ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ಕನ್ನಡ ಪಾಠದ ಜೊತೆ ಹರ್ಷ ಭುವಿಯ ಕ್ಯೂಟ್ ರೊಮ್ಯಾನ್ಸ್ ಸ್ಟಾರ್ಟ್ ಆಗಿದೆ.

ಡೇಟ್‌ಗೆ ಹೋಗಿದ್ದ ಬಿಂದುವನ್ನು ಹುಡುಕಿಕೊಂಡು ಹೋದ ಹರ್ಷ ಮತ್ತು ಭುವಿ ಕಾರಿನಲ್ಲೇ ಉಳಿದುಕೊಂಡಿದ್ದಾರೆ. ಹರ್ಷ ಟ್ಯಾಟೂ ಹಾಕಿಸಿಕೊಂಡು ಜ್ವರದ ಮಧ್ಯೆಯೂ ಬಿಂದುವನ್ನು ಹುಡುಕಲು ಹೊರಟಿದ್ದ.

ಇದೀಗ ಹರ್ಷ ಮತ್ತು ಭುವಿ ಇಬ್ಬರೂ ಜೊತೆಜೊತೆಗೇ ಕಾರಿನಲ್ಲಿ ಮನೆಗೆ ಹೊರಟಿದ್ದಾರೆ. ದಾರಿ ಮಧ್ಯೆ ಭುವಿ ಡ್ರೈವ್ ಮಾಡುತ್ತಾಳೆ. ಹರ್ಷ ಜ್ವರದ ಮತ್ತಿಗೂ ಮಗುವಾಗಿ ಮಲಗಿಬಿಡುತ್ತಾನೆ.

ಹರ್ಷನ ಎದೆ ಮೇಲೆ ಭುವಿ! ಈ ಜೋಡಿಯನ್ನು ಯಾರೂ ಬೇರೆ ಮಾಡೋಕಾಗಲ್ಲ

ಹರ್ಷನನ್ನು ಸರಿಯಾಗಿ ಮಲಗುವಂತೆ ಮಾಡೋ ಭುವಿಯ ತೋಳನ್ನೇ ಹಿಡಿದು ಮಲಗುತ್ತಾನೆ ಹರ್ಷ. ಭುವಿಯ ಭುಜದ ಮೇಲೆ ತಲೆಇಟ್ಟು ಸುಖವಾಗಿ ನಿದ್ರಿಸುತ್ತಾನೆ ಹರ್ಷ.

ಇತ್ತ ಭುವಿ ಚಡಪಡಿಕೆ, ಹರ್ಷನನ್ನು ಎಬ್ಬಿಸಲೂ ಆಗದೆ, ಅತ್ತ ತಳ್ಳಿ ಮಲಗಿಸಲೂ ಆಗದೆ ಗೊಂದಲದಲ್ಲಿರುತ್ತಾಳೆ. ನಂತರ ಹಾಗೆಯೇ ಆಕೆಯೂ ನಿದ್ರೆಗೆ ಜಾರುತ್ತಾಳೆ. ಎಚ್ಚರವಾದಾಗ ಹೇಗಿರುತ್ತೆ ಇವರ ರಿಯಾಕ್ಷನ್..? ಭುವಿ ನಾಚಿಕೊಂಡರೆ, ಹರ್ಷ ನಸುನಗಬಹುದು ಅಲ್ವಾ..? ಏನಾಗುತ್ತೆ..? ಕಾದು ನೋಡೋಣ

View post on Instagram