3 ದಿನಗಳಲ್ಲಿ ಕ್ಲಾರಿಟಿ ಕೊಡುತ್ತೀನಿ; ಠಾಣೆ ಮೆಟ್ಟಿಲೇರಿದ ಮೇಲೆ ಉಲ್ಟಾ ಹೊಡೆದ್ರಾ ವರ್ಷ ಕಾವೇರಿ?

ಪೊಲೀಸ್ ಠಾಣೆ ಮೆಟ್ಟಿಲೇರಿದ ವರ್ಷ ಕಾವೇರಿ. ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದಂತೆ ಮೂರು ದಿನ ಟೈಂ ಕೊಡಿ ಎಂದು ಕೇಳಿದ್ದು ಯಾಕೆ?

Dont comment on fake news says Varsha Kaveri about Varun Aradya complaint vcs

ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಜನಪ್ರಿಯತೆ ಪಡೆದಿರುವ ವರ್ಷ ಕಾವೇರಿ ನಿನ್ನೆ ತಮ್ಮ ಮಾಜಿ ಬಾಯ್‌ಫ್ರೆಂಡ್ ವರುಣ್ ಆರಾಧ್ಯ ವಿರುದ್ಧ ದೂರು ನೀಡಿದ್ದರು. 2019ರಿಂದ ವರ್ಷ ಕಾವೇರಿ ಮತ್ತು ವರುಣ್ ಅರಾಧ್ಯ ಪ್ರೀತಿಸುತ್ತಿದ್ದರು...ಎಲ್ಲಿ ನೋಡಿದರೂ ಅವರದ್ದೇ ರೀಲ್ಸ್ ಮತ್ತು ವಿಡಿಯೋ. ಒಂದು ಸಮಯದಲ್ಲಿ ಇವರಿಬ್ಬರ ಖಾಸಗಿ ವಿಡಿಯೋ ವೈರಲ್ ಆಗಿತ್ತು ಎಂದು ಟ್ರೋಲ್ ಪೇಜ್‌ಗಳು ಫೋಟೋ ವೈರಲ್ ಮಾಡಿದ್ದರು, ಆಗಲೂ ನಾವಲ್ಲ ನಾವು ಆ ರೀತಿ ಮಾಡುವುದಿಲ್ಲ ನಮ್ಮ ಬೆಳವಣಿಗೆಯನ್ನು ಯಾರೋ ಸಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. 

2023ರಲ್ಲಿ ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ ಬ್ರೇಕಪ್ ಮಾಡಿಕೊಂಡರು. ಇದಕ್ಕೆ ಕಾರಣವಾಗಿದ್ದು ಸ್ನೇಹಿತೆ ಎಂಬ ಸ್ಪಷ್ಟನೆ ಕೂಡ ವರ್ಷ ನೀಡಿದ್ದರು. ಅಲ್ಲಿಂದ ವರುಣ್ ತಮ್ಮ ಹೊಸ ಪ್ರೇಯಸಿ ಫೋಟೋವನ್ನು ಎಲ್ಲೂ ರಿವೀಲ್ ಮಾಡಲಿಲ್ಲ. ಸೀಕ್ರೆಟ್ ಆಗಿ ತಮ್ಮ ಲವ್ ಮುಂದುವರೆಸಿಕೊಂಡು ಹೋಗುತ್ತಿದ್ದರೂ ವರ್ಷ ಕಾವೇರಿಗೆ ಟಾರ್ಚರ್ ಕಡಿಮೆ ಆಗಿಲ್ಲ. ಪದೇ ಪದೇ ಫೋನ್ ಮಾಡಿ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುತ್ತೀನಿ, ನೀನು ಮತ್ತೊಬ್ಬರನ್ನು ಇಷ್ಟ ಪಟ್ಟರೆ ಕೊಲೆ ಮಾಡುತ್ತೀನಿ ನೀನು ಯಾರನ್ನು ಮದುವೆ ಆಗಬಾರದು ಎಂದು ಬೆದರಿಕೆ ಹಾಕಿದ್ದರಂತೆ. ಈ ಬಗ್ಗೆ ವರ್ಷ ಕಾವೇರಿ ದೂರು ದಾಖಲಿಸಿದ್ದರು. ಆದರೆ ವರ್ಷ ಈಗ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ವರ್ಷ ಕಾವೇರಿ ಪೋಸ್ಟ್:

'ಸಾಮಾಜಿಕ ಜಾಲತಾಣದಲ್ಲಿ ನೀವು ನೋಡುತ್ತಿರುವುದು ಫೇಕ್ ನ್ಯೂಸ್. ನಾನು ದೂರು ನೀಡಿರುವುದು ನಮ್ಮ ರೀಲ್ಸ್‌ ಮತ್ತು ಫೋಟೋಗಳನ್ನು ಗೂಗಲ್‌ನಿಂದ ಡಿಲೀಟ್ ಮಾಡುವುದಕ್ಕೆ. ದಯವಿಟ್ಟು ಫೇಕ್ ನ್ಯೂಸ್ ಹರಡಿಬೇಡಿ' ಎಂದು ವರ್ಷ ಕಾವೇರಿ ಬರೆದುಕೊಂಡಿದ್ದಾರೆ.

'ಯಾರೆಲ್ಲಾ ಹರಿದಾಡುತ್ತಿರುವ ನ್ಯೂಸ್ ನೋಡಿಕೊಂಡು ಕಾಮೆಂಟ್ ಮಾಡುತ್ತಿದ್ದೀರಿ ದಯವಿಟ್ಟು ಮೂರು ದಿನಗಳ ಕಾಯಬೇಕಿದೆ. ಸ್ಪಷ್ಟವಾಗಿ ಕ್ಲಾರಿಟಿ ಕೊಡಲು ನಿಮ್ಮ ಮುಂದೆ ಬರುತ್ತೀನಿ' ಎಂದು ವರ್ಷ ಹೇಳಿದ್ದಾರೆ. 

ವರುಣ್ ಆರಾಧ್ಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದ ಕಾರಣ ವರ್ಷ ಕಾವೇರಿ ತಮ್ಮ ಮಾತು ಬದಲಾಯಿಸಿದ್ರಾ? ವರ್ಷ ಕಾವೇರಿ ಸರಿ ದಾರಿಯಲ್ಲಿ ಇದ್ದಾರಾ? ವರುಣ್ ಆರಾಧ್ಯ ಹಣದ ಆಸೆಗೆ ಏನ್ ಏನೋ ಮಾಡಲು ಹೊರಟಿದ್ದಾರಾ? ಒಂದು ಚೂರು ಕ್ಲಾರಿಟಿ ಇಲ್ಲದೆ ನೆಟ್ಟಿಗರು ಗರಂ ಆಗಿದ್ದಾರೆ. ಇವರಿಬ್ಬರನ್ನು ಫಾಲೋ ಮಾಡಬಾರದು ಎಂದು ನಿರ್ಧಾರ ಮಾಡುತ್ತಿದ್ದಾರೆ. 

Dont comment on fake news says Varsha Kaveri about Varun Aradya complaint vcs Dont comment on fake news says Varsha Kaveri about Varun Aradya complaint vcs

Latest Videos
Follow Us:
Download App:
  • android
  • ios