ನಾರಾಯಣಾಚಾರ್ ಸೊಸೆ ಬ್ಲೌಸ್ ತುಂಬಾ ಡೀಪ್ ಆಯ್ತು; ಆಗ್ತಿರೋ ಎಡವಟ್ಟಿಗೆ ತುಪ್ಪ ಸುರಿದ ನೆಟ್ಟಿಗರು!
ಸೂಪರ್ ಸೊಸೆ ಸ್ಥಾನ ಪಡೆದುಕೊಳ್ಳಲು ಸಜ್ಜಾದ ಚಾರು.....ಚಾರು-ಚಾರಿ ಮದುವೆಗೆ ವೈಶಾಕಾ ಅಡ್ಡವಾಗುತ್ತಾಳಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ಮದುವೆ ಸನ್ನಿವೇಶ ನಡೆಯುತ್ತಿದೆ. ಚಾರು-ಚಾರಿ ಮದುವೆ ನಡೆಸಲು ಕುಟುಂಬಸ್ಥರು ಮುಂದಾಗಿದ್ದಾರೆ.
ಶಾಸ್ತ್ರ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಳ್ಳದೆ ಬಂದವರನ್ನು ಮನೆಯಲ್ಲಿ ಇರಿಸಿಕೊಂಡಿರುವುದು ತಪ್ಪು ಎಂದು ಊರಿನ ಜನರು ಧ್ವನಿ ಎತ್ತಿದ್ದಾಗ ಇವರಿಬ್ಬರಿಗೆ ಮತ್ತೆ ಮದುವೆ ಮಾಡಲು ಮುಂದಾಗುತ್ತಾರೆ.
ಕುತ್ತಿಗೆಯಲ್ಲಿ ಮೊದಲೇ ತಾಳಿ ಇದ್ದರೂ ಮದುವೆಯಾಗುತ್ತಿರುವ ಚಾರು ವಿರುದ್ಧ ಕುಟುಂಬಸ್ಥರು ಗರಂ ಆಗುತ್ತಾರೆ. ಮೊದಲು ಕಟ್ಟಿರು ತಾಳಿ ತೆಗೆದು ಮದುವೆಯಲ್ಲಿ ಕಟ್ಟುವ ತಾಳಿ ಧರಿಸಬೇಕು ಎಂದು ಹಠ ಮಾಡುತ್ತಾರೆ.
ಈ ಮದುವೆ ಕಾರ್ಯಕ್ರಮದಲ್ಲಿ ಚಾರು ಉರ್ಫ್ ಮೌನಾ ಗುಡ್ಡೆಮನೆ ಗೋಲ್ಡ್ ಬಣ್ಣದ ಸೀರೆ ಮತ್ತು ಗೋಲ್ಡ್ ಬಣ್ಣದ ಬ್ಲೌಸ್ ಧರಿಸುತ್ತಾರೆ.
ಕೈ ತುಂಬಾ ಹಸಿರು ಬಳೆ, ಕುತ್ತಿಗೆಯಲ್ಲಿ ಮೂರ್ನಾಲ್ಕು ಚಿನ್ನದ ಸರ ಅದಕ್ಕೆ ಕಾಂಟ್ರಾಸ್ಟ್ ಕೊಡುವಂತೆ ಕಪ್ಪು ಬಣ್ಣದ ನೆಕ್‌ಲೆಸ್ ಧರಿಸಿದ್ದಾರೆ.
ಬಾಸಿಂಗಾ ಧರಿಸಿದ ಮೇಲೆ ಚಾರು ಮುಖದಲ್ಲಿ ಮದುವೆ ಕಳೆ ಎತ್ತಿ ಕಾಣುತ್ತಿದೆ. ಆದರೆ ನೆಟ್ಟಿಗರ ಗಮನ ಹೋಗಿರುವುದು ಚಾರು ಧರಿಸಿರುವ ಸೀರೆ ಮೇಲೆ.
ಹೌದು! ಚಾರು ಸಾಮಾನ್ಯವಾಗಿ ಸೀರಿಯಲ್‌ನಲ್ಲಿ ಧರಿಸುವ ಬ್ಲೌಸ್‌ಗಳು ತುಂಬಾನೇ ಡಿಫರೆಂಟ್ ಆಗಿರುತ್ತದೆ ಆದರೆ ಮದುವೆಯಲ್ಲೂ ಅಷ್ಟೇ ಡೀಪ್ ಹಾಕಿರುವುದು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಅಲ್ವೇ ಚಾರು ನಿನಗೆ ಮತ್ತೆ ಮದುವೆ ಮಾಡಿಸುತ್ತಿರುವ ಹೆಚ್ಚು..ಅಷ್ಟು ಶಾಸ್ತ್ರ ಸಂಪ್ರದಾಯ ಅನ್ನೋರ ಮನೆಗೆ ಹೋಗುತ್ತಿರುವುದು ಸ್ವಲ್ಪ ಬ್ಲೌಸ್ ಡೀಪ್ ಕಮ್ಮಿ ಮಾಡಿಕೋ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.