ಕಿರುತೆರೆ ನಟಿ ಚಿತ್ಕಲಾ ಬಿರಾದಾರ್ ಈಗ ಹರ್ಷನಿಗೆ ಮಾತ್ರವಲ್ಲ, ಕನ್ನಡಿಗರ ನೆಚ್ಚಿನ ಅಮ್ಮಮ್ಮ ಆಗಿದ್ದಾರೆ. ರತ್ನಮಾಲಾ ಪಾತ್ರದ ಮೂಲಕ ಕಮಾಲ್ ಮಾಡ್ತಿರೋ ಚಿತ್ಕಲಾ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್.

ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ ಈಕೆ. ನಟಿ ಚಿತ್ಕಲಾ ರಘುರಾಮ್ ಎಂಬ ಆನೆಯ ಜೊತೆ ಸಂಭಾಷಣೆ ನಡೆಸಿರೋ ವಿಡಿಯೋ ಒಂದನ್ನು ಶೇರ್ ಮಾಡ್ಕೊಂಡಿದ್ದಾರೆ.

'ಕನ್ನಡತಿ' ರತ್ನಮಾಲಾ ರಿಯಲ್‌ ಲೈಫ್‌ನಲ್ಲಿ ಆಂಗ್ಲ ಉಪನ್ಯಾಸಕಿ; ಚಿತ್ಕಲಾ ಬಿರಾದರ್ ಜರ್ನಿ!

ದೂರದಲ್ಲಿ ನಿಂತು ರಘುರಾಮ್ ಎಂದು ಪ್ರೀತಿಯಿಂದ ಕರೆಯುತ್ತಾರೆ ಚಿತ್ಕಲಾ. ರಘುರಾಮ್ ಹೇಗೆ ಪ್ರತಿಕ್ರಿಯಿಸ್ತಾನೆ ನೋಡಿ ಎಂದು ಕ್ಯಾಪ್ಶನ್ ಕೊಟ್ಟು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಸದ್ಯ ಕನ್ನಡತಿ ನಟಿ ತ್ರಿಬಲ್ ರೈಡಿಂಗ್, ಫ್ಯಾಂಟಮ್, ವಸಿಷ್ಠ ಸಿಂಹ, ಕಾಲಚಕ್ರ, ರಾಗಭೈರವಿ, ಪ್ರೇಮಂ ಪೂಜ್ಯಂ, ವಿಷ್ಣು ಪ್ರಿಯ ಸಿನಿಮಾಗಳಲ್ಲಿ ಫೇಮಸ್ ಕಲಾವಿದರೊಂದಿಗೆ ನಟಿಸುತ್ತಿದ್ದಾರೆ.