ಸಾಗರ್‌ ಜೊತೆ ಸುತ್ತಾಡುತ್ತಿರುವುದನ್ನು ಜನ ನೋಡಿದ್ದಾರೆ; ರಿಲೇಷನ್‌ಶಿಪ್ ಅಫೀಶಿಯಲ್ ಮಾಡಲು ಕಾರಣ ಬಿಚ್ಚಿಟ್ಟ ರಂಜನಿ ರಾಘವನ್!

ಲವ್‌ವಲ್ಲಿ ಬಿದ್ದೇ ಬಿಟ್ಟರು ರಂಜನಿ ರಾಘವನ್. ಕೈ ಕೈ ಹಿಡಿದು ರಸ್ತೆಯಲ್ಲಿ ಓಡಾಡುತ್ತಿರುವ ಕಂಡು ಹಿಡಿದ ಜನರು....ಗಾಸಿಪ್‌ಗೆ ಬ್ರೇಕ್ ಹಾಕಲು ಫೋಟೋ ಹಂಚಿಕೊಂಡ ನಟಿ....
 

Kannadathi Ranjani Raghavan about relationship with Sagar bharadwaj vcs

ಕನ್ನಡ ಕಿರುತೆರೆಯ ಅಪ್ಪಟ ಕನ್ನಡತಿ ಎನ್ನುವ ಕಿರೀಟ ಪಡೆದಿರುವ ರಂಜನಿ ರಾಘವನ್‌ ಕೆಲವು ದಿನಗಳ ಹಿಂದೆ ತಮ್ಮ ಬಾಳ ಸಂಗಾತಿ ಆಗಲಿರುವ ಸಾಗರ್‌ ಭಾರದ್ವಾಜ್ ಫೋಟೋ ಹಂಚಿಕೊಂಡರು. ಕೇವಲ ಒಂದೇ ಫೋಟೋದಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ ಈ ಜೋಡಿ ಬಗ್ಗೆ ಹಲವರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ. ಬೆಂಗಳೂರಿನ ಪ್ರೈವೆಟ್ ಬ್ಯಾಂಕ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಸಾಗರ್ ಭಾರದ್ವಾಜ್‌ ಮತ್ತು ರಂಜನಿ ಹಲವು ವರ್ಷಗಳಿಂದ ಸ್ನೇಹಿತರು. ' ಹಲವು ವರ್ಷಗಳಿಂದ ಸಾಗರ್ ನನ್ನ ಸ್ನೇಹಿತರು ಹೀಗಾಗಿ ನನ್ನ ಜರ್ನಿಯನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ. ನನ್ನ ಜೀವನದಲ್ಲಿ ನಡೆದಿರುವ ಒಳ್ಳೆಯ ಘಟನೆ ಅಂದ್ರೆ ಸಾಗರ್‌ ಸಿಕ್ಕಿರುವುದು. ಸ್ಪೂರ್ಟ್ಸ್‌ ಪರ್ಸನ್ ಆಗಿರುವ ಸಾಗರ್‌ಗೆ ಸೈಕಲಿಂಗ್, ರೈಡಿಂಗ್ ಮತ್ತು ಹೈಕಿಂಗ್‌ ಆಕ್ಟಿವಿಟಿಯಲ್ಲಿ ತುಂಬಾ ಇಂಟ್ರೆಸ್ಟ್‌ ಇದೆ' ಎಂದು ರಂಜನಿ ಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ನಮ್ಮ ರಿಲೇಷನ್‌ಶಿಪ್‌ ಸ್ಟೇಟಸ್‌ನ ರಿವೀಲ್ ಮಾಡಲು ಕಾರಣವಿದೆ...ನಾವಿಬ್ಬರು ಒಟ್ಟಿಗೆ ಓಡಾಡುತ್ತಿರುವುದನ್ನು ಹಲವು ನೋಡಿದ್ದಾರೆ..ಗೊಂದಲ ಸೃಷ್ಟಿ ಆಗುವ ಮುನ್ನ ನಾನೇ ರಿವೀಲ್ ಮಾಡಿಬಿಟ್ಟರೆ ನೆಮ್ಮದಿಯಿಂದ ಓಡಾಡಬಹುದು ಅನ್ನೋ ಲೆಕ್ಕಾಚಾರ.  ಸಾಗರ್ ಮತ್ತು ನಾನು ಶೀಘ್ರದಲ್ಲಿ ಒಟ್ಟಿಗೆ ಜೀವನ ಆರಂಭಿಸುತ್ತೀವಿ ಎಂದು ಖುಷಿಯಲ್ಲಿ ಇದ್ದಾರೆ ಪೋಷಕರು' ಎಂದು ರಂಜನಿ ಹೇಳಿದ್ದಾರೆ.

ತರುಣ್- ಸೋನಲ್ ಚರ್ಚ್ ವೆಡ್ಡಿಂಗ್ ಫೋಟೋ ವೈರಲ್; ಮಂಗಳೂರಿಗೆ ಕಾಲಿಡುತ್ತಿದ್ದಂತೆ ಹೇರ್‌ಸ್ಟೈಲ್‌ ಬದಲಾಯಿಸಿದ ನಿರ್ದೇಶಕ!

'ಶೀಘ್ರದಲ್ಲಿ ಮದುವೆ ಮಾಡಿಕೊಳ್ಳುವ ಪ್ಲ್ಯಾನ್‌ ನಮಗಿಲ್ಲ ನಾವು ಲೈಫ್‌ನ ಎಕ್ಸ್‌ಪ್ಲೋರ್ ಮಾಡಬೇಕು ಅಂದುಕೊಂಡಿದ್ದೀವಿ. ಸದ್ಯಕ್ಕೆ ನಮ್ಮಿಬ್ಬರ ವೃತ್ತಿ ಜೀವನದ ಮೇಲೆ ಗಮನ ಹರಿಸುತ್ತಿದ್ದೀವಿ. ನಮ್ಮ ಪೋಷಕರ ಜೊತೆ ಕುಳಿತುಕೊಂಡು ಚರ್ಚೆ ಮಾಡಿ ಮದುವೆ ಬಗ್ಗೆ ನಿರ್ಧಾರ ಮಾಡುತ್ತೀವಿ' ಎಂದು ರಂಜನಿ ರಾಘವನ್ ಹೇಳಿದ್ದಾರೆ. 

ದುರ್ಯೋಧನ ಪಾತ್ರವೇ ದರ್ಶನ್ ಅಹಂಕಾರಕ್ಕೆ ಕಾರಣ ಎಂದ ಹಳ್ಳಿ ಜನ?; ಸರ್ಪ ತಿಲಕದಿಂದ ತಪ್ಪದ ಸಂಕಷ್ಟ!

ಸದ್ಯ ಬರವಣೆಗೆಯಲ್ಲಿ ತೊಡಗಿಸಿಕೊಂಡಿರುವ ರಂಜನಿ ರಾಘವನ್ ಯಾವ ಸಿನಿಮಾ ಅಥವಾ ಸೀರಿಯಲ್ ಪ್ರಾಜೆಕ್ಟ್‌ ಒಪ್ಪಿಕೊಂಡಿಲ್ಲ. 

Latest Videos
Follow Us:
Download App:
  • android
  • ios