ಕನ್ನಡತಿ ನಟಿ ರಂಜನಿ ರಾಘವನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ. ಏನದು..? ಇಲ್ಲಿ ಓದಿ

ಜನರ ನೆಚ್ಚಿನ ಧಾರವಾಹಿ ಕನ್ನಡತಿಯ ನಟಿ ರಂಜನಿ ರಾಘವನ್ ಅವರ ಹೊಸ ಲುಕ್ ನೋಡಿದ್ರಾ..? ಶರ್ಟ್‌ ಧರಿಸಿ, ಕೈಯಲ್ಲೊಂದು ಊಟದ ಬುತ್ತಿ ಹಿಡಿದು ಅಪ್ಪಟ ಗ್ರಾಮೀಣ ಮಹಿಳೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಈಕೆ.

ಅರೆ ರಂಜನಿ ಮತ್ತೆ ಯಾವುದಾದರೂ ಹೊಸ ಸಿನಿಮಾ ಮಾಡೋಕೆ ಹೊರಟಿದ್ದಾರಾ ಅಂತ ಕೇಳಬೇಡಿ. ಈ ಹೊಸ ಲುಕ್ ಉದ್ಯೋಗ ಖಾತ್ರಿ ಯೋಜನೆಯ ಪ್ರಮೋಷನ್‌ನ್ನದ್ದು. ನಟಿ ಸರ್ಕಾರದ ಜೊತೆ ಕೈಜೋಡಿಸಿ ನರೇಗಾ ಕೆಲಸವನ್ನು ಪ್ರೋತ್ಸಾಹಿಸಿದ್ದಾರೆ.

ಕನ್ನಡತಿ ರಂಜನಿಯ ಪೆನ್ಸಿಲ್ ಸ್ಕೆಚ್: ಥ್ಯಾಂಕ್ಸ್ ಎಂದ ಕನ್ನಡ ಟೀಚರ್

ಮಳೆ ಇಲ್ಲದೆ ಹಳ್ಳಿ ಜನ ಪೇಟೆ ಕಡೆಗೆ ಮುಖ ಮಾಡುವುದನ್ನು ನೋಡುವ ರಂಜನಿ ಅವರನ್ನು ತಡೆದು ನರೇಗಾ ಯೋಜನೆಯಡಿ ವರ್ಷದಲ್ಲಿ 100 ಉದ್ಯೋಗ ಲಭಿಸಲಿದ್ದು, ಪುರುಷರಿಗೆ ನೀಡುವಂತೆ ಸಮಾನ ವೇತನ ನೀಡಲಾಗುತ್ತದೆ ಎಂದು ಮನವರಿಕೆ ಮಾಡುತ್ತಾರೆ.

ನರೇಗಾ ಯೋಜನೆಯನ್ನು ಪ್ರೋತ್ಸಾಹಿಸಿ ಗ್ರಾಮೀಣ ಜನರು ಇದರ ಪ್ರಯೋಜನ ಪಡೆಯುವಂತಾಗಲು ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ ರಂಜನಿ. ಇದಕ್ಕಾಗಿ ಅಪ್ಪಟ ಗ್ರಾಮೀಣ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

View post on Instagram