ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್‌ ಧಾರಾವಾಹಿ 'ಕನ್ನಡತಿ' ವಿಭಿನ್ನ ಪಾತ್ರಗಳ ಮೂಲಕ, ಕನ್ನಡ ಭಾಷಾ ಪ್ರೇಮದ ಮೂಲಕ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಮುಖ್ಯ ಪಾತ್ರಧಾರಿಯಾಗಿ ನಟಿ ಚಿತ್ಕಲಾ ಬಿರಾದಾರ್‌ ಪರ್ಫೆಕ್ಟ್‌ ಅಮ್ಮ, ಅತ್ತೆ ಹಾಗೂ ಫ್ರೆಂಡ್‌ ಪಟ್ಟ ಪಡೆದುಕೊಂಡಿದ್ದಾರೆ. ಆದರೆ ಅವರ ರಿಯಲ್ ಲೈಫ್‌ ಹೇಗಿದೆ?

ಸಿಹಿ ಸುದ್ದಿ ಕೊಟ್ಟ 'ನಮ್ಮನೆ ಯುವರಾಣಿ' ತಂಡ; ಮೀರಾ-ಅನಿ ಲವ್‌ಗೆ ಬಿಗ್‌ ಟ್ವಿಸ್ಟ್‌? 

ಹೌದು! ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಟಿ ಚಿತ್ಕಲಾ ಕೆಲ ವರ್ಷಗಳ ಕಾಲ ಆಂಗ್ಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ ಹಾಗೂ ಒಂದು ವರ್ಷ ಜರ್ಮನಿಯಲ್ಲೂ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ.  ಆಪ್ತರ ಒತ್ತಾಯ ಮೇಳೆ ಅಭಿನಯಕ್ಕೆ ಎಂಟ್ರಿಕೊಟ್ಟಿದ್ದಾರೆ. 

 

'ಬಂದೇ ಬರತಾವ ಕಾಲ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ಆದರೆ 'ಅವನು ಮತ್ತು ಶ್ರಾವಣೆ'ಯಲ್ಲಿ ಅಯ್ಯಂಗಾರ್‌ ಪುಷ್ಪವಲ್ಲಿ ಪಾತ್ರ ಹೆಚ್ಚಿನ ಜನ ಪ್ರಿಯತೆ ತಂದುಕೊಟ್ಟಿದೆ. ಚಿತ್ಕಲಾ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. 'ಮದುವೆ ಮನೆ','ಫ್ಯಾಂಟಮ್','ಪ್ರೇಮ ಪೂಜ್ಯಂ' ಹಾಗೂ 'ನಿನ್ನ ಸನಿಹಕೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ. 

‘ಕನ್ನಡತಿ’ ಕಿರಣ್‌ ರಾಜ್‌ ಕೈಲಿ ಆರು ಸಿನಿಮಾ; 'ಎಷ್ಟೇ ಬರಲಿ, ಕಿರುತೆರೆ ಬಿಡಲ್ಲ'!

ಭುವಿಯನ್ನು ಸೊಸೆ ಮಾಡಿಕೊಳ್ಳುವ ಪ್ಲಾನ್‌ನಲ್ಲಿರುವ ರತ್ನಮಾಲಾ ನಿಜಕ್ಕೂ ಸಾನಿಯಾ ಕುತಂತ್ರ ಅರ್ಥ ಮಾಡಿಕೊಳ್ಳುತ್ತಾರಾ? ವರೂಧಿನಿ ಹಾಗೂ ಹರ್ಷ ಒಂದಾಗ ಬಾರದು ಎಂದು ಪ್ಲಾನ್ ಮಾಡುತ್ತಿರುವ ಸಾನಿಯಾ ತಿಳಿಯದೆ ಭುವಿಯನ್ನು ಕೊಲೆ ಮಾಡಿಸುತ್ತಾಳಾ?