ಭುವಿ ಮನೆಯಲ್ಲೇ ಹರ್ಷನಿಗೆ ಜೈಲಿನ ದರ್ಶನ ಮಾಡಿಸಿದ ವರು
ಕನ್ನಡತಿ ಸೀರಿಯಲ್‌ನಲ್ಲಿ ಹೀರೋ ಹರ್ಷನನ್ನು ವರೂಧಿನಿ ಜೈಲಿನಲ್ಲಿ ಹಾಕಿದ್ದಾಳಾ? ಅದು ಹೇಗೆ?
ಕನ್ನಡತಿ ಧಾರಾವಾಹಿಗೆ ಜನಪ್ರಿಯತೆ ಹೆಚ್ಚುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗೋ ಈ ಸೀರಿಯಲ್‌ಗೆ ಯುವಕ ಯುವತಿಯರೂ ಮಾರು ಹೋಗಿದ್ದಾರೆ. ಈ ಕಾರಣಕ್ಕೆ ಆಂಟಿಯರು ಮಾತ್ರ ಸೀರಿಯಲ್ ನೋಡೋದು ಅನ್ನೋ ಹಣೆಪಟ್ಟಿಯಿಂದ ಕನ್ನಡತಿ ಹೊರಬಂದಿದ್ದಾಳೆ.
ಯುಗಾದಿ ಮುಗಿದು ಎರಡು ದಿನ ಆದರೂ ಕನ್ನಡತಿ ಸೀರಿಯಲ್‌ನಲ್ಲಿ ಯುಗಾದಿ ಇನ್ನೂ ನಡೀತಾನೇ ಇದೆ. ರತ್ನಮಾಲಾ ಅವರ ಕುಟುಂಬ ಭುವಿ ಮನೆಯಲ್ಲಿ ಯುಗಾದಿ ಸೆಲೆಬ್ರೇಶನ್ ಮಾಡ್ತಿದೆ. ಈ ಟೈಮ್‌ನಲ್ಲಿ ಹರ್ಷ ಶುರುವಿಂದಲೇ ಒಂದಲ್ಲೊಂದು ಎಡವಟ್ಟಿಗೆ ಗುರಿಯಾಗ್ತಾ ಇದ್ದಾನೆ. ಶುರುವಿನಲ್ಲಿ ಭುವಿ ಯುಗಾದಿ ದಿನ ನಮ್ಮನೇಲೇ ಊಟ ಮಾಡ್ಬೇಕು ಅಂದಾಗ ಹರ್ಷ ಖುಷಿಯಿಂದ ಒಪ್ಪಿಕೊಂಡಿದ್ದಾನೆ. ಈ ನಡುವೆ ರತ್ನಮಾಲಾ ಅವರು ನಾವು ಈ ಸಲದ ಯುಗಾದಿಯನ್ನು ಒಬ್ಬ ಸ್ಪೆಶಲ್ ವ್ಯಕ್ತಿಯ ಮನೆಯಲ್ಲಿ ಸೆಲೆಬ್ರೇಟ್ ಮಾಡೋದು ಅಂತ ಹೇಳಿದಾಗ ಹರ್ಷ ತಾನು ಮಾತ್ರ ಬರೋದಿಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಕೊನೆಗೂ ಇಬ್ಬರ ಗುರಿಯೂ ಭುವಿಯ ಮನೆಯೇ ಅಂತ ಗೊತ್ತಾದಾಗ ಪೆಚ್ಚಾಗೋ ಸರದಿ ಹರ್ಷನದು.
ಇನ್ನು ಭುವಿಯ ಹಬ್ಬದಡುಗೆಗೆ ಸಹಾಯ ಆಗಲಿ ಅಂತ ಪಾತ್ರೆ ಕೊಡೋ ನೆವದಲ್ಲಿ ತಂಗಿ ಜೊತೆಗೆ ಎಲ್ಲರಿಗಿಂತ ಮೊದಲೇ ಭುವಿಯ ಮನೆಗೆ ಬಂದಿದ್ದಾನೆ ಹರ್ಷ. ಹೋಳಿಗೆ ಮಾಡುವ ಇವರಿಬ್ಬರನ್ನೂ ಒಂದು ಮಾಡೋ ಪ್ಲಾನ್ ಹರ್ಷನ ತಂಗಿ ಸುಚಿಯದ್ದು. ಭುವಿಗೆ ಹೋಳಿಗೆ ಮಾಡೋಕೆ ಹೆಲ್ಪ್ ಮಾಡೋ ನೆವದಲ್ಲಿ ಕಿಚನ್ ಗೆ ಬರೋ ಹರ್ಷ ಮಾಡೋ ಯಡವಟ್ಟು ಒಂದೆರಡಲ್ಲ. ಹರ್ಷನ ಮೊಟ್ಟ ಮೊದಲ ಹೋಳಿಗೆ ಪ್ರಯೋಗ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಗಿಸಿದ್ದು ಸುಳ್ಳಲ್ಲ. ಹರ್ಷನ ತುಂಟಾಟ, ಭುವಿಯ ಹುಸಿ ಮುನಿಸು ಎರಡೂ ಸಾಕಷ್ಟು ಜನರ ಮೆಚ್ಚುಗೆ ಪಡೆದವು. ಆದರೆ ಇದನ್ನೇ ನೆವ ಮಾಡಿಕೊಂಡು ಹರ್ಷ ಹಾರ್ಟ್ ಶೇಪ್‌ನಲ್ಲಿ ಹೋಳಿಗೆ ಮಾಡಿ ಭುವಿಯ ಕೈಗಿಡುತ್ತಾನೆ. ಆದರೆ ಅದೇ ಟೈಮ್‌ನಲ್ಲಿ ವರೂಧಿನಿ ಎಂಟ್ರಿ ಕೊಟ್ಟು, ಎಲ್ಲ ಗಡಿಬಿಡಿಯಾಗಿ ಹರ್ಷನ ಪ್ರೊಪೋಸ್ ಮಾಡೋ ಪ್ಲಾನ್ ಯಕ್ಕುಟ್ಟು ಹೋಗುತ್ತೆ. ಹರ್ಷ ಮಾಡೋ ಹೋಳಿಗೆಯನ್ನು ಆಕಾಶದಲ್ಲಿರುವ ಮೋಡಗಳ ಶೇಪ್ ಗೆ ಹೋಲಿಕೆ ಮಾಡೋ ಭುವಿ ಈ ಗಡಿಬಿಡಿಯಲ್ಲಿ ಆತನ ಪ್ರೇಮ ನಿವೇದನೆಯನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗುತ್ತಾಳೆ.
ಆರಾಧ್ಯ ಮೀಡಿಯಾದವರನ್ನು ಹ್ಯಾಂಡಲ್ ಮಾಡುವ ರೀತಿ ಇದು! ...
ಆದರೆ ಛಲ ಬಿಡದ ತ್ರಿವಿಕ್ರಮನಂತೆ ಹರ್ಷನ ಹಠ ಮುಂದುವರಿದಿದೆ. ಯುಗಾದಿ ಹಬ್ಬದ ಪಂಚಾಗ ಶ್ರವಣದ ಬಳಿಕ ಎಲ್ಲರೆದುರಲ್ಲೇ ತನ್ನ ಮದುವೆಯ ಅನೌನ್ಸ್ ಮೆಂಟ್ ಮಾಡುತ್ತಾನೆ ಹರ್ಷ. ಭುವಿ ತಲೆತಗ್ಗಿಸಿದರೆ, ವರೂ ತನ್ನ ಹೀರೋ ಎಲ್ಲಿ ಕೈತಪ್ಪುವನೋ ಅನ್ನೋ ಭೀತಿಯಲ್ಲಿ ಮುಳುಗಿದ್ದಾಳೆ. ಇದೇ ಟೈಮ್‌ಗೆ ವರೂಧಿನಿ ಆತಂಕವನ್ನು ಭಯ, ಉದ್ವೇಗವಾಗಿ ಪರಿವರ್ತಿಸಿದ್ದಾಳೆ ಸಾನಿಯಾ. ಇಂಥ ಕೆಲಸ ಮಾಡಿ ಮಜಾ ನೋಡೋ ತನ್ನ ಮನಸ್ಥಿತಿಯನ್ನು ಮುಂದುವರಿಸಿದ್ದಾಳೆ. ವರೂ ಹೇಗೆಲ್ಲ ಶೇಪ್‌ಔಟ್ ಮಾಡಿದರೂ ಬಿಡದೇ ಹೀರೋ ಹರ್ಷ ವರೂ ಕೈ ಬಿಡುತ್ತಿರುವುದನ್ನು ಮನದಟ್ಟು ಮಾಡುತ್ತಾಳೆ.
ಬೈಕರ್ಸ್ ಸ್ವರ್ಗ್ ಲಡಾಕ್‌ನಲ್ಲಿ ನಿಖಿಲ್‌ಕುಮಾರ್..! ...
ಇತ್ತ ಹರ್ಷ ಮದ್ವೆ ಬಗ್ಗೆ ಅನೌನ್ಸ್ ಮಾಡಿದ ಬಳಿಕ ಈ ವಿಚಾರವನ್ನು ಭುವಿಯ ಮುಂದಿಡುತ್ತಾನೆ. ಆಕೆ ಕೆಲಸದ ಗಡಿಬಿಡಿಯಲ್ಲೇ ರೆಡಿ ಅಂದುಬಿಡುತ್ತಾಳೆ. ಅದನ್ನೇ ಮದ್ವೆ ರೆಡಿ ಅಂತ ತನಗೆ ಬೇಕಾದಂತೆ ಬದಲಿಸಿಕೊಳ್ಳೋ ಜಾಣ ಹರ್ಷ. ಆದರೆ ಈ ಅಪಾಯದ ಸುಳಿವು ಸಿಕ್ಕಿ ಹರ್ಷನನ್ನು ಹಿಂಬಾಲಿಸಿಕೊಂಡು ಬರುವ ವರೂಗೆ ಆತ ಬಾತ್‌ರೂಮ್ ಸೇರಿಕೊಂಡಿದ್ದು, ಒಳಗೆ ಆತ ಮಾತಾಡೋದು ಕೇಳದಿರೋದು ಅಸಹನೆ ಹೆಚ್ಚಿಸುತ್ತೆ. ಒಳಗಡೆಯಿಂದ ಲಾಕ್ ಮಾಡಿರುವ ರೂಮ್‌ಅನ್ನು ಹೊರಗಿಂದ ಲಾಕ್ ಮಾಡಿ ಕೀ ಅಲ್ಲೇ ಬಿಟ್ಟು ಬರುತ್ತಾಳೆ ವರೂ. ಅಲ್ಲಿಗೆ ಹರ್ಷನಿಗೆ ಜೈಲುವಾಸ. ಹರ್ಷ ಹೊರಗೆ ಬರಲು ರೂಮ್ ನಾಕ್ ಮಾಡುವಾಗಲೇ ಅತ್ತ ಸಾನಿಯಾ ಬರುತ್ತಾಳೆ. ಬಾಗಿಲಿಗೆ ಸಿಕ್ಕಿಕೊಂಡಿದ್ದ ಕೀಯನ್ನು ತೆಗೆದು ಹರ್ಷ ಸುಲಭಕ್ಕೆ ಆಚೆ ಬರದಂತೆ ಮಾಡುತ್ತಾಳೆ.
ಹರ್ಷನನ್ನು ಹೊರತರಲು ತನ್ನ ಸೀರೆ ಪಿನ್‌ಅನ್ನೇ ಕೀಯಾಗಿಸಿ ಬಾಗಿಲು ತೆಗೆಯುವಲ್ಲಿ ಭುವಿ ಸಫಲಳಾಗ್ತಾಳೆ. ಹರ್ಷ ಕೊನೆಗೂ ಜೈಲಿಂದ ಹೊರಬರ್ತಾನೆ.
ಈ ವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಇಲ್ಲ, ಮತ್ತ್ಯಾರು ? ...