Kannada Youtuber Shravan Bro: ನಜರ್‌ ಈಸ್‌ ರಿಯಲ್‌, ದೃಷ್ಟಿ ಆಗುತ್ತೆ ಎಂದು ಹೇಳ್ತಾರಲ್ವಾ? ಅದು ಕನ್ನಡದ ಯುಟ್ಯೂಬರ್‌ ವಿಷಯದಲ್ಲಿ ಸತ್ಯ ಆಗಿದೆ, ಕಾರ್‌ ತಗೊಂಡ ಒಂದು ವಾರಕ್ಕೆ ಅಪಘಾತ ಆಗಿ, ಡ್ಯಾಮೇಜ್‌ ಆಗಿದೆ. ಈ ಬಗ್ಗೆ ಯುಟ್ಯೂಬರ್‌ ಶ್ರವಣ್‌ ಬ್ರೋ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಕನ್ನಡದ ಯುಟ್ಯೂಬರ್‌, ಫಿಟ್‌ನೆಸ್‌ ಕೋಚ್‌ ಶ್ರವಣ್‌ ಬ್ರೋ ಎಂದು ಕರೆಸಿಕೊಳ್ಳುವ ಶ್ರವಣ್‌ ಅವರು ಬೆಂಜ್‌ ಕಾರ್‌ ತಗೊಂಡು ಏಳು ದಿನಗಳು ಆಗಿತ್ತು ಅಷ್ಟೇ. ಯಾರ ದೃಷ್ಟಿ ಬಿತ್ತೋ, ಏನೋ ಕಾರ್‌ ಅಪಘಾತವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Add Asianetnews Kannada as a Preferred SourcegooglePreferred

ಮೂರು ವರ್ಷಗಳ ಬಳಿಕ ಕಾರ್‌ ತಗೊಂಡ್ರು

ಶ್ರವಣ್‌ ಅವರು ( SHRAVAN H RAJANI ) ಬೆಂಜ್‌ ಕಾರ್‌ ತಗೊಂಡಿದ್ದರು, ಆಗ ಕೆಲವರು ಮರ್ಸಿಡೀಸ್ ಬೆಂಜ್‌ಗಿಂತ ಬಿಎಂಡಬ್ಲ್ಯೂ ಕಾರ್‌ ಚೆನ್ನಾಗಿದೆ ಎಂದು ಹೇಳಿದ್ದರು. ಆಗ ನಕ್ಕು ಸುಮ್ಮನಾಗಿದ್ದ ಶ್ರವಣ್‌ ಅವರು ಮೂರು ವರ್ಷಗಳ ಬಳಿಕ ಹೊಸ ಕಾರ್‌ ತಗೊಂಡಿದ್ದಾರೆ.

ಬೆಂಜ್‌ ಜಾರ್‌ ತಗೊಂಡ್ರು!

ಹೌದು, ಯುಟ್ಯೂಬರ್‌ ಶ್ರವಣ್‌ ಅವರು ಬೆಂಜ್‌ ಕಾರ್‌ ತಗೊಂಡಿದ್ದಾರೆ, ಕಳೆದ ಏಳು ದಿನಗಳ ಹಿಂದೆ ಇವರಿಗೆ ಬೆಂಜ್‌ ಡೆಲಿವರಿ ಸಿಕ್ಕಿತ್ತು. ಇದನ್ನು ವಿಡಿಯೋ ಕೂಡ ಮಾಡಿ, ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು.

ಲಕ್ಷುರಿ ಕಾರ್‌ ತಗೊಂಡ್ರು

ಮನೆಯವರ ಸೇಫ್ಟಿ, ಭವಿಷ್ಯದ ಬಗ್ಗೆ ಯೋಚನೆ ಮಾಡಿ ಬಿಎಂಡ್ಬ್ಲ್ಯೂನಂತಹ ಲಕ್ಷುರಿ ಕಾರ್‌ ತಗೊಳ್ಳಿ. ಒಂದು ಸಲ ಸರ್ವೀಸ್‌ ಮಾಡಿಸಲು 60 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿ ಬೇಕಾಗುವುದು ಎಂದು ಶ್ರವಣ್‌ ಹೇಳಿದ್ದಾರೆ.

ಬೆಂಜ್‌ ಕಾರ್‌ ಆಯ್ಕೆ!

ಬೆಂಜ್‌ ಕಾರ್‌ನಲ್ಲಿ ಹಿಂದೆ ಕೂರಲು ತುಂಬ ಜಾಗ ಇದೆ, ನನಗೆ ಡ್ರೈವಿಂಗ್‌ ಮಾಡಲು ಇಷ್ಟ ಇಲ್ಲ, ಹೀಗಾಗಿ ನಾನು ಈ ಕಾರ್‌ ಆಯ್ಕೆ ಮಾಡಿಕೊಂಡೆ ಎಂದು ಶ್ರವಣ್‌ ಅವರು ಹೇಳಿದ್ದರು.

ಲಕ್ಷುರಿ ಕಾರ್‌ಗಳ ಖರೀದಿ

ಕಿಯಾ ತಗೊಂಡ ಬಳಿಕ, ಮರ್ಸಿಡೀಸ್‌ ಕಾರ್‌ ತಗೊಂಡೆ, ಯಾರೋ ಹೇಳಿದರು ಎಂದು ಬೆಂಜ್‌ ಕಾರ್‌ ತಗೊಂಡೆ. ನಾವು ನಿತ್ಯವೂ ಕೆಲಸ ಮಾಡಬೇಕು, ಬೆಳೆಯಬೇಕು, ಆದರೆ ಈ ಆಸೆಗಳು ಮುಗಿಯೋದಿಲ್ಲ, ಇದು ಮನುಷ್ಯನ ಸಹಜ ಸ್ವಭಾವ ಎಂದು ಶ್ರವಣ್‌ ಹೇಳಿದ್ದಾರೆ.

ಅಪಘಾತ ಹೇಗಾಯ್ತು?

ಶ್ರವಣ್‌ ಅವರು ವ್ಲಾಗ್‌ ಮಾಡುತ್ತಿದ್ದರು, ಅದೇ ಟೈಮ್‌ಗೆ ಸರಿಯಾಗಿ ಕಾರ್‌ ಓಡಿಸಿದ್ದರು. ಆ ಬಳಿಕ ಕಾರ್ ಅಪಘಾತವಾಗಿದೆ, ಈ ಅಪಘಾತದಿಂದ ಯಾರಿಗೆ ಏನೂ ಆಗಿಲ್ಲ. “ಮೈನರ್‌ ಆಗಿ ಕಾರ್‌ ಡ್ಯಾಮೇಜ್‌ ಆಗಿದೆ. ನಜರ್‌ ಎನ್ನೋದು ರಿಯಲ್.‌ ಸಮಸ್ಯೆಗಳು ಬಂದಾಗ, ಅದನ್ನು ಪರಿಹರಿಸಿಕೊಂಡು ಮುಂದೆ ಸಾಗಬೇಕು. ಜೀವನ ಅಂದರೆ ಹಾಗೆ, ಸುಲಭವಾಗಿ ಎಲ್ಲದೂ ನಡೆಯೋದಿಲ್ಲ. ಯಾರು ದೃಷ್ಟಿ ಹಾಕಿದ್ರೂ ಏನೋ, ಹೀಗಾಯ್ತು” ಎಂದು ಶ್ರವಣ್‌ ವರು ಬೇಸರ ಹೊರಹಾಕಿದ್ದಾರೆ.

ನಮ್ಮ ದುರಾದೃಷ್ಟ ಎಂದು ಹೇಳಬಹುದು, ನಾವು ಒಳ್ಳೆಯದಾಗಬಾರದು ಎಂದು ಯಾರು ಹೇಳುತ್ತಾರೋ ಅವರಿಗೆ ಖುಷಿಯಾಗುತ್ತದೆ. ಪರ್ಸನಲೀ ಇರಲೀ, ಅಥವಾ ಇನ್ಯಾವುದೋ ಇರಲಿ, ಹಣೆಬರಹ ಅಷ್ಟೇ. ಹೀಗಾಗಿಯೇ ನಾನು ಕ್ಯಾರ್‌ ಮ್ಯಾನೇಜ್‌ ಮಾಡೋಕೆ ಆಗತ್ತೆ ಅಂದ್ರೆ ಮಾತ್ರ ತಗೋಬೇಕು ಎಂದು ಹೇಳಿದ್ದು ಎಂದಿದ್ದಾರೆ.