ಜನಪ್ರಿಯ ಧಾರವಾಹಿ ಕನ್ನಡತಿಯ ನಟ, ಹರ್ಷ ಯಾರಿಗೆ ಗೊತ್ತಿಲ್ಲ ಹೇಳಿ..? ಸದ್ಯ ಯವತಿಯರ ನೆಚ್ಚಿನ ಕಿರುತೆರೆ ನಟ ಇವರು. ಕನ್ನಡತಿಯ ಮೂಲಕ ಜನಪ್ರಿಯರಾಗುತ್ತಿರುವ ಕಿರಣ್ ರಾಜ್ ಮಜಾಭಾರತ ವೇದಿಕೆಯಲ್ಲಿ ಕಣ್ಣೀರಾಗಿದ್ದಾರೆ.

ಕನ್ನಡತಿ ತಂಡ ಇತ್ತೀಚೆಗಷ್ಟೇ ಮಜಾಭಾರತದಲ್ಲಿ ಕಾಣಿಸಿಕೊಂಡಿತ್ತು. ಈ ಸಂದರ್ಭ ನಟ ಕಿರಣ್ ರಾಜ್ ಅವರ ಅಮ್ಮ ವಿಡಿಯೋ ಮೂಲಕ ಮಾತನಾಡಿದ್ದರು.

ಕನ್ನಡತಿ ನಟನಿಗೆ ಬಂತು ರಿಯಲ್ ಅಮ್ಮನ ಪತ್ರ: ಕಣ್ಣೀರಾದ ಹರ್ಷ..!

ಈ ಸಂದರ್ಭ ಅವರು ಅಚ್ಚರಿಯ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಬೆಳೆದ ಹರ್ಷ ಬರೀ ಹಿಂದಿಯನ್ನೇ ಮಾತನಾಡುತ್ತಿದ್ದರಂತೆ. ಅವರ ತಂದೆ ಕನ್ನಡ ಮಾತಾಡು ಎಂದು ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಕಿರಣ್ ಅಮ್ಮ.

ಹಿಂದಿಯಲ್ಲೇ ಮಾತನಾಡುತ್ತಿದ್ದ, ಹಿಂದಿಯೇ ಮಾತನಾಡುತ್ತಿದ್ದ ಜನರ ಮಧ್ಯೆ ಬೆಳೆದ ಹರ್ಷ ಮನೆಯವರೊಂದಿಗೂ ಮಾತನಾಡುತ್ತಿದ್ದದ್ದು ಹಿಂದಿಯಲ್ಲೇ.

ಭುವಿಯ ಸಾಂಗತ್ಯದಲ್ಲಿ ಮಗುವಾಗಿ ಮಲಗಿದ ಹರ್ಷ

ಹಾಗಿದ್ದೂ ನಟ ಕಿರಣ್ ರಾಜ್ ಕನ್ನಡ ಧಾರವಾಹಿಯಲ್ಲಿ ನಟಿಸಿ ಜನಮೆಚ್ಚಿದ ನಟನಾಗಿ ಹೊರಹೊಮ್ಮಿದ್ದು ವಿಶೇಷ. ಅಮ್ಮನ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಕಣ್ಣೀರಾಗಿದ್ದಾರೆ ಹರ್ಷ.

 
 
 
 
 
 
 
 
 
 
 
 
 
 
 

A post shared by @artists_galary