪ, ದ್ವೇಷ ಬರುವಂತೆ ಅರುಂಧತಿ ಮಾಡಿದ್ದಳು. ಆದರೆ ಇದು ಯಾರಿಗೂ ಗೊತ್ತೇ ಆಗಲಿಲ್ಲ.

ರಾಜೇಂದ್ರ ಪ್ರಸಾದನಿಗೆ ತಿಳಿದ ಅರುಂಧತಿ ಕರ್ಮಕಾಂಡ

ಈಗ ಕರ್ಣನ ಹೆಂಡ್ತಿ ಸಾಹಿತ್ಯಾಳಿಂದ ಅರುಂಧತಿ ಸತ್ಯ ಎಲ್ಲರಿಗೂ ಗೊತ್ತಾಗುವ ಹಾಗೆ ಆಗಿದೆ.‌ ಇಷ್ಟುದಿನಗಳಿಂದ ತನಗೆ, ತನ್ನ ಕುಟುಂಬಕ್ಕೆ ತೊಂದರೆ ಕೊಡ್ತಿದ್ದ ಬ್ಲ್ಯಾಕ್‌ ರೋಸ್‌ಗೆ ತನ್ನ ಮನೆಯಲ್ಲಿರೋ ಪ್ರಸನ್ನ ಮಾವನೇ ಸಹಾಯ ಮಾಡ್ತಿದ್ದ ಅಂತ ಕರ್ಣನಿಗೆ ಗೊತ್ತಾಗಿತ್ತು. ಬಾಲ್ಯದಲ್ಲಿ ಪ್ರಸನ್ನನ ಜೊತೆ ಇರೋ ಹುಡುಗಿ ಈಗ ಹೇಗೆ ಆಗಿರಬಹುದು ಎಂದು ಕರ್ಣ ಸ್ಕೆಚ್‌ ಮಾಡಿಸಿದ್ದನು. ಆ ಫೋಟೋ ರಾಜೇಂದ್ರ ಪ್ರಸಾದ್‌ಗೆ ಸಿಕ್ಕಿದೆ. ಪ್ರಸನ್ನ ಹಾಗೂ ಅರುಂಧತಿ ಅಕ್ಕ ತಮ್ಮ ಎಂದು ರಾಜೇಂದ್ರನಿಗೆ ಗೊತ್ತಾಗಿದೆ. ಅದರ ಜೊತೆಗೆ ಅನುರಾಧಾ ಹಾಗೂ ಪಾಪಮ್ಮ ಕೂಡ ಅರುಂಧತಿ ಹಣೆಬರಹ ಏನು ಎಂದು ಅವನಿಗೆ ಹೇಳಿದ್ದಾರೆ.

ಇನ್ನು ಅರುಂಧತಿ ಹಾಗೂ ರಾಜೇಂದ್ರ ಪ್ರಸಾದ್ ಮುಖಾಮುಖಿಯಾಗಿದ್ದಾರೆ. ಯಾಕೆ ಈ ರೀತಿ ಮಾಡಿದೆ ಅಂತ ರಾಜೇಂದ್ರ ಅವಳಿಗೆ ಪ್ರಶ್ನೆ ಮಾಡಿದ್ದಾನೆ. ತನ್ನ ಮನೆಯವರಿಗೆ ತನ್ನ ಅಸಲಿ ಮುಖವನ್ನು ರಾಜೇಂದ್ರ ಪ್ರಸಾದ್‌ ರಿವೀಲ್‌ ಮಾಡ್ತಾನೆ ಅಂತ ಈಗ ಅರುಂಧತಿಯೇ ಅವನಿಗೆ ಗುಂಡೇಟು ಹಾರಿಸಿದ್ದಾಳೆ. ಇನ್ನು ಜೈಲಿನಲ್ಲಿದ್ದ ಪ್ರಸನ್ನ ಕೂಡ ತಪ್ಪಿಸಿಕೊಂಡು, ಅರುಂಧತಿಗೆ ಸಾಥ್‌ ಕೊಟ್ಟಿದ್ದಾನೆ. ಬ್ಲ್ಯಾಕ್‌ರೋಸ್‌ ಹುಡುಕಿಕೊಂಡು ಕರ್ಣ ಕೂಡ ಬರುತ್ತಿದದಾನೆ. ನಿಜಕ್ಕೂ ರಾಜೇಂದ್ರ ಪ್ರಸಾದ್‌ ಸಾಯುತ್ತಾನಾ? ಅಥವಾ ಅಲ್ಲಿಗೆ ಕರ್ಣ ಬರುತ್ತಾನಾ? ಇಷ್ಟು ಬೇಗ ಅರುಂಧತಿ ಮುಖವಾಡ ಕಳಚಿಬೀಳುತ್ತಾ ಎಂದು ಕಾದು ನೋಡಬೇಕಿದೆ.

ಈ ಪ್ರೋಮೋ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ. ವೀಕ್ಷಕರು ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

  • ಇವತ್ತು ಬ್ಲ್ಯಾಕ್ ರೋಸ್‌ದು ಬ್ಲ್ಯಾಕ್ ಡೇ ಆಗುತ್ತೆ ನಮ್ ಕರ್ಣ ಬರ್ತಾ ಇದಾನೆ.
  • ಇವಳು ರಾಜೇಂದ್ರನ ಇಷ್ಟ ಪಟ್ಟಿ ತಾನೆ ಮದುವೆ ಆಗಿದ್ದು? ಆದರೆ ಈಗ ಉಲ್ಟಾ.
  • ಭಾರತ್ ಕೂಡ ಅವರ ಅಮ್ಮ ಜೊತೆ ಸೇರಿ ಇದ್ದಾನೆ ಅಂತ ಅನ್ಸುತ್ತೆ ಕಾದು ನೋಡೋಣ. ಕರ್ಣ ಸಾಹಿತ್ಯ ಸೂಪರ್ ಜೋಡಿ
  • ರಾಜೇಂದ್ರ ಪ್ರಸಾದ್ ಸಾಯೋದಿಲ್ಲ ಬಿಡಿ
  • ಭರತ್, ನೀನು ಕೂಡ ಶತ್ರುನಾ? ಅಯ್ಯೋ ನಿನ್ನ ನಂಬಿದ್ದೆ ತಪ್ಪಾಯ್ತು
  • ಈ ಪ್ರೋಮೋ ಪ್ರಕಾರ ಭರತ್ ಕೂಡಾ ವಿಲನ್ ಅನ್ನಿಸ್ತಿದೆ.‌ ಆದರೆ ಎಪಿಸೋಡ್ ನೋಡೋಣ. ಏನಾದ್ರು ಭರತ್ ವಿಲನ್ ಮಾಡಿದ್ರೆ..
  • ಹಾಗಾದ್ರೆ ಅರುಂಧತಿ ಮೊನ್ನೆ ಕಾಲ್ ಮಾಡಿದ್ದು ಭರತ್‌ಗೆ ...ಕರ್ಣ, ಪಾಪ ಸಾಹಿತ್ಯ ನಿನ್ನ ಗಂಡನಿಗೆ ಎಷ್ಟು ಶತ್ರುಗಳಾದ್ರು..?
  • ಅಯ್ಯೋ ಪಾಪಿ ಅರುಂಧತಿ ನಿನ್ನ ಕೆಟ್ಟ ಮುಖವಾಡ ಕರ್ಣನಿಗೆ ಗೊತ್ತು ಆಗಲಿ
  • ಭರತ್ ವಿಲನ್ ಅನ್ಸುತ್ತಾ? ಕರ್ಣ ಜೊತೆಗೆ ಮಾತಾಡ್ಬೇಕಾದ್ರೆ ಅರುಂಧತಿ ಪಕ್ಕದಲ್ಲಿ ಇರ್ತಾಳೆ, ಜೊತೆಗೆ ಪ್ರಸನ್ನ ಕೂಡಾ ಪಾಸ್ ಆಗ್ತಾನೆ

View post on Instagram