'ನನಗೊಂದು ಲವ್‌ ಬ್ರೇಕಪ್‌ ಆಗಿದೆ, ಸದ್ಯಕ್ಕೆ ಲವ್‌ ಮಾಡಲ್ಲ..' ಬಾಯ್‌ಫ್ರೆಂಡ್‌ ಬಗ್ಗೆ ಸಪ್ತಮಿ ಗೌಡ ಮಾತು!

sapthami gowda on Boyfriend ಕಾಂತಾರ ನಟಿ ಸಪ್ತಮಿ ಗೌಡ ಈಗ ಸುದ್ದಿಯಲ್ಲಿದ್ದಾರೆ. ಆದರೆ, ಅವರು ಸುದ್ದಿಯಲ್ಲಿರೋದು ಒಳ್ಳೆಯ ಕಾರಣಕ್ಕಾಗಿ ಅಲ್ಲ. ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವಿಚ್ಛೇದನ ಕೇಸ್‌ನಲ್ಲಿ ಸಪ್ತಮಿ ಗೌಡ ಹೆಸರು ಬಂದು ವಿವಾದಕ್ಕೆ ಕಾರಣವಾಗಿದೆ.

kantara actress sapthami gowda on Love Breakup in Nannamma Superstar Event san

ಬೆಂಗಳೂರು (ಜೂ.14): ಕಾಂತಾರ ಸಿನಿಮಾದ ಮೂಲಕ ಲೀಲಾ ಆಗಿ ಕನ್ನಡಿಗರ ಮನಗೆದ್ದಿದ್ದ ನಟಿ ಸಪ್ತಮಿ ಗೌಡ (sapthami gowda) ಈಗ ಸುದ್ದಿಯಲ್ಲಿದ್ದಾರೆ. ಹಾಗಂತ ಯಾವುದೇ ಖುಷಿಯ ವಿಚಾರ ಇದಲ್ಲ. ಯುವ (Yuva) ಸಿನಿಮಾದಲ್ಲಿ ಸಪ್ತಮಿ ಗೌಡ ಜೊತೆ ನಟಿಸಿದ್ದ ಯುವ ರಾಜ್‌ಕುಮಾರ್‌ (Yuva RajKumar) ಹಾಗೂ ಶ್ರೀದೇವಿ ಭೈರಪ್ಪ (Sridevi byrappa) ನಡುವಿನ ವಿಚ್ಛೇದನಕ್ಕೆ ಸಪ್ತಮಿ ಗೌಡ (Divorce) ಅವರೇ ಕಾರಣ ಎನ್ನುವ ಮಾತಗಳು ಕೇಳಿ ಬಂದಿವೆ. ಅಷ್ಟು ಮಾತ್ರವಲ್ಲದೆ, ಶ್ರೀದೇವಿ ಭೈರಪ್ಪ ಅವರಿಗೆ ನೀಡಿದ ನೋಟಿಸ್‌ಗೆ ಉತ್ತರ ನೀಡಿದ್ದು, ಇದರಲ್ಲಿಯೇ ಸಪ್ತಮಿ ಗೌಡ ಅವರ ಹೆಸರನ್ನು ಉಲ್ಲೇಖಿಸಿದ್ದು ಮಾತ್ರವಲ್ಲದೆ, ಯುವ ಹಾಗೂ ಸಪ್ತಮಿಗೆ ಅಫೇರ್‌ ಇದೆ ಎಂದು ಆರೋಪ ಮಾಡಿದ್ದರು. ಇಬ್ಬರನ್ನೂ ತಾವು ಹೋಟೆಲ್‌ ರೂಮ್‌ನಲ್ಲಿದ್ದಾಗಲೇ ನೋಡಿದ್ದೆ ಎಂದೂ ಶ್ರೀದೇವಿ ಭೈರಪ್ಪ ಹೇಳಿದ್ದಾರೆ. ಈ ಎಲ್ಲಾ ಸುದ್ದಿಗಳ ನಡುವೆ ಸಪ್ತಮಿ ಗೌಡ, ಶ್ರೀದೇವಿ ಭೈರಪ್ಪ ಮಾಡಿದ ಆರೋಪಗಳಿಗೆ ಕೋರ್ಟ್‌ ಮೆಟ್ಟಿಲೇರುವುದಾಗಿ ತಿಳಿಸಿದ್ದರು. ಶ್ರೀದೇವಿ ಭೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದರು. ಈಗ ಸಪ್ತಮಿ ಗೌಡ ಕುರಿತಾಗಿ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಕೆಲವು ದಿನಗಳ ಹಿಂದೆ ನನ್ನಮ್ಮ ಸೂಪರ್‌ಸ್ಟಾರ್‌ ರಿಯಾಲಿಟಿ ಶೋ ಫೈನಲ್‌ ವೇದಿಕೆಗೆ ಬಂದಿದ್ದ ಸಪ್ತಮಿ ಗೌಡ ತಮ್ಮ ಲವ್‌ ಲೈಫ್‌ ಬಗ್ಗೆ ಮಾತನಾಡಿದ್ದರು.

ಶೋನ ನಿರೂಪಕಿ ಸುಷ್ಮಾ ರಾವ್‌, 'ಸಪ್ತಮಿ ಗೌಡ ಅವರಿಗೆ ಬಾಯ್‌ಫ್ರೆಂಡ್‌ ಇದ್ದಾರ? ಹೊಸ ಅಪ್ಲಿಕೇಶನ್‌ಗೆ ಅವಕಾಶ ಇದೆಯಾ? ಎಂದು ಸಪ್ತಮಿಗೆ ಪ್ರಶ್ನೆ ಮಾಡಿದ್ದರು. 'ಹೌದು ನನಗೆ ಬಾಯ್‌ಫ್ರೆಂಡ್‌ ಇದ್ದ. ಬಟ್‌ ಈಗ ಇಲ್ಲ. ಅಂದ್ರೆ ನನ್ನ ಜೊತೆ ಇಲ್ಲ. ಈಗ ನನಗೆ ಅದಕ್ಕೂ ಟೈಮ್‌ ಕೂಡ ಇಲ್ಲ. ಇನ್ನು ಹೊಸ ಅಪ್ಲಿಕೇಶನ್‌ಗೂ ಅವಕಾಶ ಇಲ್ಲ. ಯಾಕೆಂದರೆ, ನನಗೆ ಈಗ ಕೆಲಸ ಸಿಕ್ಕಾಪಟ್ಟೆ ಇಂಪಾರ್ಟೆಂಟ್‌ ಆಗಿದೆ. ಅದರಲ್ಲೇ ಬ್ಯೂಸಿ ಆಗಿದ್ದೇನೆ. ಅದರ ಮೇಲೆಯೇ ಹೆಚ್ಚು ಫೋಕಸ್‌ ಆಗಿದ್ದೇನೆ. ಬೇರೆ ಯಾವುದಕ್ಕೂ ನನಗೆ ಟೈಮ್‌ ಇಲ್ಲ. ಹಾಗಾಗಿ ಹೊಸ ಅಪ್ಲಿಕೇಶನ್‌ಅನ್ನೂ ಯಾರಿಂದಲೂ ತೆಗೆದುಕೊಳ್ಳುತ್ತಿಲ್ಲ..' ಎಂದು ಹೇಳಿದ್ದರು.

ಯುವ ರಾಜ್‌ಕುಮಾರ್‌-ಸಪ್ತಮಿ ಗೌಡ ರೆಡ್‌ಹ್ಯಾಂಡ್‌ ಆಗಿ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ರು: ಶ್ರೀದೇವಿ ಭೈರಪ್ಪ

ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದ ಸಪ್ತಮಿ ಗೌಡ, ಬೇರೆ ಭಾಷೆಯಲ್ಲಿ ನಟಿಸೋದು ಅಥವಾ ನಟಿಸದೇ ಇರೋದು ಅವರವರ ವೈಯಕ್ತಿಕ ಆಯ್ಕೆ. ಡಾ. ರಾಜ್‌ಕುಮಾರ್‌ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರು ಇಲ್ಲೇ ಇದ್ದರು. ಇಲ್ಲೇ ಬೆಳೆದರು. ಅವರ ಮನೆಯೇ ಗಂಧದ ಗುಡಿ ಆಯ್ತು. ಇನ್ನು ಪುನೀತ್‌ ರಾಜ್‌ಕುಮಾರ್‌ ಅವರ ಯೋಚನೆ ಕೂಡ ಅದೇ ಆಗಿತ್ತು. ಆದ್ರೆ ಎಲ್ಲರಿಗೂ ಅದೇ ರೀತಿ ಇರೋಕೆ ಆಗೋದಿಲ್ಲ. ಅವರ ಮನೆಯಲ್ಲೇ ಶಿವಣ್ಣ ಹಾಗಿಲ್ಲ. ಶಿವಣ್ಣ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದರು. ಅದು ಅವರವರ ಆಯ್ಕೆಯಷ್ಟೇ. ಅದೇ ರೀತಿ ನಾನು ನಂಬಿರೋದು ಏನೆಂದರೆ, ಒಬ್ಬ ಆರ್ಟಿಸ್ಟ್‌ಗೆ ಭಾಷೆ ಅನ್ನೋದು ಇರಬೇಕು. ಆದರೆ, ಆರ್ಟ್‌ಗೆ ಭಾಷೆ ಎನ್ನುವ ಅಡ್ಡಿ ಇರಬಾರದು. ನಾವು ಬೇರೆ ಭಾಷೆಗೆ ಹೋಗಿ ನಟಿಸುತ್ತೇವೆ ಅಂದ ಮಾತ್ರಕ್ಕೆ ಆ ಭಾಷೆ ನಮ್ಮದಾಗೋದಿಲ್ಲ. ನಮ್ಮ ಭಾಷೆ ಯಾವುದು ಅನ್ನೋದು ನಮಗೆ ಗೊತ್ತಿರಬೇಕು. ನನ್ನ ಭಾಷೆ ಎಂದಿಗೂ ಕನ್ನಡ. ನನ್ನ ತಂದೆ-ತಾಯಿ ಹೇಗೆ ಬದಲಾಗೋದಿಲ್ಲವೂ ಅದೇ ರೀತಿ ನನ್ನ ಭಾಷೆ ಕೂಡ ಬದಲಾಗೋದಿಲ್ಲ ಎಂದು ಸಪ್ತಮಿ ಗೌಡ ಹೇಳಿದ್ದಾರೆ.

ಸಪ್ತ ಸಾಗರದಷ್ಟು ಚೆಲುವಿನ ಸಪ್ತಮಿ ಗೌಡ, ಬರ್ತ್‌ಡೇ ದಿನ ಕೆಂಪಾದ ಯುವ ಸಿನಿಮಾ ಸುಂದರಿ!

 

 

Latest Videos
Follow Us:
Download App:
  • android
  • ios